Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪುರುಷರಿಗೂ ಬಂತು ಸಂತಾನಹರಣ ಮಾತ್ರೆ! ವೀರ್ಯಾಣು ಉತ್ಪಾದನೆ ತಡೆಯುವ ಹೊಸ ತಂತ್ರಜ್ಞಾನ; ವಿಜ್ಞಾನಿಗಳ ಐತಿಹಾಸಿಕ ಸಾಧನೆ

10/04/2026 7:15 AM

BIG NEWS : `TV’ ವೀಕ್ಷಕರಿಗೆ ಯೂಟ್ಯೂಬ್ ಶಾಕ್: ಇನ್ಮುಂದೆ 90 ಸೆಕೆಂಡ್ `ಜಾಹೀರಾತು’ ಸ್ಕಿಪ್ ಮಾಡುವಂತಿಲ್ಲ.!

10/04/2026 7:14 AM

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳ ಗಮನಕ್ಕೆ: ಇನ್ನು ಡಿಜಿಲಾಕರ್ ನಲ್ಲಿ `ಡಿಜಿಟಲ್ ಅಂಕಪಟ್ಟಿ’ ಲಭ್ಯ.!

10/04/2026 7:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ಸ್ಪರ್ಶ್‌ ಆಸ್ಪತ್ರೆ ಹೆಣ್ಣೂರು ರಸ್ತೆ ಶಾಖೆಯಲ್ಲಿ ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ ಘಟಕ ಆರಂಭ
KARNATAKA

ಬೆಂಗಳೂರಿನ ಸ್ಪರ್ಶ್‌ ಆಸ್ಪತ್ರೆ ಹೆಣ್ಣೂರು ರಸ್ತೆ ಶಾಖೆಯಲ್ಲಿ ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ ಘಟಕ ಆರಂಭ

By kannadanewsnow0922/01/2026 6:41 PM

ಬೆಂಗಳೂರು: ಇಲ್ಲಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಸಮೂಹವಾಗಿರುವ ಸ್ಪರ್ಶ್‌ ಆಸ್ಪತ್ರೆ ಇದೀಗ ತನ್ನ ಹೆಣ್ಣೂರು ಘಟಕದಲ್ಲಿ ಅಸ್ಥಿಮಜ್ಜೆ ಕಸಿ ಕೇಂದ್ರವನ್ನು ಆರಂಭಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಒಂದಾಗಿರುವ ಹೆಣ್ಣೂರು ಸ್ಪರ್ಶ್‌ ಆಸ್ಪತ್ರೆಯು ಈ ಮೂಲಕ ಕನಾಟಕದಲ್ಲಿ ಹೆಚ್ಚುತ್ತಿರುವ ಗಂಭೀರ ರಕ್ತ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಸುಧಾರಿತ ತಂತ್ರಜ್ಞಾನ ಹಾಗೂ ತಜ್ಞ ವೈದ್ಯರು, ವೈದ್ಯಕೀಯ ಸವಲತ್ತುಗಳೊಂದಿಗೆ ಸಜ್ಜಾಗಿದ್ದು ಕೇವಲ ರಾಜ್ಯ ಮಾತ್ರವಲ್ಲ ದಕ್ಷಿಣ ಭಾರತದ ಹಾಗೂ ವಿದೇಶಗಳ ರೋಗಿಗಳಿಗೂ ಕ್ಯಾನ್ಸರ್‌ನಿಂದ ಗುಣಮುಖರಾಗುವ ಭರವಸೆ ಮೂಡಿಸಿದೆ.

ಅಸ್ಥಿಮಜ್ಜೆ ಕಸಿಗೆಂದೇ ಸೀಮಿತವಾದ ಘಟಕವನ್ನು ರಕ್ತ, ಅಸ್ಥಿಮಜ್ಜೆ ಹಾಗೂ ದೇಹದ ಪ್ರತಿರಕ್ಷಣಾ ವ್ಯವಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಮಾತ್ರವಲ್ಲದೇ ಬಹು ವೈದ್ಯಕೀಯ ವಿಭಾಗಗಳ ತಜ್ಞರ ಚಿಕಿತ್ಸೆ ಅಗತ್ಯವಿರುವ ರಕ್ತ ಕ್ಯಾನ್ಸರ್‌ (ಲ್ಯುಕೇಮಿಯಾ), ಹಿಮೋಗ್ಲೋಬಿನ್‌ ಕೊರತೆಯಿಂದ ಆಗುವ ಅನುವಂಶಿಕ ಕಾಯಿಲೆ (ಥಲಸ್ಸೇಮಿಯಾ),ಸೋಂಕಿನ ವಿರುದ್ಧ ಹೋರಾಡುವ ಬಿಳಿರಕ್ತಕಣಗಳ ಕ್ಯಾನ್ಸರ್‌ (ಲಿಂಫೋಮಾ), ಅಪ್ಲಾಸ್ಟಿಕ್‌ ರಕ್ತ ಹೀನತೆ ಮೊದಲಾದವುಗಳಿಗೆ ವಿಶ್ವದರ್ಜೆಯ ಅನುಭವಿ ವೈದ್ಯರ ತಂಡದಿಂದ ಸಂಕೀರ್ಣ ಚಿಕಿತ್ಸೆಗೆ ವ್ಯವಸ್ಥೆಗೊಳಿಸಲಾಗಿದೆ

ಅತ್ಯಾಧುನಿಕ ಅಸ್ಥಿ ಮಜ್ಜೆ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಸ್ಪರ್ಶ್‌ ಆಸ್ಪತ್ರೆ ಸಮೂಹಗಳ ಅಧ್ಯಕ್ಷ ಡಾ.ಶರಣ್‌ ಶಿವರಾಜ್‌ ಪಾಟೀಲ್‌, “ ಪ್ರತಿಯೊಂದು ಜೀವಕ್ಕೂ ಮರು ಜೀವ ಪಡೆಯಲು ಎರಡನೇ ಆವಕಾಶದ ಅರ್ಹತೆ ಇದೆ. ಸ್ಪರ್ಶ್‌ ಆಸ್ಪತ್ರೆಯ ಈ ಅಸ್ಥಿಮಜ್ಜೆ ಕಸಿ ಘಟಕವು ರಕ್ತ ಕ್ಯಾನ್ಸರ್‌ನ ಅತ್ಯಂತ ಗಂಭೀರ ಕಾಯಿಲೆಗಳ ರೋಗ ನಿರ್ಣಯಗೊಂಡ ರೋಗಿಗಳಿಗೆ ಭರವಸೆಯಾಗಲಿದೆ. ಸ್ಪರ್ಶ್‌ ಆಸ್ಪತ್ರೆಯು ಈ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು ಅತ್ಯುತ್ಕೃಷ್ಟ ಚಿಕಿತ್ಸಾ ವ್ಯವಸ್ಥೆ, ಸುಧಾರಿತ ತಂತ್ರಜ್ಞಾನ ಹಾಗೂ ಅಷ್ಟೇ ಕಾಳಜಿಯ ಸೇವೆ ಒದಗಿಸಲಿದೆ” ಎಂದರು..

ಸ್ಪರ್ಶ್‌ ಕ್ಯಾನ್ಸರ್‌ ಸಂಸ್ಥೆಯ ಅತ್ಯಂತ ಪ್ರಮುಖ ಮತ್ತು ಆಧಾರಸ್ತಂಭದಂತೆ ಕೆಲಸ ಮಾಡುವ ಈ ಅಸ್ಥಿಮಜ್ಜೆ ಕಸಿ ಘಟಕವನ್ನು ಕ್ಯಾನ್ಸರ್‌ನ ಎಲ್ಲ ಹಂತದ ಚಿಕಿತ್ಸೆಗಳಿಗೂ ಸಜ್ಜುಗೊಳಿಸಲಾಗಿದೆ. ಆರಂಭಿಕ ಹಂತದಲ್ಲೇ ರೋಗ ನಿರ್ಣಯದಿಂದ ಮೊದಲ್ಗೊಂಡು ಅತ್ಯಂತ ನಿಖರವಾದ ಚಿಕಿತ್ಸೆಗಳಿಂದ ಸುಧಾರಿತ ಆರೋಗ್ಯ ಸೇವೆಗಳೊಂದಿಗೆ ಅಷ್ಟೇ ಕಾಳಜಿಯ ಆರೈಕೆಯನ್ನೊಳಗೊಂಡು ದೀರ್ಘಾವಧಿಯ ಬದುಕಿನ ಅವಕಾಶ ಕಲ್ಪಿಸಿಕೊಡಲಿದೆ ಎಂದು ಡಾ.ಶರಣ್‌ ಪಾಟೀಲ್‌ ಹೇಳಿದರು.

ಅತ್ಯಾಧುನಿಕ ಅಸ್ಥಿಮಜ್ಜೆ ಘಟಕವು ಸೋಂಕು ನಿರೋಧಕ ಹೆಚ್‌ಇಪಿಎ ಪ್ರತ್ಯೇಕ ಕೊಠಡಿಗಳು (ಹೆಪಾ ಫಿಲ್ಟರ್ಡ್‌ ಐಸೊಲೇಷನ್‌ ರೂಮ್ಸ್‌), ಘಟಕಕ್ಕೆಂದೇ ಮೀಸಲಾದ ರಕ್ತ ಬ್ಯಾಂಕ್‌, ಕಾಂಡ ಕೋಶಗಳ ಚಿಕಿತ್ಸಾ ಪ್ರಕ್ರಿಯೆ (ಸ್ಟೆಮ್‌ ಸೆಲ್‌) ಸೌಕರ್ಯ ಸೇರಿದಂತೆ ಒಂದೇ ಸೂರಿನಡಿ ಎಲ್ಲ ಪರೀಕ್ಷೆಗಳನ್ನೂ (ಹೆಚ್‌ಎಲ್‌ಎ ಟೈಪಿಂಗ್‌, ಇನ್ಫೆಕ್ಷನ್ಸ್‌, ಹಾಗೂ ಡ್ರಗ್‌ ಲೆವಲ್‌ ಮಾನಿಟರಿಂಗ್‌) ನಡೆಸಲು ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಉಪಕರಣಗಳನ್ನೊಳಗೊಂಡಿದೆ. ಜೊತೆಗೆ ರಕ್ತ ಕ್ಯಾನ್ಸರ್‌ ತಜ್ಞರು, ಅಸ್ಥಿಮಜ್ಜೆ ಕಸಿ ವೈದ್ಯರು, ತೀವ್ರ ನಿಗಾ ತಜ್ಞರು ಹಾಗೂ ಈ ವಿಭಾಗಗಳಲ್ಲಿ ವಿಶೇಷವಾಗಿ ತರಬೇತಿ ಹೊಂದಿದ ಶುಶ್ರೂಷಕಿಯರ ತಂಡದೊಂದಿಗೆ ಸದಾ ಸೇವೆಗೆ ಸನ್ನದ್ಧಗೊಳಿಸಲಾಗಿದೆ. ಸಾಂಪ್ರದಾಯಿಕ ಅಸ್ಥಿಮಜ್ಜೆ ಕಸಿಯೊಂದಿಗೆ ಘಟಕವು ಸಿಎಆರ್‌-ಟಿ ಸೆಲ್‌ ಥೆರಪಿ ಮತ್ತು ಅತ್ಯಾಧುನಿಕ ಇಮ್ಯುನೋಥೆರಪಿಯ ಸೌಲಭ್ಯವನ್ನೂ ಒದಗಿಸಲಿದ್ದು ರಕ್ತ ಕ್ಯಾನ್ಸರ್‌ ರೋಗಿಗಳಿಗೆ ವಿಶ್ವದರ್ಜೆಯ ಚಿಕಿತ್ಸೆಯನ್ನು ಪಡೆಯಲು ಅವಕಾಶವಿದೆ.

ಈ ನೂತನ ಘಟಕದೊಂದಿಗೆ ಸ್ಪರ್ಶ್‌ ಆಸ್ಪತ್ರೆ ಸಮೂಹವು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳ ಸಾಮರ್ಥ್ಯಗಳೊಂದಿಗೆ ಎಲ್ಲ ರೋಗಿಗಳಿಗೂ ಲಭ್ಯವಾಗುವಂತಹ ಅತ್ಯುನ್ನತ ದರ್ಜೆಯ ಕ್ಯಾನ್ಸರ್‌ ಚಿಕಿತ್ಸೆ ಒದಗಿಸುವ ತನ್ನ ಸೇವಾ ಬದ್ಧತೆಯ ವಿಸ್ತರಣೆಯನ್ನು ಪುನರುಚ್ಚರಿಸುತ್ತಿದೆ..

ಸ್ಪರ್ಶ್‌ ಆಸ್ಪತ್ರೆ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಸ್‌ದೀಪ್‌ ಸಿಂಗ್‌, ಹಿರಿಯ ತಜ್ಞರು, ಸಮಾಲೋಚಕರು, ಸ್ಪರ್ಶ್‌ ಆಸ್ಪತ್ರೆ ಸಮೂಹದ ಆಸ್ಪತ್ರೆಗಳಲ್ಲಿ ಅಸ್ಥಿಮಜ್ಜೆ ಕಸಿ ಮಾಡಿಸಿಕೊಂಡು ಚೇತರಿಕೆ ಕಂಡಿರುವ ಅನೇಕ ಕ್ಯಾನ್ಸರ್‌ ರೋಗಿಗಳು ಉಪಸ್ಥಿತರಿದ್ದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಖ್ಯಾತ ಗಾಯಕಿ ಎಸ್.ಜಾನಕಿ ಅವರ ಪುತ್ರ ಮುರಳಿ ಕೃಷ್ಣ ನಿಧನ

ಸದನದಲ್ಲಿನ ಗೂಂಡಾಗಿರಿ ಹೊಣೆ ಹೊತ್ತು ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

Share. Facebook Twitter LinkedIn WhatsApp Email

Related Posts

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳ ಗಮನಕ್ಕೆ: ಇನ್ನು ಡಿಜಿಲಾಕರ್ ನಲ್ಲಿ `ಡಿಜಿಟಲ್ ಅಂಕಪಟ್ಟಿ’ ಲಭ್ಯ.!

10/04/2026 7:10 AM1 Min Read

ರಾಜ್ಯದ `ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ’ ಗುಡ್ ನ್ಯೂಸ್ : ಮುಖ್ಯೋಪಾಧ್ಯಾಯರಾಗಿ ಬಡ್ತಿ, ಸ್ಥಳ ನಿಯುಕ್ತಿಗೊಳಿಸಿ ಶಿಕ್ಷಣ ಇಲಾಖೆ ಆದೇಶ

10/04/2026 6:53 AM2 Mins Read

ಕರ್ನಾಟಕ ದ್ವಿತೀಯ PUC ಫಲಿತಾಂಶ ಪ್ರಕಟ : ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ? ಇಲ್ಲಿದೆ ಸಂಪೂರ್ಣ ಮಾಹಿತಿ

10/04/2026 6:39 AM2 Mins Read
Recent News

ಪುರುಷರಿಗೂ ಬಂತು ಸಂತಾನಹರಣ ಮಾತ್ರೆ! ವೀರ್ಯಾಣು ಉತ್ಪಾದನೆ ತಡೆಯುವ ಹೊಸ ತಂತ್ರಜ್ಞಾನ; ವಿಜ್ಞಾನಿಗಳ ಐತಿಹಾಸಿಕ ಸಾಧನೆ

10/04/2026 7:15 AM

BIG NEWS : `TV’ ವೀಕ್ಷಕರಿಗೆ ಯೂಟ್ಯೂಬ್ ಶಾಕ್: ಇನ್ಮುಂದೆ 90 ಸೆಕೆಂಡ್ `ಜಾಹೀರಾತು’ ಸ್ಕಿಪ್ ಮಾಡುವಂತಿಲ್ಲ.!

10/04/2026 7:14 AM

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳ ಗಮನಕ್ಕೆ: ಇನ್ನು ಡಿಜಿಲಾಕರ್ ನಲ್ಲಿ `ಡಿಜಿಟಲ್ ಅಂಕಪಟ್ಟಿ’ ಲಭ್ಯ.!

10/04/2026 7:10 AM

ನೇಪಾಳ ರಾಜಕೀಯದಲ್ಲಿ ಸಂಚಲನ: ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಕಾರ್ಮಿಕ ಸಚಿವನನ್ನು ವಜಾಗೊಳಿಸಿದ ಪಿಎಂ ಬಾಲೆನ್ ಶಾ!

10/04/2026 7:00 AM
State News
KARNATAKA

ರಾಜ್ಯದ `ದ್ವಿತೀಯ ಪಿಯುಸಿ’ ವಿದ್ಯಾರ್ಥಿಗಳ ಗಮನಕ್ಕೆ: ಇನ್ನು ಡಿಜಿಲಾಕರ್ ನಲ್ಲಿ `ಡಿಜಿಟಲ್ ಅಂಕಪಟ್ಟಿ’ ಲಭ್ಯ.!

By kannadanewsnow5710/04/2026 7:10 AM KARNATAKA 1 Min Read

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ವಿದ್ಯಾರ್ಥಿಗಳ ಅಂಕಪಟ್ಟಿಗಳು…

ರಾಜ್ಯದ `ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ’ ಗುಡ್ ನ್ಯೂಸ್ : ಮುಖ್ಯೋಪಾಧ್ಯಾಯರಾಗಿ ಬಡ್ತಿ, ಸ್ಥಳ ನಿಯುಕ್ತಿಗೊಳಿಸಿ ಶಿಕ್ಷಣ ಇಲಾಖೆ ಆದೇಶ

10/04/2026 6:53 AM

ಕರ್ನಾಟಕ ದ್ವಿತೀಯ PUC ಫಲಿತಾಂಶ ಪ್ರಕಟ : ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ? ಇಲ್ಲಿದೆ ಸಂಪೂರ್ಣ ಮಾಹಿತಿ

10/04/2026 6:39 AM

ಗೀಸರ್, ಹೀಟರ್ ಬಳಸಿದರೂ ಬರಲ್ಲ ಭಾರಿ ಕರೆಂಟ್ ಬಿಲ್ : ವಿದ್ಯುತ್ ಉಳಿಸಲು ಜಸ್ಟ್ ಹೀಗೆ ಮಾಡಿ.!

10/04/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.