ಬೆಂಗಳೂರು : ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೆಲಸದ ವೇಳೆ ಅಪಘಾತ ಸಂಭವಿಸಿದಲ್ಲಿ ಮಂಡಳಿಯು ಅಪಘಾತ ಪರಿಹಾರವನ್ನು ನೀಡುತ್ತದೆ. ಈ ಸೌಲಭ್ಯವನ್ನು ಪಡೆಯಲು ಫಲಾನುಭವಿಯು ಅಪಘಾತಕ್ಕೀಡಾದ ದಿನದಿಂದ ಒಂದು ವರ್ಷದ ಒಳಗೆ ಅಗತ್ಯ ದಾಖಲೆಗಳೊಂದಿಗೆ ಮಂಡಳಿಗೆ ಅರ್ಜಿ ಸಲ್ಲಿಸಬೇಕು.
ಅಪಘಾತ ಪರಿಹಾರ ಸೌಲಭ್ಯ
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೆಲಸದ ವೇಳೆ ಅಪಘಾತ ಸಂಭವಿಸಿದಲ್ಲಿ ಮಂಡಳಿಯು ಅಪಘಾತ ಪರಿಹಾರವನ್ನು ನೀಡುತ್ತದೆ
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ
ನಮೂನೆ 21 ಮತ್ತು 21A (ಉದ್ಯೋಗದಾತರಿಂದ ಭರ್ತಿ ಮಾಡಿಸಿದ) ಅರ್ಜಿಯನ್ನು ಸಲ್ಲಿಸಬೇಕು
ಮರಣ ಪ್ರಮಾಣಪತ್ರ ( ಅಪಘಾತದಿಂದ ಮರಣ ಹೊಂದಿದ್ದಲ್ಲಿ)
ಎಫ್ ಐ ಆರ್ ಪ್ರತಿ
ಫಲಾನುಭವಿಯು ಮರಣ ಹೊಂದಿದ್ದಲ್ಲಿ ಅವರ ನಾಮನಿರ್ದೇಶಿತರ ಬ್ಯಾಂಕ್ ಪಾಸ್ ಬುಕ್ ಪ್ರತಿ
ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ
ದುರ್ಬಲತೆ ಪ್ರಕರಣವಿದ್ದಲ್ಲಿ ದುರ್ಬಲತೆಯ ಶೇಕಡಾವಾರು ಪ್ರಮಾಣ ನಮೂದಿಸಬೇಕು
ಫಲಾನುಭವಿ ದುರ್ಬಲತೆಯಾದ ನಂತರ ತಪಾಸಣೆ ಮಾಡಿದ ಸರ್ಕಾರಿ / ಸರ್ಕಾರದ ಮಾನ್ಯತೆ ಪಡೆದ ಖಾಸಗಿ
ಆಸ್ಪತ್ರೆ ವೈದ್ಯರಿಂದ ಶೇಕಡಾವಾರು ದುರ್ಬಲತೆ ಖಚಿತ ಪಡಿಸಿರುವ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು
ಕಾರ್ಮಿಕ ಸಹಾಯವಾಣಿ 155214