ಬೆಂಗಳೂರು : ಬೆಂಗಳೂರಿನ ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆ ವತಿಯಿಂದ ಶನಿವಾರ ಪಾರ್ಶ್ವವಾಯು ಜಾಗೃತಿ ಅಭಿಯಾನ ಘೋಷಿಸುವ ಮೂಲಕ ವಿಶ್ವ ಪಾರ್ಶ್ವವಾಯು ದಿನದ ಆಚರಣೆಗೆ ಚಾಲನೆ ನೀಡಿತು. ಭಾರತದಲ್ಲಿ ವ್ಯಾಪಕವಾಗುತ್ತಿರುವ ಪಾರ್ಶ್ವವಾಯು ವಿರುದ್ಧದ ಹೋರಾಟದಲ್ಲಿ ನಿರ್ಣಾಯಕರೆನಿಸಿಕೊಂಡಿರುವ ಆರೋಗ್ಯ ವೃತ್ತಿಪರರು, ಪಾಶ್ವವಾಯುವಿನಿಂದ ಪಾರಾದವರು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಎಲ್ಲರನ್ನು ಯಶಸ್ವಿ ಕಾರ್ಯಕ್ರಮದಲ್ಲಿ ಒಂದುಗೂಡಿಸಲಾಗುತ್ತದೆ.
ಹೊಸ ಅಂಕಿ ಅಂಶಗಳ ಪ್ರಕಾರ ಜಾಗತಿಕವಾಗಿ ಅದರಲ್ಲೂ ಭಾರತದಲ್ಲಿ ಪಾರ್ಶ್ವವಾಯುವಿನ ಸಮಸ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ವಾರ್ಷಿಕವಾಗಿ 1.66 ದಶ ಲಕ್ಷ ಹೊಸ ಪ್ರಕರಣಗಳ ದಾಖಲಾಗುತ್ತಿದ್ದು ಪ್ರತಿ 1,00,000 ಜನರಲ್ಲಿ 86.5 ಸಾವುಗಳು ಸಂಭವಿಸುತ್ತಿವೆ. ಹೀಗೆ ಸ್ಟ್ರೋಕ್, ಭಾರತದಲ್ಲಿ ಅಕಾಲಿಕ ಸಾವಿನ ಪ್ರಕರಣದಲ್ಲಿ ನಾಲ್ಕನೇ ಪ್ರಮುಖ ಕಾರಣವಾಗಿರುವ ಜತೆಗೆ ಅಂಗವೈಕಲ್ಯಕ್ಕೆ ಐದನೇ ಕಾರಣವಾಗಿದೆ.
ಈ ಸಂದರ್ಭದಲ್ಲಿ ಮೆಡಿಕವರ್ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ.ಪೂನಂ ಸಿ ಅವತಾರೆ ಅವರು ಪಾರ್ಶ್ವವಾಯು ತಡೆಯಲ್ಲಿನ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. “ಪಾರ್ಶ್ವವಾಯು ಸಮಸ್ಯೆಯು ಯುವಕರು ಮತ್ತು ವಯಸ್ಕರು ಸೇರಿದಂತೆ ಎಲ್ಲ ವಯೋಮಾನದವರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜೀವನಶೈಲಿ ಹೊಂದಾಣಿಕೆಗಳು ಮತ್ತು ನಿಯಮಿತ ತಪಾಸಣೆಗಳು ಅತ್ಯಗತ್ಯ. ವಿಶೇಷವಾಗಿ ಅಪಾಯ ಹೆಚ್ಚಿರುವ ಜನರಿಗೆ ಸಮಸ್ಯೆ ಬಾಧಿಸದಂತೆ ನೋಡಿಕೊಳ್ಳುವುದಕ್ಕೆ ಮುನ್ನೆಚ್ಚರಿಕೆ ಅಗತ್ಯ ಎಂದು ಹೇಳಿದರು.
ಎಮರ್ಜೆನ್ಸಿ ಮೆಡಿಸಿನ್ ಕನ್ಸಲ್ಟೆಂಟ್ ಡಾ.ಕಲ್ಪಜಿತ್ ಬಾನಿಕ್ ಅವರು ಆರಂಭಿಕ ಎಚ್ಚರಿಕೆಯ ಬಗ್ಗೆ ಮಾತನಾಡಿ , “ಪಾರ್ಶ್ವವಾಯು ಸೂಚನೆ ಕಂಡು ಬಂದ ತಕ್ಷಣವೇ ಆಸ್ಪತ್ರೆಗೆ ದಾಖಲಾಗುವುದನ್ನು ‘ಸುವರ್ಣ ಅವಧಿ’ ಎಂದೇ ಕರೆಯುಲಾಗುತ್ತದೆ .ಈ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಚೇತರಿಕೆಯ ಅವಕಾಶ ಹೆಚ್ಚಿರುತ್ತದೆ ಹಾಗೂ ಗಣನೀಯ ಫಲಿತಾಂಶ ಪಡೆಬಹುದು. ಅದೇ ರೀತಿ ಜೀವ ಉಳಿಸಲು ಮತ್ತು ಜೀವನದ ಗುಣಮಟ್ಟ ಕಾಪಾಡಿಕೊಳ್ಳಲು ತ್ವರಿತ ನಿರ್ಣಯ ಅಗತ್ಯ,” ಎಂದು ಹೇಳಿದರು.
ಕನ್ಸಲ್ಟೆಂಟ್ ನ್ಯೂರೊಸರ್ಜನ್ ಡಾ.ಗಣೇಶ್ ಕೆ.ಮೂರ್ತಿ ಅವರು ಪುನಶ್ಚೇತನದ ಅಗತ್ಯವನ್ನು ಒತ್ತಿ ಹೇಳಿದರು. . “ಪಾರ್ಶ್ವವಾಯು ಬಾಧಿಸಿ ಬದುಕುಳಿದರು ಮರಳಿ ಸ್ವಚ್ಛಂದ ಜೀವನ ನಡೆಸಲು ಪುನಶ್ಚೇತನದ ಅವಧಿ ಪ್ರಮುಖ ಹಂತವಾಗಿದೆ. ಸುಧಾರಿತ ನರಶಸ್ತ್ರಚಿಕಿತ್ಸಾ ವಿಧಾನಗಳೊಂದಿಗೆ ರೋಗಿಗಳ ಜೀವನದ ಗುಣಮಟ್ಟ ಹೆಚ್ಚಿಸುವ ಗುರಿಯನ್ನೂ ನಾವು ಹೊಂದಿರುತ್ತೇವೆ,” ಎಂದು ಹೇಳಿದರು.
ಮೆಡಿಕವರ್ ಆಸ್ಪತ್ರೆಯ ವಿಶೇಷತೆಗಳು
ಪಾರ್ಶ್ವವಾಯು ಸಮಸ್ಯೆ ಪರಿಹಾರ ನೀಡುವ ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಯು ಈ ಕ್ಷೇತ್ರದಲ್ಲಿ ತನ್ನ ಬದ್ಧತೆಯನ್ನು ನಿರಂತರವಾಗಿ ಪ್ರದರ್ಶಿಸುತ್ತಿದೆ. ಪಾಶ್ವವಾಯು ಚಿಕಿತ್ಸೆಗೆಂದೇ ನಿಗದಿ ಮಾಡಲಾದ ಸ್ಟ್ರೋಕ್ ಕ್ಲಿನಿಕ್: ಪ್ರತಿ ಬುಧವಾರ ಮತ್ತು ಗುರುವಾರ ನಡೆಯುವ ಈ ವಿಶೇಷ ಕ್ಲಿನಿಕ್‌ನಲ್ಲಿ ತಜ್ಞ ನರವಿಜ್ಞಾನಿಗಳು ಮತ್ತು ನರಶಸ್ತ್ರಚಿಕಿತ್ಸಕರ ನೇತೃತ್ವದ ತಂಡವು ವೈಯಕ್ತಿಕ ಚಿಕಿತ್ಸಾ ಯೋಜನೆಗಳೊಂದಿಗೆ ಪಾರ್ಶ್ವವಾಯು ಆರೈಕೆ ನೀಡುತ್ತದೆ.
ಪಾರ್ಶ್ವವಾಯು ತಪಾಸಣಾ ಪ್ಯಾಕೇಜ್ : ಈ ಹೊಸ ಪ್ಯಾಕೇಜ್‌ನಲ್ಲಿ ಪಾರ್ಶ್ವವಾಯು ಅಪಾಯದ ಅಂಶಗಳನ್ನು ಗುರುತಿಸಬಹುದು. ಪಾರ್ಶ್ವವಾಯು ಅಪಾಯವನ್ನು ಎದುರಿಸಲು ತಡೆಗಟ್ಟುವ ತಂತ್ರಗಳನ್ನು ಇಲ್ಲಿ ಹೇಳಲಾಗುತ್ತದೆ. ವಿಶ್ವ ಪಾರ್ಶ್ವವಾಯು ದಿನದಂದು ವಾಕಥಾನ್ ಆಯೋಜನೆ: ಅಕ್ಟೋಬರ್ 29 ರಂದು ನಿಗದಿಯಾಗಿರುವ ಈ ವಾಕಥಾನ್ ಪಾರ್ಶ್ವವಾಯು ಜಾಗೃತಿ ಮತ್ತು ತಡೆಗಟ್ಟುವಿಕೆಯ ಕುರಿತು ಜಾಗೃತಿ ಮೂಡಿಸಲು ಸಮುದಾಯವನ್ನು ಒಂದೆಡೆ ಸೇರಿಸುತ್ತದೆ.
ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಯು ಪಾರ್ಶ್ವವಾಯು ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಪಾರ್ಶ್ವವಾಯು ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಪಾರ್ಶ್ವವಾಯು ನಂತರದ ಚೇತರಿಕೆಯ ಪ್ರಕ್ರಿಯೆಗೆ ನೆರವಾಗುತ್ತದೆ. ಇದು ಭಾರತೀಯರ ಮೇಲೆ ಮೇಲೆ ಪಾರ್ಶ್ವವಾಯುವಿನ ವಿನಾಶಕಾರಿ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದ ಶಾಸಕ ರಮೇಶ್ ಜಾರಕಿಹೊಳಿ: ಉಪ ಚುನಾವಣೆಯಲ್ಲಿ ಪ್ರಚಾರ ಮಾಡದಿರಲು ನಿರ್ಧಾರ
ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ : ಬೆಳಗಾವಿಯಲ್ಲಿ ಗೋಮಾಳ ಜಾಗಕ್ಕಾಗಿ ದಲಿತರ ಗುಡಿಸಲುಗಳಿಗೆ ಬೆಂಕಿ!