ಬೆಂಗಳೂರು: ಮಾಲ್ ಮುಚ್ಚಲು ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಅಂತ ಇಂದು ಸದನದಲ್ಲಿ ಸಚಿವ ಭೈರತಿ ಸುರೇಶ್ ಅವರು ಹೇಳಿದರು.
ಇಂದು ಸದನದಲ್ಲಿ ಮಾತನಾಡಿದ ಅವರು ಕಾನೂನಿನಲ್ಲಿ ಅವಕಾಶ ಇದೇ ಎನ್ನಲಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಮಾತನಾಡಲಾಗಿದ್ದು, ಸದ್ಯ ಜಿಟಿ ಮಾಲ್ ಅನ್ನು ಏಳು ದಿನಗಳ ಕಾಲ ಮುಚ್ಚಲಾಗಿದೆ ಅಂಥ ಸದನದಲ್ಲಿ ಮಾಹಿತಿ ನೀಡಿದರು. ಇನ್ನೂ ಸದನದಲ್ಲಿ ಸ್ಪೀಕರ್ ಅವರು ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ. ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಇನ್ನೂ ಸದನದಲ್ಲಿ ಬಹುತೇಕ ಶಾಸಕರು ಜಿ.ಟಿ ಮಾಲ್ ಅನ್ನು ಮುಚ್ಚಬೇಕು ಅಂಥ ಆಗ್ರಹಿಸಿದರು.
ಈ ನಡುವೆ ರೈತನನ್ನು ಅವಮಾನಿಸಿದ ಆರೋಪದಡಿ ಬೆಂಗಳೂರಿನ ಜಿ.ಟಿ.ಮಾಲ್ ಮಾಲೀಕರು ಮತ್ತು ಭದ್ರತಾ ಸಿಬ್ಬಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.’ಮಾಲ್‌ನ ಸೆಕ್ಯುರಿಟಿ ಗಾರ್ಡ್‌ಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡದೆ ರೈತನಿಗೆ ಅವಮಾನವಾಗುವಂತೆ ನಡೆದುಕೊಳ್ಳಲಾಗಿದೆ’ ಎಂದು ಆರೋಪಿಸಿ ಧರ್ಮರಾಜ್ ದೂರು ನೀಡಿದ್ದಾರೆ. ಇದರನ್ವಯ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.