ಬೆಂಗಳೂರು: ರಾಜ್ಯದಲ್ಲಿ ಉತ್ಪಾದನೆಯಾಗುವ ಔಷಧಗಳು ಸೇರಿದಂತೆ ಸರ್ಕಾರಿ ಔಷಧಾಲಯಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಗರಂ ಆದರು.
ರಾಜ್ಯದ ಮಾರುಕಟ್ಟೆಯಲ್ಲಿ ಸಾಕಷ್ಟು ಕಳಪೆ ಗುಣಮಟ್ಟದ ಔಷಧಿಗಳು ಪೂರೈಕೆ ಆಗುತ್ತಿದೆ. ಯಾರ ಹಂಗು ಇಲ್ಲದೇ ಮನಬಂದಂತೆ ಔಷಧಿಗಳನ್ನ ಜನರ ಮನೆಗೆ ಪೂರೈಸುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ದಷ್ಪರಿಣಾಮ ಬೀರುತ್ತಿದೆ. ಡ್ರಗ್ ಕಂಟ್ರೋಲ್ ಇಲಾಖೆಯ ಮುಖ್ಯ ಉದ್ದೇಶವೇ ಪಬ್ಲಿಕ್ ಹೆಲ್ತ್. ಸಾರ್ವಜನಿಕರ ಆರೋಗ್ಯವನ್ನ ದೃಷ್ಟಿಯಲ್ಲಿಟ್ಟುಕೊಂಡು ಔಷಧಿಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಆದರೆ ಆ ರೀತಿಯ ಕಾರ್ಯವೈಖರಿ ಇಲಾಖೆಯ ಅಧಿಕಾರಿಗಳಿಂದ ಕಂಡುಬರುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.
ಔಷಧಿಗಳ ಗುಣಮಟ್ಟದ ವಿಚಾರದಲ್ಲಿ ಯಾವ ಕ್ರಮಗಳನ್ನ ಕೈಗೊಳ್ಳುತ್ತಿದ್ದೀರಿ ವಿಸ್ತೃತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎಷ್ಟು ಕಳಪೆ ಔಷಧಿಗಳ ತಯಾರಕರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ.. ಯಾವ ಔಷಧಿಗಳನ್ನ ಟೆಸ್ಟಿಂಗ್ ಒಳಪಡಿಸಲಾಗಿದೆ. ಕಳೆಪೆ ಗುಣಮಟ್ಟದ ಔಷಧಿಗಳು ಮಾರುಕಟ್ಟೆಯಲ್ಲಿ ಸಿಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸುವಂತೆ ಡ್ರಗ್ ಕಂಟ್ರೋಲರ್ ಗೆ ಸಚಿವರು ಸೂಚನೆ ನೀಡಿದರು.
ಎಷ್ಟು ಫಾರ್ಮಸಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ವರದಿ ಕೊಡಿ. ಸುಮ್ಮನೆ ಸ್ಪಷೆಲ್ ಡ್ರೈವ್ ಮಾಡುತ್ತಿದ್ದೇವೆ ಎಂದು ಭಾಷಣ ಬಿಗಿಯಬೇಡಿ. ನೀವು ಕೊಡುತ್ತಿರುವ ಅಂಕಿ ಅಂಶಗಳಲ್ಲಿ ಯಾವುದೇ ಪರಿಣಾಮಕಾರಿ ಕಾರ್ಯ ಕಂಡುಬರುತ್ತಿಲ್ಲ ಎಂದು ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸಚಿವರು ಚಾಟಿ ಬೀಸಿದರು. ಯಾವ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಅವರ ರಕ್ಷಣೆಗೆ ನಾವಿದ್ದೇವೆ. ಯಾವ ಒತ್ತಡಕ್ಕೂ ಮಣಿಯುವ ಅಗತ್ಯವಿಲ್ಲ. ಮೊದಲು ಕೆಲಸ ಮಾಡಿ ತೋರಿಸಿ. ನಿಮಗೆ ತೊಂದರೆ ಆದರೆ ಸರ್ಕಾರ ನಿಮ್ಮ ರಕ್ಷಣೆಗೆ ಬರಲಿದೆ. ಸರ್ಕಾರದಿಂದ ಎಲ್ಲ ರೀತಿಯ ಬೆಂಬಲವು ನಿಮಗೆ ಸಿಗಲಿದೆ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಭರವಸೆ ನೀಡಿದರು.
ಔಷಧಿ ನಿಯಂತ್ರಣ ಇಲಾಖೆಯನ್ನ ಮುಚ್ವಿಬಿಡೊಣವೇ..? ಅಧಿಕಾರಿಗಳನ್ನ ಪ್ರಶ್ನಿಸಿದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ
ಔಷಧ ನಿಯಂತ್ರಣಾಧಿಕಾರಿಗಳ ವಿವರಣೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಎಲ್ಲವು ಸರಿಯಿದ್ದರೆ ಔಷಧ ನಿಯಂತ್ರಣ ಇಲಾಖೆಯನ್ನ ಮುಚ್ವಿಬಿಡೊಣವೇ ಎಂದು ಪ್ರಶ್ನಿಸಿದರು. ಕಳಪೆ ಔಷಧಿಗಳ ತಯಾರಿಕರ ವಿರುದ್ಧ ಒಂದು ಕೇಸ್ ಬುಕ್ ಮಾಡಿ, ಕ್ರಮ ಕೈಗೊಳ್ಳಲು ನಿಮಗೆ ಸಾಧ್ಯವಾಗಿಲ್ಲ. ನೀವು ಇನ್ನೇನು ಕೆಲಸ ಮಾಡ್ತಿದ್ದೀರಾ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಅವರು ಔಷಧ ನಿಯಂತ್ರಣ ಅಧಿಕಾರಿಗಳ ವಿರುದ್ಧ ಗರಂ ಆದರು.
ಸಭೆಗೆ ಬರುವ ಮುನ್ನ ಸಂಪೂರ್ಣ ಮಾಹಿತಿಯನ್ನ ತರಬೇಕು. ಅರೆ ಬರೆ ಅಂಕಿ ಅಂಶಗಳನ್ನ ನಮ್ಮ ಮುಂದಿಟ್ಟು ನಿಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾನ್ಯ ಸಚಿವರ ನಿರ್ದೇಶನದಂತೆ ಕಳೆಪೆ ಗುಣಮಟ್ಟದ ಔಷಧಗಳು ಸಾರ್ವಜನಿಕರಿಗೆ ಲಭ್ಯವಾಗದಂತೆ ನೋಡಿಕೊಳ್ಳುವುದು ನಿಮ್ಮ ಮುಖ್ಯ ಕೆಲಸ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಎಚ್ಚರಿಕೆ ನೀಡಿದರು.
BIG NEWS: ಬೆಂಗಳೂರಿನಲ್ಲಿ 500 ಕೋಟಿ ರೂ. ಬೆಲೆಯ ‘ಅರಣ್ಯ ಭೂಮಿ’ ಒತ್ತುವರಿ ತೆರವು, ಮರು ವಶ
BREAKING: ನನ್ನ ವಿರುದ್ಧದ ಆರೋಪ ಸಾಬೀತು ಪಡಿಸಿದ್ರೇ ‘ರಾಜಕೀಯ ನಿವೃತ್ತಿ’: ಶಾಸಕ ಬೇಳೂರು ಗೋಪಾಲಕೃಷ್ಣ ಸವಾಲ್
ಆ.22ರಿಂದ ಬೆಂಗಳೂರಲ್ಲಿ ಅತಿದೊಡ್ಡ ಕೃಷಿ ಮತ್ತು ಆಹಾರ ಪ್ರದರ್ಶನ ಮೇಳ | AgriTech India 2024