ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ, ಇರಾನ್ನಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಗಾಗಿ ಭಾರತೀಯ ರಾಯಭಾರ ಕಚೇರಿಯು ಹೊಸ ಮಾರ್ಗಸೂಚಿಯನ್ನು (Advisory) ಬಿಡುಗಡೆ ಮಾಡಿದೆ. ಮುಂದಿನ 48 ಗಂಟೆಗಳ ಕಾಲ ಭಾರತೀಯರು ತೀವ್ರ ಜಾಗರೂಕರಾಗಿರಬೇಕು ಮತ್ತು ಅನಗತ್ಯವಾಗಿ ಮನೆಯಿಂದ ಹೊರಬರಬಾರದು ಎಂದು ಸೂಚಿಸಲಾಗಿದೆ.
ಯುದ್ಧದ ಸಮಯದಲ್ಲಿ ವಿದ್ಯುತ್ ಸ್ಥಾವರಗಳು (Power Sites) ಮತ್ತು ಮಿಲಿಟರಿ ನೆಲೆಗಳು ದಾಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವುದರಿಂದ, ಅಂತಹ ಪ್ರದೇಶಗಳ ಸುತ್ತಮುತ್ತ ಸುಳಿಯಬಾರದು ಎಂದು ಎಚ್ಚರಿಸಲಾಗಿದೆ.
ಬಹುಮಹಡಿ ಕಟ್ಟಡಗಳಲ್ಲಿ (High-rises) ವಾಸಿಸುವವರು ಮೇಲ್ಭಾಗದ ಫ್ಲೋರ್ಗಳಲ್ಲಿ ಇರುವುದನ್ನು ತಪ್ಪಿಸಬೇಕು. ಕ್ಷಿಪಣಿ ಅಥವಾ ಡ್ರೋನ್ ದಾಳಿಯ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಕೆಳಮಹಡಿ ಅಥವಾ ಸುರಕ್ಷಿತ ಬಂಕರ್ಗಳಲ್ಲಿ ಇರುವಂತೆ ಸೂಚಿಸಲಾಗಿದೆ.
ಮುಂದಿನ 48 ಗಂಟೆಗಳು ಅತ್ಯಂತ ನಿರ್ಣಾಯಕವಾಗಿದ್ದು, ಎಲ್ಲಿದ್ದೀರೋ ಅಲ್ಲೇ ಇರಿ (Stay where you are) ಮತ್ತು ಯಾವುದೇ ಹೆದ್ದಾರಿ ಸಂಚಾರ ಮಾಡುವುದಿದ್ದರೂ ರಾಯಭಾರ ಕಚೇರಿಯ ಅನುಮತಿ ಪಡೆಯಿರಿ ಎಂದು ತಿಳಿಸಲಾಗಿದೆ.
ತುರ್ತು ಸಂದರ್ಭದಲ್ಲಿ ಭಾರತೀಯರು ಸಂಪರ್ಕಿಸಲು ರಾಯಭಾರ ಕಚೇರಿಯು ವಿಶೇಷ ಎಮರ್ಜೆನ್ಸಿ ನಂಬರ್ಗಳನ್ನು ಬಿಡುಗಡೆ ಮಾಡಿದ್ದು, ಇಮೇಲ್ ಮೂಲಕವೂ ಮಾಹಿತಿ ನೀಡಲು ಕೋರಿದೆ.






