ಕೊಪ್ಪಳ: ನಿನ್ನೆ ಜನಸಂಪರ್ಕ ಸಭೆಯ ವೇಳೆಯಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮೇಲೆ ಕಲ್ಲೆಸೆತ ಮಾಡಲಾಗಿತ್ತು. ಈ ಘಟನೆ ಸಂಬಂಧ ಬಸವರಾಜ ಮಡಿವಾಳರ ವಿರುದ್ಧ ಪ್ರಕರಣ ದಾಖಲಾಗಿದೆ.
ನಿನ್ನೆ ಕೊಪ್ಪಳದ ಬೆಣಕಲ್ ಗ್ರಾಮದಲ್ಲಿ ಬಸವರಾಜ ರಾಯರೆಡ್ಡಿ ಅವರು ಜನಸಂಪರ್ಕ ಸಭೆ ನಡೆಸುತ್ತಿದ್ದಂತ ಸಂದರ್ಭದಲ್ಲಿ ಅವರ ಮೇಲೆ ಕಲ್ಲೆಸೆತ ಉಂಟಾಗಿತ್ತು. ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕು ಬೆಣಕಲ್ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.
ಬೆಣಕಲ್ ಪಿಡಿಓ ಚನ್ನಬಸಪ್ಪ ದೂರಿನ ಅನ್ವಯ ಕೊಪ್ಪಳದ ಕುಕನೂರು ಠಾಣೆಯಲ್ಲಿ ಬಸವರಾಜ ಮಡಿವಾಳರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಾಳೆ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ಹಿನ್ನಲೆ: ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ








