ಚಿಕ್ಕಮಗಳೂರು: ನಗರದಲ್ಲಿ ನಮೋ ಭಾರತ್ ಕಾರ್ಯಕ್ರಮದ ವೇಳೆಯಲ್ಲಿ ಕಟ್ಟಡ ಮೇಲಿನಿಂದ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮ ವಿರೋಧಿಸಿ ಪೋಸ್ಟರ್ ಪ್ರದರ್ಶನ ಮಾಡಿದ್ದರು. ಈ ಕಾರಣದಿಂದ ಉದ್ರಿಕ್ತಗೊಂಡಂತ ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ ನಡೆಸಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಚಿಕ್ಕಮಗಳೂರು ನಗರದ ವಿಜಯಪುರದಲ್ಲಿ ನಮೋ ಭಾರತ್ ಕಾರ್ಯಕ್ರಮವನ್ನು ಇಂದು ಬಿಜೆಪಿಯಿಂದ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದವು ನಡೆದಿದೆ. ಕಟ್ಟಡವೊಂದರಿಂದ ನಮೋ ಭಾರತ್ ಕಾರ್ಯಕ್ರಮ ವಿರೋಧಿಸಿ ಪೋಸ್ಟರ್ ಅನ್ನು ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರದರ್ಶಿಸಲಾಗಿದೆ ಎನ್ನಲಾಗಿದೆ. ಇದು ಮತ್ತಷ್ಟು ಪರಿಸ್ಥಿತಿ ಉದ್ವಿಗ್ನಗೊಳ್ಳೋದಕ್ಕೆ ಕಾರಣವಾಗಿದೆ ಎಂಬುದಾಗಿ ಹೇಳಲಾಗುತ್ತಿದೆ.
ಕಾಂಗ್ರೆಸ್ ಕಾರ್ಯಕರ್ತರಿದ್ದಂತ ಕಟ್ಟಡದ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ ನಡೆಸಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದನ್ನು ಗಮನಿಸಿದಂತ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
BIGG NEWS: ಈ ರಾಜ್ಯದಲ್ಲಿ ‘ಜೈಲಿನಲ್ಲೇ ಇರುವಾಗಲೇ’ ಗರ್ಭಿಣಿಯಾಗುತ್ತಿದ್ದಾರೆ ಮಹಿಳೆಯರು!
BREAKING : ಅಮೆರಿಕದಲ್ಲಿ ಕಳೆದ 2 ವಾರಗಳಲ್ಲಿ ಭಾರತ ಮೂಲದ ಐವರು ಯುವಕರ ಸಾವು : ಕೇಂದ್ರ ಸರ್ಕಾರ ಕಳವಳ