ಬೆಂಗಳೂರು: ಮಾರ್ಚ್ 25 ರಿಂದ ಏಪ್ರಿಲ್ 26ರವರೆಗೂ ನಡೆದ ಎಸ್.ಎಲ್.ಎಲ್.ಸಿ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಇಂದು ಪ್ರಕಟಿಸಿದೆ.
ಒಟ್ಟು 4.36.138 ವಿದ್ಯಾರ್ಥಿಗಳಲ್ಲಿ (ಗಂಡು) 2.87.416 ಮಂದಿ ಉತ್ತೀರ್ಣರಾಗಿದ್ದಾರೆ. (ಶೇಕಡಾ 65.90%) ಒಟ್ಟು 4.23.829 ವಿದ್ಯಾರ್ಥಿನಿಯರಲ್ಲಿ 3.41.778 ಮಂದಿ ಉತ್ತೀರ್ಣರಾಗಿದ್ದಾರೆ.
(ಶೇಕಡಾ 81.11) ನಗರ ಪ್ರದೇಶದಲ್ಲಿ 4.93.900 ವಿದ್ಯಾರ್ಥಿಗಳಲ್ಲಿ 35.97.703 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. (72.83%) ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 3.66.067 ಮಂದಿ ಉತ್ತೀರ್ಣರಾಗಿದ್ದಾರೆ. (74.17%) ಒಟ್ಟು 5.906 ಸರ್ಕಾರಿ ಶಾಲೆಗಳಲ್ಲಿ 72.46% , 3.666 ಅನುದಾನ ಶಾಲೆಗಳಲ್ಲಿ 72.22%, 6.144 ಅನುದಾನ ರಹಿತ ಶಾಲೆಗಳು ಫಲಿತಾಂಶವಾಗಿದೆ.
625 ಕ್ಕೆ 625 ಅಂಕಿತಾ ಬಸಪ್ಪಾ ಕನ್ನೂರ ಬಾಗಲಕೋಟೆ ಜಿಲ್ಲೆಯ ಮುರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 7 ಮಂದಿ ವಿದ್ಯಾರ್ಥಿಗಳು 624 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.
ಈ ನಡುವೆ ಮುಧೋಳ ತಾಲೂಕಿನ ಮೆಳ್ಳಗೆರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಅಂಕಿತಾ ಅವರು 625 ಕ್ಕೆ 625 ಅಂಕ ಪಡೆದಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅಂಕಿತಾ ಅವರು ವಿದ್ಯಾರ್ಥಿಗಳು ಯಶಸ್ವಿಯಾಗಿ ಎಕ್ಸಾಂನಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕಾದ್ರೆ ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಬಳಕೆಯಿಂದ ದೂರವಿದ್ದಲ್ಲಿ ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ ಅಂತ ಹೇಳಿದ್ದಾರೆ. ಇದಲ್ಲದೇ.
ಮೊರರ್ಜಿ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಕಾರಣಕ್ಕೆ ನಮಗೆ ಮೊಬೈಲ್ ಬಳಕೆ ಮಾಡುವುದಕ್ಕೆ ಅವಕಾಶ ನೀಡುತ್ತ ಇರಲಿಲ್ಲ, ಇದಲ್ಲದೇ ಪಠ್ಯಕ್ಕೆ ಸಂಬಂಧಪಟ್ಟ ಮಾಹಿತಿಗಾಗಿ ನಾನು ಯ್ಯೂಟ್ಯೂಬ್ ಬಳಕೆ ಮಾಡುತ್ತಿದೆ. ನನ್ನ ಅಂಕಗಳನ್ನು ಹೆಚ್ಚು ತೆಗೆದಕೊಳ್ಳುವುದರಲ್ಲಿ ಹಾಸ್ಟೆಲ್ ಸಿಬ್ಬಂದಿಗಳು ಕೂಡ ನನಗೆ ಸಹಾಯ ಮಾಡಿದರು ಅಂಥ ಹೇಳಿದರು. ಇನ್ನೂ ಇದೇ ವೇಳೆ ಅವರು ಮುಂದೆ ನಾನು ಸೈನ್ಸ್‌ನಲ್ಲಿ ವಿದ್ಯಾಬ್ಯಾಸವನ್ನು ಮುಂದುವರೆಸುವ ಆಸೆಯನ್ನು ವ್ಯಕ್ತಪಡಿಸಿದ್ದು, ಇದಲ್ಲದೇ ಮುಂದೆ ಐಎಎಸ್ ಅಧಿಕಾರಿಯಾಗಬೇಕು ಅಂತ ಹೇಳಿದ್ದಾರೆ.