ಬೆಂಗಳೂರು: ನಮ್ಮ ಮೆಟ್ರೋದಲ್ಲಿ ತೆರಳೋದಕ್ಕೆ ಹೋದಂತ ರೈತರೊಬ್ಬರನ್ನು ಕೊಳಕು ಬಟ್ಟೆಯ ಕಾರಣಕ್ಕೆ ಭದ್ರತಾ ಸಿಬ್ಬಂದಿಗಳು ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಸಂಚಾರಕ್ಕೆ ನಿರಾಕರಿಸಲಾಗಿತ್ತು. ಈ ಪ್ರಕರಣ ಸಂಬಂಧ ರಾಜ್ಯ ಮಾನವ ಹಕ್ಕುಗಳ ಆಯೋಗವು ಬಿಎಂಆರ್ ಸಿಎಲ್ ಗೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತಂತೆ ರಾಜ್ಯ ಮಾನವಹಕ್ಕುಗಳ ಆಯೋಗದಿಂದ ನಮ್ಮ ಮೆಟ್ರೋದ ಎಂಡಿಗೆ ನೋಟಿಸ್ ನೀಡಲಾಗಿದ್ದು, ಅದರಲ್ಲಿ ವ್ಯಕ್ತಿಯ ಬಟ್ಟೆಯ ಆಧಾರದಲ್ಲಿ ಅವಕಾಶ ನಿರಾಕರಣ ಮಾಡುವಂತಿಲ್ಲ. ಸಾರ್ವಜನಿಕ ಸಾರಿಗೆಯಲ್ಲಿ ಅವಕಾಶ ನಿರಾಕರಿಸುವಂತಿಲ್ಲ. ಆ ರೀತಿಯಾದ್ರೇ ಅದು ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬುದಾಗಿ ಎಚ್ಚರಿಸಿದೆ.
ರಾಜಾಜಿನಗರ ನಮ್ಮ ಮೆಟ್ರೋ ನಿಲ್ದಾಣದಲ್ಲಿ ರೈತನ ಕೊಳಕು ಬಟ್ಟೆ ಧರಿಸಿದ ಕಾರಣಕ್ಕೆ ಪ್ರಯಾಣ ನಿರಾಕರಿಸಿರೋದು ತಪ್ಪು. ಈ ಕುರಿತಂತೆ 4 ವಾರಗಳಲ್ಲಿ ಸಂಪೂರ್ಣ ವರದಿಯನ್ನು ನೀಡುವಂತೆ ಬಿಎಂಆರ್ ಸಿಎಲ್ ಎಂಡಿಗೆ ಸೂಚಿಸಲಾಗಿದೆ. ಈ ಮೂಲಕ ನಮ್ಮ ಮೆಟ್ರೋಗೆ ಮಾನವಹಕ್ಕುಗಳ ಆಯೋಗವು ಶಾಕ್ ನೀಡಿದೆ.
BREAKING: ‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದ ರಾಯಭಾರಿಯಾಗಿ ‘ನಟ ಡಾಲಿ ಧನಂಜಯ್’ ನೇಮಕ
BREAKING: ಕಾಶ್ಮೀರದಲ್ಲಿ ‘ಉಗ್ರರೊಂದಿಗೆ ಸಂಪರ್ಕ’: ಮತ್ತೊಂದು ‘ಮುಸ್ಲಿಂ ಸಂಘಟನೆ’ಯನ್ನು ‘ಕೇಂದ್ರ ಸರ್ಕಾರ’ ನಿಷೇಧ