ಬೆಂಗಳೂರು: ನಾಳೆ ಬೆಂಗಳೂರಿನ ವಿಧಾನಸೌಧದ ಮುಂಬಾಗದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರಲ್ಲಿ ಸಂಚಾರ ಮಾರ್ಗ ಬದಲಾವಣೆಯನ್ನು ಮಾಡಲಾಗಿದೆ. ಅದೇನು ಅಂತ ಮುಂದೆ ಓದಿ.
ಈ ಕುರಿತಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮುಖ್ಯಮಂತ್ರಿಗಳು ದಿನಾಂಕ: 08.02.2024 ರಂದು ವಿಧಾನ ಸೌಧದಲ್ಲಿ ಜನಸ್ಪಂದನ ಕಾರ್ಯಕ್ರವನ್ನು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವ ತಯಾರಿ ಸಲುವಾಗಿ ದಿ. 07.02.2024 ರಂದು ಮತ್ತು ಕಾರ್ಯಕ್ರಮದ ದಿನ ದಿ. 08.02.2024 ಗಳಂದು ವಿಧಾನ ಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ವೃತ್ತದಿಂದ ಗೇಟ್ ನಂಬರ್-04 ರವರಗೆ ಸಂಚಾರವನ್ನು ನಿಷೇಧಿಸಲಾಗಿರುತ್ತದೆ ಎಂದು ತಿಳಿಸಿದೆ.
ದಿ. 07.02.2024 ಮತ್ತು 08.02.2024 ಗಳಂದು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ
1. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವಾಗಿ ಡಿ. ದೇವರಾಜು ಅರಸು ರಸ್ತೆಯಲ್ಲಿ ಬರುವ ವಾಹನಗಳು ಎ.ಜಿ.ಎಸ್. ವೃತ್ತ ಮೂಲಕ ಎಂ.ಎಸ್. ಬಿಲ್ಡಿಂಗ್ ಒಳಭಾಗದಿಂದ ಪ್ರವೇಶಿಸಿ ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಎಡ ತಿರುವು ಪಡೆದುಕದೊಂಡು ಸಂಚರಿಸುವಂತೆ ಹೇಳಿದೆ.
2. ಚಾಲುಕ್ಯ ವೃತ್ತದಿಂದ ಬರುವ ವಾಹನಗಳು ಸಿ.ಐ.ಡಿ. ಕಛೇರಿ ಮುಂಭಾಗವಾಗಿ ಚಲಿಸಿ ಮಹಾರಾಣಿ ಕಾಲೇಜು ಅಪ್ಸರ್ ಕ್ಯಾಂಪ್ ಮಾರ್ಗವಾಗಿ ಎಡ ತಿರುವು ಪಡೆದು ಕೆ.ಆರ್. ವೃತ್ತದಿಂದ ಅಂಬೇಡ್ಕರ್ ವೀದಿ / ಸಿಟಿ ಸಿವಿಲ್ ಕೋರ್ಟ್ ರಸ್ತೆಯನ್ನು ಉಪಯೋಗಿಸಬಹುದು.
ದಿನಾಂಕ 08.02.2024 ರಂದು ಬೆಳಗ್ಗೆ 6.00 ರಿಂದ ರಾತ್ರಿ 07-00 ರ ವರೆಗೆ ವಾಹನ ನಿಲುಗಡೆ ನಿಷೇಧವಿರುವ ರಸ್ತೆಗಳ ವಿವರ:
- ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ
- ರಾಜಭವನ ರಸ್ತೆ, ಪ್ಯಾಲೇಸ್ ರಸ್ತೆ
- ಡಿ. ದೇವರಾಜು ಅರಸು ರಸ್ತೆ
- ಶೇಷಾದ್ರಿ ರಸ್ತೆ
ದಿನಾಂಕ 08.02.2024 ರಂದು ಸಾರ್ವಜನಿಕ ವಾಹನ ನಿಲುಗಡೆ ಸ್ಥಳಗಳು (ಸ್ಥಳ ಲಭ್ಯತೆಯ
ಮೇಲೆ/ಪಾವತಿ ನಿಲುಗಡೆ)
- ಸೌಟ್ ಮತ್ತು ಗೈಡ್ಸ್ ಪಾರ್ಕಿಂಗ್ ಸ್ಥಳ
- ಜ್ಞಾನ ಜ್ಯೋತಿ ಮತ್ತು ಬೆಂಗಳುರು ವಿಶ್ವವಿಧ್ಯಾಲಯ ಪಾರ್ಕಿಂಗ್ ಸ್ಥಳ
- ಸೆಂಟ್ರಲ್ ಕಾಲೇಜ್
- ಸ್ವಾತಂತ್ರ್ಯ ಉದ್ಯಾನವನ
- ಅರಮನೆ ಮೈದಾನ ಪಾರ್ಕಿಂಗ್ ಸ್ಥಳ
ರಾಜ್ಯ ಸರ್ಕಾರದ ‘ಚಲೋ ದೆಹಲಿ’ ಪ್ರತಿಭಟನೆಗೆ ಟಕ್ಕರ್: ವಿಧಾನಸಭೆ ಬಳಿ ಬಿಜೆಪಿ ಧರಣಿ