ಮೈಸೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಸ್ಟೇಷನ್ ಮಹೋತ್ಸವವನ್ನು ಬಾಗೇಶಪುರ ರೈಲು ನಿಲ್ದಾಣದಲ್ಲಿ ಸ್ಥಳೀಯರು ಸೇರಿ ಉತ್ಸಾಹದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ರೈಲ್ವೆ ನೌಕರರಾದ ಗೋವಿಂದ ಗೌಡ ಮತ್ತು ದೂರದರ್ಶಕ ಪ್ರದರ್ಶನಕ್ಕಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗಳನ್ನು ಪಡೆದ ಕು. ಗಗನ್ ಬಿ.ಎಲ್. ಅವರನ್ನು ಗೌರವಿಸಲಾಯಿತು.
ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಮೆರಗು ನೀಡಿದವು.
1960ರಲ್ಲಿ ನಿರ್ಮಿಸಲಾದ ಬಾಗೇಶಪುರ ರೈಲು ನಿಲ್ದಾಣವು ವಸಾಹತುಶಾಹಿ ವಾಸ್ತುಶಿಲ್ಪ ಹಾಗೂ ಜನಪದ ವಾಸ್ತುಶೈಲಿಗಳ ವಿಶಿಷ್ಟ ಸಂಯೋಜನೆಯನ್ನು ಪ್ರತಿಬಿಂಬಿಸುತ್ತದೆ. ಹಳೆಯ ಮೈಸೂರು ಪ್ರದೇಶದ ಅನೇಕ ಪಾರಂಪರಿಕ ರೈಲು ನಿಲ್ದಾಣಗಳಿಗೆ ಸೇರಿರುವ ಸಂಯುಕ್ತ ವಾಸ್ತು ವಿನ್ಯಾಸವನ್ನು ಈ ನಿಲ್ದಾಣದ ಕಟ್ಟಡ ಹೊಂದಿದೆ. ಮುಖ್ಯ ಕಟ್ಟಡವು ನಾಲ್ಕು ದಿಕ್ಕುಗಳಿಗೆ ವಿಸ್ತರಿಸಿರುವ ಮಂಗಳೂರು ಟೈಲ್ಸ್‌ನ ಗೇಬಲ್ ಛಾವಣಿಯನ್ನು ಹೊಂದಿದ್ದು, ಪ್ರತಿಯೊಂದು ಗೇಬಲ್‌ನಲ್ಲಿ ವೃತ್ತಾಕಾರದ ಗಾಜಿನ ಕಿಟಕಿಯು ಅಲಂಕರಿಸಿದೆ. ಸಣ್ಣ ವರಾಂಡಾ ಮತ್ತು ಕಟ್ಟಡದ ಸುತ್ತಲಿನ ಕಡಪ ಕಲ್ಲಿನ ನೆಲಹಾಸು ಜನಪದ ವಾಸ್ತುಶೈಲಿಯ ಪ್ರಭಾವವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪ್ರಸ್ತುತ, ಈ ನಿಲ್ದಾಣದಲ್ಲಿ ಆರು ರೈಲುಗಳು ನಿಲ್ಲುತ್ತಿವೆ.

ಬಾಗೇಶಪುರ ರೈಲು ನಿಲ್ದಾಣವನ್ನು ಸಂಪರ್ಕಿಸುವ ಈ ಮಾರ್ಗವನ್ನು 1918ರಲ್ಲಿ ಉದ್ಘಾಟಿಸಲಾಗಿದ್ದು, ಇದು ಪ್ರದೇಶದ ರೈಲು ಪರಂಪರೆಯ ಪ್ರಮುಖ ಸಂಪರ್ಕಗಳಲ್ಲಿ ಒಂದಾಗಿದೆ.
ಮೈಸೂರು ವಿಭಾಗವು ತನ್ನ ರೈಲು ಆಸ್ತಿಗಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಕಾಪಾಡುತ್ತಾ ಸಮುದಾಯದೊಂದಿಗೆ ಉತ್ತಮ ಸಂವಹನವನ್ನು ಮುಂದುವರಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಶಾಖಾಧಿಕಾರಿಗಳು, ಡಿಆರ್ ಯುಸಿಸಿ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ರೈಲ್ವೆ ಸಿಬ್ಬಂದಿ ಮತ್ತು ಬಾಗೇಶಪುರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.
BREAKING: ಸಚಿವ ಮಂಕಾಳು ವೈದ್ಯ ಕಾರಿಗೆ ಮುತ್ತಿಗೆ ಹಾಕಿ ರೈತರಿಂದ ಆಕ್ರೋಶ
BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ಆರೋಗ್ಯ ಸಂಜೀವಿನಿ ಯೋಜನೆ’ಗೆ ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ.!








