Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ಸೆಕ್ಸ್ ಗೆ ಒಪ್ಪದಿದ್ದಕ್ಕೆ ಪ್ರೇಯಸಿಯನ್ನೇ ಕೊಂದು, ಶವದ ಜೊತೆಗೆ MBA ವಿದ್ಯಾರ್ಥಿ ಲೈಂಗಿಕ ಕ್ರಿಯೆ!

17/02/2026 3:11 PM

ಮಹಿಳೆಯರು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಗೌಪ್ಯತೆ ಕಾಪಾಡುವುದು ಕಡ್ಡಾಯ : ಡಿಜಿ, ಐಜಿಪಿ ಎಂ.ಎ ಸಲೀಂ ಆದೇಶ

17/02/2026 3:02 PM

ಕಾನೂನುಬಾಹಿರವಾಗಿ 31 ನಿವೇಶನ ಪಡೆದುಕೊಂಡ ಕಾಂಗ್ರೆಸ್ ಪಕ್ಷ: ಛಲವಾದಿ ನಾರಾಯಣಸ್ವಾಮಿ

17/02/2026 2:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಳ್ಳತನವಾದ ಬೈಕ್: 48 ಗಂಟೆಯಲ್ಲಿ ಮಾಹಿತಿ ನೀಡಿಲ್ಲವೆಂದ ವಿಮಾ ಕಂಪನಿಗೆ, ಈ ಚಾಟಿ ಬೀಸಿದ ಕೋರ್ಟ್
KARNATAKA

ಕಳ್ಳತನವಾದ ಬೈಕ್: 48 ಗಂಟೆಯಲ್ಲಿ ಮಾಹಿತಿ ನೀಡಿಲ್ಲವೆಂದ ವಿಮಾ ಕಂಪನಿಗೆ, ಈ ಚಾಟಿ ಬೀಸಿದ ಕೋರ್ಟ್

By kannadanewsnow0903/11/2025 9:24 PM

ಬಳ್ಳಾರಿ : ವಿಮೆ ಹೊಂದಿದ ವಾಹನ ಕಳ್ಳತನವಾಗಿರುವುದರ ಕುರಿತು ಅರ್ಜಿ ಸಲ್ಲಿಸಿದ ಕ್ಲೈಮ್ ಅನ್ನು ತಿರಸ್ಕರಿಸಿ ಸೇವಾ ನ್ಯೂನ್ಯತೆ ಎಸಗಿದ ಬೆಂಗಳೂರಿನ ಮೆ|| ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನ ವ್ಯವಸ್ಥಾಪಕನಿಗೆ ಬಳ್ಳಾರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮೆ ಪಾವತಿಸುವಂತೆ ಆದೇಶ ನೀಡಿದೆ.

ದೂರುದಾರನಾದ ಬಳ್ಳಾರಿ ತಾಲ್ಲೂಕಿನ ಹೊಸ ರ‍್ರಗುಡಿ ಗ್ರಾಮದ ಡಿ.ಪ್ರತಾಪ್ ರೆಡ್ಡಿ ತಮ್ಮ ಕೆ.ಎ 34/ಇ ಎಸ್-5099 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನಕ್ಕೆ ದಿನಾಂಕ 14-08-2023 ರಿಂದ 13-08-2024 ರ ವರೆಗಿನ ಅವಧಿಗೆ ಪಾಲಿಸಿ ಸಂಖ್ಯೆ: 779855593 ರಂತೆ ವಿಮೆ ಪಾಲಿಸಿ ಪಡೆದಿದ್ದು, ಚಾಲ್ತಿಯಲ್ಲಿರುವ ಅವಧಿಯಲ್ಲಿ 29-04-2024 ಸಂಜೆ 7.30 ಕ್ಕೆ ಮನೆಯ ಮುಂದೆ ನಿಲ್ಲಿಸಿದ ಗಾಡಿಯು ಕಳ್ಳತನವಾಗಿತ್ತು.

ಈ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ, ಮಾಹಿತಿಯೊಂದಿಗೆ ಇನ್ಸೂರೆನ್ಸ್ ಕಂಪನಿಗೆ ಕ್ಲೈಮ್ ಅರ್ಜಿ ಸಲ್ಲಿಸಿದ್ದರು. ಆದರೆ ಕ್ಲೈಮ್ ಅನ್ನು ಕಂಪನಿ ತಿರಸ್ಕರಿಸಿತ್ತು. ಬಳಿಕ ದೂರುದಾರರು ರೂ.76,200/- ಗಳೊಂದಿಗೆ ನಷ್ಟ ಪರಿಹಾರ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಪ್ರಕರಣದಲ್ಲಿ ಇನ್ಶೂರೆನ್ಸ್ ಕಂಪನಿಯು ಹಾಜರಾಗಿ ತಮ್ಮ ತಕರಾರು ಮೂಲಕ ವಿಮಾ ಕಂತನ್ನು ಕಳ್ಳತನವಾದ 48 ಗಂಟೆಯೊಳಗೆ ಮಾಹಿತಿ ನೀಡಬೇಕಿದ್ದು, ಮೋಟರ್ ವಾಹನ ಕಾಯ್ದೆ 1988ರ ನಿಯಮಾನುಸಾರ 48 ಗಂಟೆಯೊಳಗೆ ಎದುರುದಾರರಿಗೆ ಮಾಹಿತಿ ನೀಡದೇ ನಿಯಮ ಉಲ್ಲಂಘಿಸಿರುವ ಕಾರಣ ಕ್ಲೈಮ್ ತಿರಸ್ಕರಿಸಿರುವುದಾಗಿ ಸಮರ್ಥಿಸಿಕೊಂಡಿದೆ.

ಪ್ರಕರಣದಲ್ಲಿ ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಹಾಗೂ ಮಹಿಳಾ ಸದಸ್ಯೆ ಮಾರ್ಲಾ ಶಶಿಕಲಾ ಅವರು ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಯಾವ ದಿನಾಂಕಕ್ಕೆ ಮಾಹಿತಿ ನೀಡಿರುವರೆಂಬ ಬಗ್ಗೆ ಉಭಯ ಪಕ್ಷಗಾರರು ಸ್ಪಷ್ಟವಾಗಿ ದಾಖಲೆ ಸಲ್ಲಿಸಿರುವುದಿಲ್ಲ ಎಂದು ತಿಳಿಸಿದ್ದರು.

ಆದಾಗ್ಯೂ ಎದುರುದಾರರು ಪಾಲಿಸಿ ವಿತರಿಸುವ ಸಮಯದಲ್ಲಿ ಸಂಪೂರ್ಣ ನಿಬಂಧನೆಗಳನ್ನು ನೀಡದೇ ಆಯೋಗದಲ್ಲಿ ದೂರು ದಾಖಲಾದ ನಂತರ ಹಾಜರುಪಡಿಸಿ ಕ್ಲೆöÊಮ್ ತಿರಸ್ಕರಿಸುವ ಬಗ್ಗೆ ತಕರಾರು ಸಲ್ಲಿಸುವ ಪರಿಪಾಠ ರೂಢಿಸಿಕೊಂಡಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದೆ ಎಂದು ಅಭಿಪ್ರಾಯಪಟ್ಟರು.

ಪಾಲಿಸಿ ಚಾಲ್ತಿಯಲ್ಲಿರುವ ಮತ್ತು ವಾಹನ ಕಳ್ಳತನವಾಗಿರುವ ಬಗ್ಗೆ ಒಪ್ಪಿಕೊಳ್ಳುತ್ತಾ ಕೇವಲ ಮಾಹಿತಿ ತಡವಾಗಿ ಸಲ್ಲಿಸಿರುವ ಕಾರಣಕ್ಕೆ ಕ್ಲೈಮ್ ತಿರಸ್ಕರಿಸಿರುವುದು ಎದುರುದಾರರ ಸೇವಾ ರ್ನಿಲಕ್ಷ್ಯತನ ಎಂದು ಪರಿಗಣಿಸಿ ಎದುರುದಾರರು ರೂ.76,200 ಗಳ ಪಾಲಿಸಿ ಮೊತ್ತ, ರೂ.10,000 ಮಾನಸಿಕ ಹಿಂಸೆಗೆ ಮತ್ತು ರೂ.5,000 ದೂರಿನ ವೆಚ್ಚ ದೂರುದಾರರಿಗೆ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ ರೂ.76,200 ಗಳಿಗೆ ಶೇ.9 ರಷ್ಟು ಬಡ್ಡಿ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.

ಗಣಿತಕ್ಕೆ ನೊಬೆಲ್ ಪ್ರಶಸ್ತಿ ಏಕೆ ನೀಡಿಲ್ಲ? ಇಲ್ಲಿದೆ ಮಾಹಿತಿ | Nobel Prize

ರಾಜ್ಯದಲ್ಲಿ ಎಲ್ಲಾ ಸಮುದಾಯದವರಿಗಾಗಿ ಪಂಚ ಗ್ಯಾರಂಟಿ ಯೋಜನೆ ಜಾರಿ: ಸಚಿವ ಎನ್ ಚಲುವರಾಯಸ್ವಾಮಿ

Share. Facebook Twitter LinkedIn WhatsApp Email

Related Posts

ಮಹಿಳೆಯರು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಗೌಪ್ಯತೆ ಕಾಪಾಡುವುದು ಕಡ್ಡಾಯ : ಡಿಜಿ, ಐಜಿಪಿ ಎಂ.ಎ ಸಲೀಂ ಆದೇಶ

17/02/2026 3:02 PM1 Min Read

ಕಾನೂನುಬಾಹಿರವಾಗಿ 31 ನಿವೇಶನ ಪಡೆದುಕೊಂಡ ಕಾಂಗ್ರೆಸ್ ಪಕ್ಷ: ಛಲವಾದಿ ನಾರಾಯಣಸ್ವಾಮಿ

17/02/2026 2:59 PM4 Mins Read

BREAKING: ಕರ್ನಾಟಕ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಏ.7ಕ್ಕೆ, SSLC ಪರೀಕ್ಷೆ-1ರದ್ದು ಏ.24ಕ್ಕೆ ಪ್ರಕಟ

17/02/2026 2:50 PM1 Min Read
Recent News

SHOCKING: ಸೆಕ್ಸ್ ಗೆ ಒಪ್ಪದಿದ್ದಕ್ಕೆ ಪ್ರೇಯಸಿಯನ್ನೇ ಕೊಂದು, ಶವದ ಜೊತೆಗೆ MBA ವಿದ್ಯಾರ್ಥಿ ಲೈಂಗಿಕ ಕ್ರಿಯೆ!

17/02/2026 3:11 PM

ಮಹಿಳೆಯರು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಗೌಪ್ಯತೆ ಕಾಪಾಡುವುದು ಕಡ್ಡಾಯ : ಡಿಜಿ, ಐಜಿಪಿ ಎಂ.ಎ ಸಲೀಂ ಆದೇಶ

17/02/2026 3:02 PM

ಕಾನೂನುಬಾಹಿರವಾಗಿ 31 ನಿವೇಶನ ಪಡೆದುಕೊಂಡ ಕಾಂಗ್ರೆಸ್ ಪಕ್ಷ: ಛಲವಾದಿ ನಾರಾಯಣಸ್ವಾಮಿ

17/02/2026 2:59 PM

BREAKING: ಕರ್ನಾಟಕ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಏ.7ಕ್ಕೆ, SSLC ಪರೀಕ್ಷೆ-1ರದ್ದು ಏ.24ಕ್ಕೆ ಪ್ರಕಟ

17/02/2026 2:50 PM
State News
KARNATAKA

ಮಹಿಳೆಯರು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಗೌಪ್ಯತೆ ಕಾಪಾಡುವುದು ಕಡ್ಡಾಯ : ಡಿಜಿ, ಐಜಿಪಿ ಎಂ.ಎ ಸಲೀಂ ಆದೇಶ

By kannadanewsnow0517/02/2026 3:02 PM KARNATAKA 1 Min Read

ಬೆಂಗಳೂರು : ಮಹಿಳೆಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಗೌಪ್ಯತೆ ಕಾಪಾಡುವುದು ಕಡ್ಡಾಯ ಎಂದು ರಾಜ್ಯ ಪೊಲೀಸ್…

ಕಾನೂನುಬಾಹಿರವಾಗಿ 31 ನಿವೇಶನ ಪಡೆದುಕೊಂಡ ಕಾಂಗ್ರೆಸ್ ಪಕ್ಷ: ಛಲವಾದಿ ನಾರಾಯಣಸ್ವಾಮಿ

17/02/2026 2:59 PM

BREAKING: ಕರ್ನಾಟಕ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಏ.7ಕ್ಕೆ, SSLC ಪರೀಕ್ಷೆ-1ರದ್ದು ಏ.24ಕ್ಕೆ ಪ್ರಕಟ

17/02/2026 2:50 PM

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಅಸ್ತಿಗಾಗಿ ತಂದೆಯನ್ನೇ ರಾಡ್ ನಿಂದ ಹೊಡೆದು, ಕೊಂದ ಪಾಪಿ ಪುತ್ರರು!

17/02/2026 2:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.