ಬೆಂಗಳೂರು : 60 ವರ್ಷ ದಾಟಿದ ಕಾರ್ಮಿಕರು ಮಾಸಿಕ ಪಿಂಚಣಿಯನ್ನು ಮಂಡಳಿಯಿಂದ ಪಡೆಯಬಹುದು. ಅರ್ಜಿಯೊಂದಿಗೆ ಮಂಡಳಿ ನಿಗದಿಪಡಿಸಿರುವ ಪೂರಕ ದಾಖಲಾತಿಗಳನ್ನು ಸಲ್ಲಿಸಬೇಕು.
ಪಿಂಚಣಿ ಸೌಲಭ್ಯ
ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ.
60 ವರ್ಷ ಪೂರ್ಣಗೊಳ್ಳುವ ಪೂರ್ವ, ಕನಿಷ್ಠ 3 ವರ್ಷ ನಿರಂತರವಾಗಿ ಮಂಡಳಿಯ ಸದಸ್ಯತ್ವವನ್ನು ನವೀಕರಿಸಿ ಫಲಾನುಭವಿಯಾಗಿ ಮುಂದುವರೆದಿರಬೇಕು
ಅರ್ಜಿಯೊಂದಿಗೆ ಸಲ್ಲಿಸಬೇಕಾದ ಪೂರಕ ದಾಖಲಾತಿಗಳು
ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ
ಫಲಾನುಭವಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ
ಜೀವಿತ ಪ್ರಮಾಣಪತ್ರ ( ಜೀವಿತ ಅವಧಿಯವರೆಗೆ ಪ್ರತಿ ವರ್ಷ ಸಲ್ಲಿಸುವುದು )
ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಪ್ರತಿ
ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ








