ಶಿವಮೊಗ್ಗ: ಜಿಲ್ಲೆಯ ಸಾಗರದ ನಗರದಲ್ಲಿ ದಿನೇ ದಿನೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇಂದು ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದ್ದವು. ಇದಕ್ಕೆ ನಿಯಂತ್ರಣ ಕ್ರಮ ವಹಿಸದ ಸಾಗರ ನಗರಸಭೆ ಆಡಳಿತವೇ ಕಾರಣ ಎಂಬುದಾಗಿ ಆಕ್ರೋಶ ಹೊರ ಹಾಕಿರುವಂತ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್, ನಾಳೆ ನಗರಸಭೆ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ಇಂದು ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ
ಶಿವಮೊಗ್ಗ ಜಿಲ್ಲೆಯ ಸಾಗರದ ಜನ್ನತ್ ನಗರದಲ್ಲಿ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಾವೆ. ಬೀದಿ ನಾಯಿ ದಾಳಿಗೆ ಒಳಗಾಗಿದ್ದಂತ ಬಾಲಕನಿಗೆ ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಉಚಿತ ಆಂಬುಲೆನ್ಸ್ ವ್ಯವಸ್ಥೆ ಮಾಡಿದ ಶಾಸಕರ ಆಪ್ತ ಸಹಾಯ
ಸಾಗರದ ವಾರ್ಡ್ ನಂ.26ರ ಜನ್ನತ್ ನಗರದಲ್ಲಿ ಬೀದಿ ನಾಯಿ ದಾಳಿಗೆ ಒಳಗಾಗಿದ್ದಂತ ಮೂರು ವರ್ಷದ ಬಾಲಕನಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿತ್ತು. ಹೀಗಾಗಿ ಬಾಲಕನ ಪೋಷಕರು ಬಡವರಾಗಿದ್ದ ಕಾರಣ ಶಿವಮೊಗ್ಗಕ್ಕೆ ಕರೆದೊಯ್ಯಲು ಆಂಬುಲೆನ್ಸ್ ನೆರವಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪ್ತ ಸಹಾಯಕ ಶ್ರೀನಿವಾಸ ಮೂರ್ತಿ ಅವರಿಗೆ ಕುಟುಂಬಸ್ಥರು ಮನವಿ ಮಾಡಿದ್ದರು. ಈ ಮನವಿಗೆ ಪ್ರತಿಸ್ಪಂದಿಸಿದಂತ ಅವರು, ಸಾಗರದಿಂದ ಶಿವಮೊಗ್ಗದ ಮೆಗ್ಗಾನ್ ಗೆ ಕರೆದೊಯ್ಯಲು ಉಚಿತ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟರು. ಅಲ್ಲದೇ ಶಿವಮೊಗ್ಗದಲ್ಲೂ ಉತ್ತಮ ಚಿಕಿತ್ಸಾ ವ್ಯವಸ್ಥೆಗೂ ನೆರವಾದರು.
ಇದೇ ಸಂದರ್ಭದಲ್ಲಿ ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ನಾಯಿ ದಾಳಿಗೆ ಒಳಗಾಗಿದ್ದಂತ ಬಾಲಕನಿಗೆ ಚಿಕಿತ್ಸೆಗೆ ಸ್ಥಳೀಯ ಯುವಕರು ಆಟೋ ಸಿಖಂದರ್, ಅಮೀನ್, ಇಮ್ರಾನ್, ರತೀಬ್ ಸೇರಿದಂತೆ ಇತರರು ನೆರವಾದರು.
ನಾಯಿ ಹಿಡಿಯೋದಕ್ಕೆ ಟೆಂಡರ್ ಕರೆದಿದ್ದೇವೆಂದ ನಗರಸಭೆ ಅಧಿಕಾರಿ
ಸಾಗರದಲ್ಲಿ ದಿನೇ ದಿನೇ ಬೀದಿ ನಾಯಿಗಳು ಹೆಚ್ಚಾಗುತ್ತಿವೆ. ನಗರಸಭೆ ಏನು ಮಾಡುತ್ತಿದೆ.? ನಿಯಂತ್ರಣ ಮಾಡುವ ಕೆಲಸ ಯಾವಾಗ ಎಂಬುದಾಗಿ ಸಾಗರ ನಗರಸಭೆ ಪರಿಸರ ಅಭಿಯಂತರ ಮಧನ್ ಕೇಳಿದ್ರೆ, ಟೆಂಡರ್ ಕರೆಯಲಾಗಿದೆ. ಇದೇ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡು, ಬೀದಿ ನಾಯಿಗಳ ನಿಯಂತ್ರಿಸೋ ಕ್ರಮಕ್ಕೆ ನಗರಸಭೆ ಮುಂದಾಗಲಿದೆ ಎನ್ನುತ್ತಾರೆ.
ಅಲ್ಲ ಸ್ವಾಮಿ ಇಂದು ಮೂರು ವರ್ಷದ ಬಾಲಕನ ಮೇಲೆ, ಮಹಿಳೆಯ ಮೇಲೆ ಸಾಗರದಲ್ಲಿ ಬೀದಿನಾಯಿಗಳು ಅಟ್ಟಹಾಸ ಮೆರೆದಿದ್ದಾವೆ. ಇನ್ನೂ ಟೆಂಡರ್ ಕರೆದು, ಅದನ್ನು ಮುಗಿಸೋದು ಯಾವಾಗ? ಬೀದಿ ನಾಯಿಗಳನ್ನು ನಿಯಂತ್ರಿಸೋದು ಯಾವಾಗ ಎಂಬುದು ಸಾಗರ ಜನತೆಯ ಪ್ರಶ್ನೆಯಾಗಿದೆ.
ನಾಳೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಜಮೀನ್ ಪ್ರತಿಭಟನೆ
ಸಾಗರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಖಂಡಿಸಿ ನಾಳೆ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ನಗರಸಭೆ ಮುಂದಿನ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಬಳಿಯಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ನಾಳೆ ಬೆಳಗ್ಗೆ 11.30ಕ್ಕೆ ಪ್ರತಿಭಟನೆ ನಡೆಸಲಿದ್ದು, ಬೀದಿ ನಾಯಿ ದಾಳಿಗೆ ಒಳಗಾಗಿರುವಂತ ಬಾಲಕನ ಚಿಕಿತ್ಸಾ ವೆಚ್ಚ ಭರಿಸಬೇಕು. ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಲಿದ್ದಾರೆ. ಇವರ ಪ್ರತಿಭಟನೆಗೆ ನಗರಸಭೆಯ ಸದಸ್ಯರಾದ ಶಹೀನ್ ಬಾನು ಕೂಡ ಸಾಥ್ ನೀಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ರಾಜ್ಯ ‘ಸರ್ಕಾರಿ ಆಸ್ಪತ್ರೆ ಒಳರೋಗಿ’ಗಳಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ‘ವಿಶೇಷ ಪೌಷ್ಟಿಕ ಆಹಾರ’
ಇನ್ಮುಂದೆ ಸಾಗರ, ಸೊರಬ ತಾಲ್ಲೂಕಿನ ಈ ಸ್ಥಳಗಳು ‘ಪ್ರವಾಸಿ ತಾಣ’ಗಳು: ರಾಜ್ಯ ಸರ್ಕಾರ ಘೋಷಣೆ
ಶಿವಮೊಗ್ಗ: ಸಾಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗು ಮೇಲೆ ಬೀದಿ ನಾಯಿ ದಾಳಿ