ಬೆಂಗಳೂರು : ಸಿವಿಲ್ ಸ್ವರೂಪದ ವ್ಯಾಜ್ಯಗಳ ಮಾಹಿತಿ / ಪ್ರಕರಣಗಳನ್ನು ನಿರ್ವಹಿಸುವಲ್ಲಿ ಪೊಲೀಸ್ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಕಛೇರಿಯ ಉಲ್ಲೇಖ-1ರ ಸುತ್ತೋಲೆ ಅನುಸಾರ ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ವಿವಾದಗಳು ಮತ್ತು ವಿಷಯಗಳನ್ನು ನಿರ್ವಹಿಸುವ ಕುರಿತಂತೆ ಪೊಲೀಸ್ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಒದಗಿಸಿ ಸುತ್ತೋಲೆಯನ್ನು ಈಗಾಗಲೇ ಹೊರಡಿಸಲಾಗಿತ್ತು.
ಆದರೆ, ಕರ್ನಾಟಕ ಗೌರವಾನ್ವಿತ ಉಚ್ಛ ನ್ಯಾಯಾಯಲಯವು, ಎ.ಎನ್. ವಸಂತ ಮಾಧವ ರಾವ್ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ (ಡಬ್ಲ್ಯೂಪಿ ಸಂಖ್ಯೆ: 52846/2016, ದಿನಾಂಕ: 16/06/2023) ಪ್ರಕರಣದಲ್ಲಿ ಕಂಡಿಕೆ ಸಂಖ್ಯೆ: 19 ರಲ್ಲಿ ಈ ಕೆಳಗಿನಂತೆ ಅಭಿಪ್ರಾಯ ಮತ್ತು ನಿರ್ದೇಶನವನ್ನು ನೀಡಿರುತ್ತದೆ.
ಈ ಹಿನ್ನೆಲೆಯಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನದನ್ವಯ ಸಿವಿಲ್ ಸ್ವರೂಪದ ವಿವಾದಗಳನ್ನು ನಿರ್ವಹಿಸುವ ಕುರಿತಂತೆ ಮಾರ್ಗದರ್ಶಿ ಸೂಚಿಗಳನ್ನು ಈ ಸುತ್ತೋಲೆ ಅಡಿಯಲ್ಲಿ ನೀಡಲಾಗಿದ್ದು, ಕಾರಣ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಈ ಸುತ್ತೋಲೆಯನ್ವಯ ಹಾಗೂ ಮಾರ್ಗಸೂಚಿ ಅನುಸಾರ ಸಿವಿಲ್ ಸ್ವರೂಪದ ವಿವಾದಗಳನ್ನು ನಿರ್ವಹಿಸುವುದು.
ಈಗಾಗಲೇ ಎ. ಮೊದಲು ಪೊಲೀಸ್ ಅಧಿಕಾರಿಗಳು ಸಿವಿಲ್ ಸ್ವರೂಪದ ವ್ಯಾಜ್ಯ ಅಥವಾ ಮೊಕದ್ದಮೆಗಳು ಎಂತಹ ವಿಷಯಗಳಿಗೆ ಸಂಬಂಧಪಡುತ್ತವೆ? ಎಂಬುದರ ಬಗ್ಗೆ ಕಂಡುಕೊಳ್ಳುವುದು ಅಗತ್ಯ. ಸರ್ವೋಚ್ಚ ನ್ಯಾಯಾಲಯವು ಮತ್ತು ಉಚ್ಛ ನ್ಯಾಯಾಲಯಗಳು ಅಭಿಪ್ರಾಯ ಮತ್ತು ತೀರ್ಪುಗಳನ್ನು ನೀಡಿದಂತೆ ಯಾವ ವ್ಯಾಜ್ಯದಲ್ಲಿ ಅಪರಾಧಿಕತ್ವ ಅಥವಾ ಅಪರಾಧವೆಸಗಿದ ಮನೋಭಾವ ಮತ್ತು ಕೃತ್ಯಗಳು ಕಂಡುಬರದೆ ಹೋದಲ್ಲಿ ಅಂತಹ ಸ್ವರೂಪದ ವ್ಯಾಜ್ಯಗಳನ್ನು ಸಿವಿಲ್ ಸ್ವರೂಪದ ವ್ಯಾಜ್ಯಗಳೆಂದು ಪರಿಗಣಿಸಬಹುದಾಗಿರುತ್ತದೆ. ಉದಾಹರಣೆಗೆ, ಯಾವುದೇ ಅಪರಾಧಿಕತ್ವ ಇಲ್ಲದ-
i. ಕರಾರು ಅಥವಾ ಒಪ್ಪಂದಗಳ ಉಲ್ಲಂಘನೆ,
ii. ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವ್ಯಾಜ್ಯಗಳು,
ಸ್ಥಿರಾಸ್ತಿಯ ಮೇಲಿನ ಮಾಲೀಕತ್ವ ಅಥವಾ ಹಿತಾಸಕ್ತಿಯ ಘೋಷಣೆಗೆ ಸಂಬಂಧಿಸಿದ ವ್ಯಾಜ್ಯಗಳು,
iv. ಸ್ಥಿರಾಸ್ತಿಯ ಮೇಲಿನ ಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯಗಳು,
V. ಪೂಜಾ ಹಕ್ಕುಗಳು ಮತ್ತು ಪೂಜಾ ಸ್ಥಳಗಳ ನಿರ್ವಹಣೆಗೆ ಸಂಬಂಧಿಸಿದ ವ್ಯಾಜ್ಯಗಳು,
6.ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ವಿವಾದಗಳು, ಮೇಲ್ನೋಟಕ್ಕೆ ಕ್ರಿಮಿನಲ್ ಹೊಣೆಗಾರಿಕೆ ಸ್ಪಷ್ಟವಾಗಿಲ್ಲದ, ಆದರೆ ಸಿವಿಲ್ ಸ್ವರೂಪದ ವ್ಯಾಜ್ಯಗಳು ಮೇಲ್ನೋಟಕ್ಕೆ ಕಂಡುಬರುವಂತಹ ಪ್ರಕರಣಗಳು.
(1) ದೂರುದಾರರು ಸಿವಿಲ್ ವ್ಯಾಜ್ಯವಿರುವ ಮಾಹಿತಿಯುಳ್ಳ ದೂರನ್ನು ಠಾಣಾಧಿಕಾರಿಗೆ ಸಲ್ಲಿಸಿದಾಗ, ಅಂತಹ ಸಂದರ್ಭದಲ್ಲಿ ಠಾಣಾಧಿಕಾರಿಯು ಆ ದೂರು ಅಥವಾ ಮಾಹಿತಿಯನ್ನು ಪರಿಶೀಲಿಸಿದಾಗ, ಮೇಲ್ನೋಟಕ್ಕೆ ಸಿವಿಲ್ ವ್ಯಾಜ್ಯವೆಂದು ಕಂಡುಬಂದಾಗ, ಈ ವಿಷಯವನ್ನು ಠಾಣಾ ದಿನಚರಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಹಾಜರಿರುವ ದೂರುದಾರ ಅಥವಾ ಆತನ ಪ್ರತಿನಿಧಿಗೆ ದೂರಿನಲ್ಲಿ ಸಿವಿಲ್ ಸ್ವರೂಪದ ವ್ಯಾಜ್ಯ ಕಂಡುಬಂದಿರುವುದರಿಂದ ಪರಿಹಾರಕ್ಕಾಗಿ ಸಕ್ಷಮ ಸಿವಿಲ್ ನ್ಯಾಯಾಲಯಕ್ಕೆ ದಾವೆ ದಾಖಲಿಸುವುದು ಸೂಕ್ತವೆಂದು ತಿಳಿಸುವ ಹಿಂಬರಹವನ್ನು ನೀಡುವುದು.