Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಾಗ್ರತೆ ; ‘ಬಾಳೆಹಣ್ಣು’ ತಿಂದ ಬಳಿಕ ಅಪ್ಪಿತಪ್ಪಿಯೂ ಮಾಡಬಾರದ ಕೆಲಸಗಳಿವು.!

24/06/2025 10:07 PM

ಪ್ರತಿದಿನ ಬೆಳಿಗ್ಗೆ ‘ಆಮ್ಲಾ ಜ್ಯೂಸ್’ ಕುಡಿದ್ರೆ ನಿಮ್ಮ ದೇಹದಲ್ಲಿ ಆಗುವ ಮ್ಯಾಜಿಕ್ ಇದು.!

24/06/2025 9:34 PM

BIG NEWS : ಚಿಕ್ಕಮಗಳೂರಲ್ಲಿ ಭಾರಿ ಮಳೆ : ಶೃಂಗೇರಿ-ಹೊರನಾಡು ರಸ್ತೆ ಬಂದ್

24/06/2025 9:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜೂ.03 ರಂದು ರಾಜ್ಯ ದಕ್ಷಿಣ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಗಳಿಗೆ ಮತದಾನ : ಇಲ್ಲಿದೆ ಮಾಹಿತಿ
KARNATAKA

ಜೂ.03 ರಂದು ರಾಜ್ಯ ದಕ್ಷಿಣ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಗಳಿಗೆ ಮತದಾನ : ಇಲ್ಲಿದೆ ಮಾಹಿತಿ

By kannadanewsnow5721/05/2024 9:56 PM

ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ತು ದ್ವೈವಾರ್ಷಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಗಳ ಚುನಾವಣೆಯು ಜೂನ್, 03 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಗಳಲ್ಲಿ ಮೇ, 20 ಉಮೇದುವಾರಿಕೆ ಹಿಂಪಡೆಯಲು ಅಂತಿಮ ದಿನವಾಗಿತ್ತು. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 02, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ -01 ಹಾಗೂ ನೈರುತ್ಯ ಪದವೀಧರರ ಕ್ಷೇತ್ರದಿಂದ -01 ಅಭ್ಯರ್ಥಿ ನಾಮಪತ್ರಗಳನ್ನು ಹಿಂಪಡೆದಿದ್ದು, ಅಂತಿಮವಾಗಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ ಇಂತಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 11 ಅಭ್ಯರ್ಥಿಗಳು, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ 08 ಅಭ್ಯರ್ಥಿಗಳು ಹಾಗೂ ನೈರುತ್ಯ ಪದವೀಧರರ ಕ್ಷೇತ್ರದಿಂದ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಭಾರತ ಚುನಾವಣಾ ಆಯೋಗ ಸೂಚಿಸಿರುವಂತೆ ಮತದಾರನ ಬೆರಳಿಗೆ ಅಳಿಸಲಾಗದ ಶಾಯಿಯನ್ನು ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಬಲಗೈ ತೋರುಬೆರಳು, ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಬಲಗೈ ಮಧ್ಯದ ಬೆರಳು ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಲಗೈ ತೋರುಬೆರಳಿಗೆ ಹಾಕಲಾಗುವುದು. ಈ ಚುನಾವಣೆಯಲ್ಲಿ ನೋಟಾ ಇರುವುದಿಲ್ಲ.

ಕರ್ನಾಟಕ ವಿಧಾನ ಪರಿಷತ್ತು ದ್ವೈವಾರ್ಷಿಕ ಚುನಾವಣೆ-2024 ಕ್ಕೆ ಮೂರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲಾವಾರು ಮತಗಟ್ಟೆಗಳ ವಿವರ(ಹೆಚ್ಚುವರಿ ಮತಗಟ್ಟೆಗಳು ಸೇರಿ) ಮತ್ತು ಮತದಾರರ ವಿವರ ಇಂತಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 21,549 ಮತದಾರರು ಇದ್ದಾರೆ. ಅದರಲ್ಲಿ 11998 ಪುರುಷ ಮತದಾರರು, 9550 ಮಹಿಳಾ ಮತದಾರರು ಮತ್ತು 01 ಇತರೆ ಮತದಾರರು ಇದ್ದಾರೆ. ಒಟ್ಟು 44 ಮತಗಟ್ಟೆಗಳಿವೆ.

ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆ ಸಂಖ್ಯೆ 05, ಒಟ್ಟು ಮತದಾರರು 2181 ಅದರಲ್ಲಿ 1448 ಪುರುಷ ಮತದಾರರು, 733 ಮಹಿಳಾ ಮತದಾರರು ಇದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆ 10, ಒಟ್ಟು ಮತದಾರರು 3526 ಅದರಲ್ಲಿ 2085 ಪುರುಷರು ಮತ್ತು 1441 ಮಹಿಳಾ ಮತದಾರರು ಇದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 09 ಮತಗಟ್ಟೆಗಳಿದ್ದು, ಒಟ್ಟು 5403 ಮತದಾರರು ಇದ್ದಾರೆ. ಅದರಲ್ಲಿ 3127 ಪುರುಷ ಮತದಾರರು, 2276 ಮಹಿಳಾ ಮತದಾರರು ಇದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 20 ಮತಗಟ್ಟೆಗಳಿದ್ದು, ಒಟ್ಟು 10439 ಮತದಾರರು ಇದ್ದಾರೆ. ಅದರಲ್ಲಿ 5338 ಪುರುಷರು ಮತ್ತು 5100 ಮಹಿಳಾ ಮತದಾರರು, 1 ಇತರೆ ಮತದಾರರು ಇದ್ದಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ (ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಶಿವಮೊಗ್ಗ ಮತ್ತು ಉಡುಪಿ) ಒಟ್ಟು 79 ಮತಗಟ್ಟೆಗಳಿದ್ದು, 23402 ಮತದಾರರು ಇದ್ದಾರೆ. ಅದರಲ್ಲಿ 10487 ಪುರುಷರು ಮತ್ತು 12915 ಮಹಿಳಾ ಮತದಾರರು ಇದ್ದಾರೆ.
ಕೊಡಗು ಜಿಲ್ಲೆಯಲ್ಲಿ 05 ಮತಗಟ್ಟೆಗಳಿದ್ದು, 1578 ಮತದಾರರು ಇದ್ದಾರೆ. ಅದರಲ್ಲಿ 543 ಪುರುಷರು ಮತ್ತು 1035 ಮಹಿಳಾ ಮತದಾರು ಇದ್ದಾರೆ.

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ (ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಶಿವಮೊಗ್ಗ ಮತ್ತು ಉಡುಪಿ) ಒಟ್ಟು 108 ಮತಗಟ್ಟೆಗಳಿದ್ದು, ಒಟ್ಟು 85089 ಮತದಾರರು ಇದ್ದಾರೆ. ಅದರಲ್ಲಿ 43720 ಪುರುಷ ಮತದಾರರು, 41368 ಮಹಿಳಾ ಮತದಾರರು ಹಾಗೂ 1 ಇತರೆ ಮತದಾರರು ಇದ್ದಾರೆ.

ಕೊಡಗು ಜಿಲ್ಲೆಯಲ್ಲಿ 06 ಮತಗಟ್ಟೆಗಳಿದ್ದು, 3909 ಮತದಾರರು ಇದ್ದಾರೆ. ಅದರಲ್ಲಿ 1699 ಪುರುಷರು ಮತ್ತು 2210 ಮಹಿಳಾ ಮತದಾರರು ಇದ್ದಾರೆ.

ಮತದಾರರಿಗೆ ಯಾವುದೇ ವಿಧವಾದ ಆಮಿಷಗಳನ್ನು ಒಡ್ಡುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಲಿದ್ದು, ಆಮಿಷ ಒಡ್ಡುತ್ತಿರುವ ಬಗ್ಗೆ ದೂರನ್ನು ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮತ್ತು ಚುನಾವಣಾ ವೀಕ್ಷಕರಿಗೆ ಸಲ್ಲಿಸಬಹುದು. ಮೂರು ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರು(ಅಬ್ಸರ್‍ವರ್ಸ್) ನೇಮಕಗೊಂಡಿರುತ್ತಾರೆ.
ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರಾಗಿ ಅನಿಲ್ ಕುಮಾರ್ ಟಿ.ಕೆ ದೂ.ಸಂ. 7204064565, ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಹರ್ಷ್ ಗುಪ್ತ ದೂ.ಸಂ. 7204294565 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಡಾ.ರವಿಶಂಕರ್ ದೂ. ಸಂ. 7204214565 ಅವರನ್ನು ಚುನಾವಣಾ ವೀಕ್ಷಕರಾಗಿ ನೇಮಕ ಮಾಡಲಾಗಿದೆ.

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ವೆಬ್‍ಸೈಟ್ https://rcmysore.karnataka.gov.in ನಲ್ಲಿ ಪ್ರಚಾರ ಪಡಿಸಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್ ಅವರು ತಿಳಿಸಿದ್ದಾರೆ.

South-West Teachers' Constituency and South-West Graduates' Constituency to go to polls on June 3: Here's what you need to know State South Teachers' Constituency ಜೂ.03 ರಂದು ರಾಜ್ಯ ದಕ್ಷಿಣ ಶಿಕ್ಷಕರ ಕ್ಷೇತ್ರ ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಗಳ ಚುನಾವಣೆ : ಇಲ್ಲಿದೆ ಮಾಹಿತಿ
Share. Facebook Twitter LinkedIn WhatsApp Email

Related Posts

BIG NEWS : ಚಿಕ್ಕಮಗಳೂರಲ್ಲಿ ಭಾರಿ ಮಳೆ : ಶೃಂಗೇರಿ-ಹೊರನಾಡು ರಸ್ತೆ ಬಂದ್

24/06/2025 9:34 PM1 Min Read

ಇಲೆಕ್ಟ್ರಿಕ್ ವಾಹನದ ಬ್ಯಾಟರಿ ಬದಲಾಯಿಸಿ ಕೊಡದ ಕಂಪನಿಗೆ ಬಡ್ಡಿಯೊಂದಿಗೆ ಹಣ ಮರಳಿಸಲು ಕೋರ್ಟ್ ಆದೇಶ

24/06/2025 8:32 PM2 Mins Read

ರೈತರೇ ನೀವು ಕೃಷಿಯಲ್ಲಿ ಅತೀಯಾಗಿ ಯೂರಿಯಾ ಬಳಸೋದರಿಂದ ಆಗೋ ಪರಿಣಾಮ ಏನು ಗೊತ್ತಾ? ಇಲ್ಲಿದೆ ಮಾಹಿತಿ

24/06/2025 8:23 PM1 Min Read
Recent News

ಜಾಗ್ರತೆ ; ‘ಬಾಳೆಹಣ್ಣು’ ತಿಂದ ಬಳಿಕ ಅಪ್ಪಿತಪ್ಪಿಯೂ ಮಾಡಬಾರದ ಕೆಲಸಗಳಿವು.!

24/06/2025 10:07 PM

ಪ್ರತಿದಿನ ಬೆಳಿಗ್ಗೆ ‘ಆಮ್ಲಾ ಜ್ಯೂಸ್’ ಕುಡಿದ್ರೆ ನಿಮ್ಮ ದೇಹದಲ್ಲಿ ಆಗುವ ಮ್ಯಾಜಿಕ್ ಇದು.!

24/06/2025 9:34 PM

BIG NEWS : ಚಿಕ್ಕಮಗಳೂರಲ್ಲಿ ಭಾರಿ ಮಳೆ : ಶೃಂಗೇರಿ-ಹೊರನಾಡು ರಸ್ತೆ ಬಂದ್

24/06/2025 9:34 PM

ಸಂಘರ್ಷ ಪರಿಹಾರಕ್ಕೆ ಭಾರತ ಸಿದ್ಧ : ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತು ವಿದೇಶಾಂಗ ಸಚಿವಾಲಯ

24/06/2025 9:17 PM
State News
KARNATAKA

BIG NEWS : ಚಿಕ್ಕಮಗಳೂರಲ್ಲಿ ಭಾರಿ ಮಳೆ : ಶೃಂಗೇರಿ-ಹೊರನಾಡು ರಸ್ತೆ ಬಂದ್

By kannadanewsnow0524/06/2025 9:34 PM KARNATAKA 1 Min Read

ಚಿಕ್ಕಮಗಳೂರು : ಮಲ್ನಾಡು ಭಾಗಗಳಲ್ಲಿ ಇದೀಗ ಭಾರಿ ಮಳೆ ಆಗುತ್ತಿದ್ದು ಈಗಾಗಲೇ ಹಾಸನ ಉತ್ತರ ಕನ್ನಡ ಹಾಗೂ ಬೆಳಗಾವಿಯಲ್ಲಿ ಶಾಲಾ…

ಇಲೆಕ್ಟ್ರಿಕ್ ವಾಹನದ ಬ್ಯಾಟರಿ ಬದಲಾಯಿಸಿ ಕೊಡದ ಕಂಪನಿಗೆ ಬಡ್ಡಿಯೊಂದಿಗೆ ಹಣ ಮರಳಿಸಲು ಕೋರ್ಟ್ ಆದೇಶ

24/06/2025 8:32 PM

ರೈತರೇ ನೀವು ಕೃಷಿಯಲ್ಲಿ ಅತೀಯಾಗಿ ಯೂರಿಯಾ ಬಳಸೋದರಿಂದ ಆಗೋ ಪರಿಣಾಮ ಏನು ಗೊತ್ತಾ? ಇಲ್ಲಿದೆ ಮಾಹಿತಿ

24/06/2025 8:23 PM

BIG NEWS : ಒಂದೇ ದಿನ ಅಶೋಕ್, ವಿಜಯೇಂದ್ರ ದೆಹಲಿ ಪ್ರವಾಸ : ಶೀಘ್ರ ನೂತನ ರಾಜ್ಯಾಧ್ಯಕ್ಷ ಘೋಷಣೆ ಸಾಧ್ಯತೆ!?

24/06/2025 8:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.