ಉತ್ತರ ಕನ್ನಡ: ತಾಯಿಯ ಜೊತೆಗೆ ಜಗಳವಾಡುತ್ತಿದ್ದ ಮಲತಂದೆಗೆ ಮಗನಿಂದಲೇ ಮಚ್ಚಿನೇಟು ನೀಡಲಾಗಿದೆ. ಮಗನಿಂದ ನೇಟಿನಿಂದಾಗಿ ಮಲತಂದೆ ಮಾರಣಾಂತಿಕವಾಗಿ ಗಾಯಗೊಂಡಿರುವಂತ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ತಟ್ಟಿಹಳ್ಳಿಯಲ್ಲಿ ತಾಯಿಯ ಜೊತೆಗೆ ಜಗಳ ಆಡುತ್ತಿದ್ದಂತ ಮಲತಂದೆಯ ಮೇಲೆ ಮಗನೊಬ್ಬ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಮಲತಂದೆ ಶಿವಾನಂದ ರಾಮಣ್ಣ(48) ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ.
ಹಲ್ಲೆ ನಡೆಸಿದಂತ ಮಲಮಗ ಶಿವರಾಜ ಪರಸಪ್ಪ ಗುಡಿಯಾಳ(27) ಪರಾರಿಯಾಗಿದ್ದಾನೆ. ನಾಗಮ್ಮ ಕಲಕಟ್ಟಿಯನ್ನು 3ನೇ ವಿವಾಹವಾಗಿದ್ದ ಲಾರಿ ಚಾಲಕ ಶಿವಾನಂದ. ಒಂದೂವರೆ ವರ್ಷದ ಹಿಂದೆ ಹಾನಗಲ್ ಮೂಲದ ನಾಗಮ್ಮ ಜೊತೆಗೆ ವಿವಾಹವಾಗಿದ್ದರು.
ಪತ್ನಿ ಮೇಲೆ ಸಂಶಯದಿಂದ ಪ್ರತಿದಿನ ಗಲಾಟೆಯನ್ನು ಪತಿ ಶಿವಾನಂದ ಮಾಡುತ್ತಿದ್ದರು. ತಾಯಿಯ ಜೊತೆಗೆ ಗಲಾಟೆ ಮಾಡುತ್ತಿದ್ದ ಮಲತಂದೆ ಮೇಲೆ ಮಗ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವಂತ ಶಿವಾನಂದನನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಹುತೇಕ ಪ್ರತಿಯೊಂದು ಹೃದಯಾಘಾತವೂ ಈ ಅಂಶಗಳಿಂದ ಉಂಟಾಗುತ್ತಂತೆ: ಅಧ್ಯಯನ
ರಾಜ್ಯ ರಾಜಕಾರಕ್ಕೆ ಬರುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಹತ್ವದ ಹೇಳಿಕೆ








