ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ ಇ) ಗುರುವಾರ 180 ಅಂಶ ಏರಿಕೆ ಕಂಡು 76,351.57 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಎನ್ಎಸ್ಇ ನಿಫ್ಟಿ ಸಹ 23 ಪಾಯಿಂಟ್ಗಳ ಅಲ್ಪ ಲಾಭದೊಂದಿಗೆ 23,068.50 ಕ್ಕೆ ತಲುಪಿದೆ.
ಆದರೆ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 274.56 ಪಾಯಿಂಟ್ ಕುಸಿದು 76,019.04 ಕ್ಕೆ ತಲುಪಿದ್ದರೆ, ನಿಫ್ಟಿ 78.45 ಪಾಯಿಂಟ್ ಕುಸಿದು 22,993.35 ಕ್ಕೆ ತಲುಪಿತ್ತು.
ಅಡೆತಡೆಯಿಲ್ಲದ ವಿದೇಶಿ ನಿಧಿಯ ಹೊರಹರಿವು ಮತ್ತು ಹೊಸ ಯುಎಸ್ ಸುಂಕಗಳ ನಡುವೆ ಬೆಂಚ್ ಮಾರ್ಕ್ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಶೇಕಡಾ 1 ಕ್ಕಿಂತ ಹೆಚ್ಚು ಕುಸಿದವು.