ದಾವಣಗೆರೆ; ಜಿಲ್ಲೆಯಲ್ಲಿ ಸಾಫ್ ವೇರ್‌ಟೆಕ್ನಾಲಜಿ ಪಾರ್ಕ್ (ಎಸ್‌ಟಿಪಿಐ) ಸ್ಥಾಪಿಸಲು ಉದ್ದೇಶಿಸಿ, ಕಾಯ್ದಿರಿಸಿದ ಭೂ ಮಂಜೂರಾತಿ ಆದೇಶದ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ನಿರ್ದೇಶನದಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿಯವರು ಅಧಿಕೃತವಾಗಿ ಬೆಂಗಳೂರಿನಲ್ಲಿ ಹಸ್ತಾಂತರ ಮಾಡಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್-2025ನ 2ನೇ ದಿನದಂದು ಎಸ್‌ಟಿಪಿಐನ ಸೆಂಟ್ರಲ್ ಡೈರೆಕ್ಟರ್ ಜನರಲ್ ಅರವಿಂದ್ ಅವರಿಗೆ ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ವಿಷನ್ ದಾವಣಗೆರೆ ತಂಡದ ಸದಸ್ಯರ ಸಮಕ್ಷಮ ಅಧಿಕೃತವಾಗಿ ಎಸ್ ಟಿಪಿಐ ಸ್ಥಾಪನೆಗಾಗಿ ಭೂ ಮಂಜೂರಾತಿ ಪತ್ರ ಹಸ್ತಾಂತರಿಸಿದರು.
ಎಸ್‌ಟಿಪಿಐ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ಸಂಜಯ್ ತ್ಯಾಗಿ ಹಾಗೂ ತಂಡದವರು ಕಳೆದ ಎರಡು ತಿಂಗಳ ಹಿಂದೆ ದಾವಣಗೆರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ದಾವಣಗೆರೆ ನಗರಕ್ಕೆ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿರುವ ವಡ್ಡಿನಹಳ್ಳಿಯಲ್ಲಿ ಕಾಯ್ದಿರಿಸಿದ 2 ಎಕರೆ ಜಮೀನನ್ನು ಎಸ್ ಟಿಪಿಐ ಸ್ಥಾಪಿಸಲು ಸೂಕ್ತವಾಗಿದೆ ಎಂಬ ಆಶಯವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಆ ಜಾಗವನ್ನು ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅನುಮೋದನೆಯೊಂದಿಗೆ ಎಸ್‌ಟಿಪಿಐ ಉದ್ದೇಶಕ್ಕೆ ಕಾಯ್ದಿರಿಸಲಾಗಿತ್ತು.
ಎಸ್‌ಡಿಪಿಐ ಪ್ರಾದೇಶಿಕ ನಿರ್ದೇಶಕರಾದ ಸಂಜಯ್ ತ್ಯಾಗಿ, ಹುಬ್ಬಳ್ಳಿ ಕ್ಲಸ್ಟರ್ ಹೆಚ್ಚುವರಿ ನಿರ್ದೇಶಕರಾದ ಶಶಿಕುಮಾರ, ವಿಷನ್ ದಾವಣಗೆರೆ ತಂಡದ ಸದಸ್ಯರಾದ ವೀರೇಶ ಪಟೇಲ್, ಡಾ. ಎನ್.ಸಿ. ಪ್ರಶಾಂತ, ಎಲ್.ಸತೀಶ ಕುಮಾರ, ಎಂ.ಟಿ.ವಿನಯ್, ಉದ್ಯಮಿ ಗಳಾದ ಇನ್‌ವೆಸ್ಟ್ ದಾವಣಗೆರೆಯ ನಾಗರಾಜ ರೆಡ್ಡಿ, ರಾಜೇಶ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರಿನ ನೈರುತ್ಯ ರೈಲ್ವೆ ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ
‘ಖಾಸಗಿ ಆಸ್ಪತ್ರೆ’ಗಳು ಈ ಚಿಕಿತ್ಸೆಗೆ ಮುಂಗಡ ಹಣಕ್ಕೆ ಒತ್ತಾಯಿಸಿದ್ರೆ ‘ಲೈಸೆನ್ಸ್’ ರದ್ದು; ರಾಜ್ಯ ಸರ್ಕಾರ ಎಚ್ಚರಿಕೆ








