ಬೆಂಗಳೂರು: ರಾಜ್ಯ ಸರ್ಕಾರದಿಂದ ನಡೆಸಿದಂತ ಜಾತಿಗಣತಿ ವರದಿಯ ಅಂಕಿ-ಅಂಶಗಳು ಬಹಿರಂಗಗೊಂಡಿದ್ದಾವೆ. ರಾಜ್ಯದಲ್ಲಿ ಜಾತಿ ಸಮೀಕ್ಷೆಗೆ ಒಳಪಟ್ಟ ಜನಸಂಖ್ಯೆ 5,98,14,942 ಆಗಿದ್ದಾರೆ. ಅವರಲ್ಲಿ ಜಾತಿವಾರು ಅಂಕಿ-ಅಂಶಗಳು ಎಷ್ಟು ಎನ್ನುವ ಮಾಹಿತಿ ಮುಂದಿದೆ ಓದಿ.
ರಾಜ್ಯ ಸರ್ಕಾರ ನಡೆಸಿದಂತ ಜಾತಿ ಗಣತಿ ಜನಸಂಖ್ಯೆಯ ವರದಿಯಲ್ಲಿ ಜಾತಿ ಸಮೀಕ್ಷೆಗೆ ಒಳಪಟ್ಟವರ ಸಂಖ್ಯೆ 5,98,14,942 ಆಗಿದೆ. ಈ ಒಟ್ಟಾರೆ ಜಾತಿ ಸಮೀಕ್ಷೆಯ ಜನಗಣತಿಯಲ್ಲಿ ರಾಜ್ಯದಲ್ಲಿವಂತ ಎಸ್ಸಿ ಸಮುದಾಯದವರ ಸಂಖ್ಯೆ 1,09,29,347 ಆಗಿದ್ದರೇ, ಎಸ್ಟಿ ಸಮುದಾಯದವರ ಜನಸಂಖ್ಯೆ 42,81,289 ಆಗಿದೆ.
ರಾಜ್ಯದಲ್ಲಿ ಪ್ರವರ್ಗ-1ರ ಒಟ್ಟು ಜನಸಂಖ್ಯೆ 34,96,638 ಆಗಿದೆ. ಇವರ ಶೇಕಡಾ ಪ್ರಮಾಣ 8.40 ಆದರೇ ಅನುಪಾತ ಶೇ.4ರಷ್ಟು ಆಗಿದೆ.ಇನ್ನು ಪ್ರವರ್ಗ-1ಬಿಯವರು 73,92,313 ಆಗಿದೆ. ಪ್ರವರ್ಗ-1ಎ ಮತ್ತು 1ಬಿ ಒಟ್ಟು ಜನಸಂಖ್ಯೆ 1,08,88,951 ಆಗಿದೆ.
ಇನ್ನೂ 11ಎ ವರ್ಗದವರು 77,78,209 ಆಗಿದ್ದರೇ 2ಬಿ ವರ್ಗದವರು 75,25,880 ಆಗಿದೆ. ಈ ಎರಡು ವರ್ಗದವರ ಒಟ್ಟು ಜನಸಂಖ್ಯೆ 1.53,04,089 ಆಗಿದೆ.
ಪ್ರವರ್ಗ 3ಎ ಜನಸಂಖ್ಯೆ 72,99,577 ಆಗಿದ್ದರೇ, 3ಬಿ ವರ್ಗದ ಜನಸಂಖ್ಯೆ 81,37,536 ಆಗಿದೆ. ಈ ಎರಡು ವರ್ಗದ ಜನಸಂಖ್ಯೆ 1,54,37,133 ಆಗಿದೆ.
ಒಟ್ಟಾರೆ ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆಯ ಪ್ರಕಾರ 4,16,30,153 ಜನಸಂಖ್ಯೆ ಇದೆ. ಪ್ರವರ್ಗ-1ಎ ಶೇ.4 ರಷ್ಟಿದ್ದರೇ, ಪ್ರವರ್ಗ-1ಬಿ ಜನಸಂಖ್ಯೆ ಶೇ.6ರಷ್ಟಿದೆ ಪ್ರವರ್ಗ-2ಎ ಜನಸಂಖ್ಯೆ ಶೇ.10ರಷ್ಟಿದ್ದರೇ, 2ಬಿ ವರ್ಗದ ಜನಸಂಖ್ಯೆ ಶೇ.8, 3ಎ ಜನಸಂಖ್ಯೆ ಶೇ.7, 3ಬಿ ಜನಸಂಖ್ಯೆ ಶಏ.8ರಷ್ಟು ರಾಜ್ಯದಲ್ಲಿ ಇರುವುದಾಗಿ ವರದಿಯ ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ.
ಹೀಗಿದೆ ಕರ್ನಾಟಕದ ಜಾತಿಗಣತಿ ಸಮೀಕ್ಷೆ ವರದಿಯ ಅಂಕಿ-ಅಂಶ
- ಪ್ರವರ್ಗ-1ಎ ಜನಸಂಖ್ಯೆ 34,96,638
- ಪ್ರವರ್ಗ-1ಬಿ ಜನಸಂಖ್ಯೆ 73,92,313
- ಪ್ರವರ್ಗ-2ಎ ಜನಸಂಖ್ಯೆ 77,78,209
- ಪ್ರವರ್ಗ-2ಬಿ ಜನಸಂಖ್ಯೆ 75,25,880
- ಪ್ರವರ್ಗ-3ಎ ಜನಸಂಖ್ಯೆ 72,99,577
- ಪ್ರವರ್ಗ-3ಬಿ ಜನಸಂಖ್ಯೆ 81,37,536
- ಎಸ್ಸಿ ಸಮುದಾಯದವರ ಜನಸಂಖ್ಯೆ 1,09,29,347
- ಎಸ್ಟಿ ಸಮುದಾಯದವರ ಜನಸಂಖ್ಯೆ 42,81,289
ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜಾತಿ ಗಣತಿ ನಾಟಕ ಮಾಡುತ್ತಿದ್ದಾರೆ: HD ಕುಮಾರಸ್ವಾಮಿ ಆರೋಪ
BREAKING : ಪಾಕಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ 5.8 ತೀವ್ರತೆಯ ಪ್ರಬಲ ಭೂಕಂಪ | Earthquake in Pakistan
BIG NEWS : ‘ವಕ್ಫ್’ ಬಿಲ್ ವಿರುದ್ಧ ಬೀದಿಗೆ ಇಳಿಯುವಂತೆ ಪ್ರಚೋದನಾಕಾರಿ ಭಾಷಣ : ಇಬ್ಬರು ಅರೆಸ್ಟ್!