ಬೆಂಗಳೂರು: ಜಿಲ್ಲಾ ಆರೋಗ್ಯ ಮಂಡಳಿ ನೀಡುವ ಪ್ರಮಾಣ ಪತ್ರ ಪರಿಶೀಲಿಸಲು ರಾಜ್ಯ ಆರೋಗ್ಯ ಮಂಡಳಿಯನ್ನು ರಚಿಸಿ ಸರ್ಕಾರ ಆದೇಶಿಸಿದೆ. ಈ ಮೂಲಕ ಜಿಲ್ಲಾ ಆರೋಗ್ಯ ಮಂಡಳಿಯಿಂದ ಬೇಕಾಬಿಟ್ಟಿ ಪ್ರಮಾಣಪತ್ರ ನೀಡುವುದಕ್ಕೆ ಬ್ರೇಕ್ ಹಾಕಲಾಗಿದೆ.
ಇಂದು ಈ ಸಂಬಂಧ ಆದೇಶ ಹೊರಡಿಸಿರುವಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು, ಸರ್ಕಾರದ ಅಧಿಸೂಚನೆ ಸಂಖ್ಯೆ:ಆಕುಕ 220 ಹೆಚ್‌ಎಸ್ಎಹೆಚ್2025, ದಿನಾಂಕ:27/05/2025, ಮೇಲ್ಕಾಣಿಸಿದ ವಿಷಯ ಮತ್ತು ಉಲ್ಲೇಖ(2) ಕ್ಕೆ ಸಂಬಂಧಿಸಿದಂತೆ, 6(3) ಪ್ರಕರಣದಲ್ಲಿ ವರ್ಗಾವಣೆ ಕೋರಿಕೆಗಾಗಿ ಜಿಲ್ಲಾ ಆರೋಗ್ಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಲು ಹಾಗೂ ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವರ್ಗದವರು ನೇರವಾಗಿ ಜಿಲ್ಲಾ ಆರೋಗ್ಯ ಮಂಡಳಿಗೆ ಕೋರಿಕೆ ನೀಡಿ ಜಿಲ್ಲಾ ಆರೋಗ್ಯ ಮಂಡಳಿ ನೀಡಿದ ವರದಿಯನ್ನು ಲಗತ್ತಿಸಲು ಸೂಚಿಸಿದೆ ಎಂದಿದ್ದಾರೆ.
ಮುಂದುವರೆದು, “ಗಂಭೀರ ಕಾಯಿಲೆ ಅಥವಾ ಮಾರಣಾಂತಿಕ ಕಾಯಿಲೆ ಹೊಂದಿರುವ ವೈದ್ಯಾಧಿಕಾರಿ ಅಥವಾ ಸಿಬ್ಬಂದಿಗೆ ಅಥವಾ ಅವರ ಸಂಗಾತಿ ಅಥವಾ ಮಗು ಅಥವಾ ಕರ್ನಾಟಕ ಸಿವಿಲ್ ಸೇವೆ(ವೈದ್ಯಕೀಯ ಹಾಜರಾತಿ ನಿಯಮಗಳು) ಅಡಿಯಲ್ಲಿ ಘೋಷಿಸಲಾದ ಅವಲಂಬಿತರಿಗೆ ಅಂತಹ ವೈದ್ಯಾಧಿಕಾರಿ ಅಥವಾ ಸಿಬ್ಬಂದಿ ಕೆಲಸ ಮಾಡುವ ಸ್ಥಳದಲ್ಲಿ ಸದರಿ ಕಾಯಿಲೆಗೆ ವೈದ್ಯೋಪಚಾರ ಲಭ್ಯವಿಲ್ಲದ ಸಂದರ್ಭದಲ್ಲಿ ವೈದ್ಯೋಪಚಾರ ಸಿಗುವ ಸ್ಥಳಕ್ಕೆ ವರ್ಗಾವಣೆ ಅಗತ್ಯವಿದ್ದಲ್ಲಿ ಜಿಲ್ಲಾ ಆರೋಗ್ಯ ಮಂಡಳಿಯು ಅತ್ಯಂತ ಜಾಗರೂಕತೆಯಿಂದ ಸದರಿ ಸಿಬ್ಬಂದಿ ಕೆಲಸ ಮಾಡುವ ಸ್ಥಳದಲ್ಲಿ ಅಂತಹ ಕಾಯಿಲೆಗೆ ವೈದ್ಯೋಪಚಾರ ಲಭ್ಯವಿಲ್ಲವೆಂದು ಖಾತರಿಗೊಳಿಸಿಕೊಂಡು ಪ್ರಮಾಣ ಪತ್ರವನ್ನು ನೀಡಲು ಕೂಡ ತಿಳಿಸಿದೆ.
ಆದಾಗ್ಯೂ ಅವಶ್ಯಕ ಸಂದರ್ಭಗಳಲ್ಲಿ ಜಿಲ್ಲಾ ಆರೋಗ್ಯ ಮಂಡಳಿಯು ನೀಡಿದಂತಹ ಪ್ರಮಾಣ ಪತ್ರವು ಉಲ್ಲೇಖ(1) ನಿಯಮ 6(3) ರಂತೆ ನೀಡಲಾಗಿದೆಯೇ ಎಂದು ಮತ್ತೊಮ್ಮೆ ಪರಿಶೀಲಿಸುವ ಅವಕಾಶ ಕಲ್ಪಿಸಲು ಕೆಳಕಾಣಿಸಿದಂತೆ ರಾಜ್ಯ ಆರೋಗ್ಯ ಮಂಡಳಿಯನ್ನು ಕರ್ನಾಟಕ ವೈದ್ಯಕೀಯ ಮಂಜೂರಾತಿ ನಿಯಮ 1963ರ ನಿಯಮ 22(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯ ಆರೋಗ್ಯ ಮಂಡಳಿಯನ್ನು ಕೆ.ಸಿ ಜನರಲ್ ಆಸ್ಪತ್ರೆ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ರಚಿಸಲಾಗಿದೆ.
ಹೀಗಿದೆ ರಾಜ್ಯ ಆರೋಗ್ಯ ಮಂಡಳಿಯ ಪ್ರಮಾಣ ಪತ್ರ ಪರಿಶೀಲನಾ ಸಮಿತಿ
1. ವೈದ್ಯಕೀಯ ಅಧೀಕ್ಷಕರು: ಕೆ.ಸಿ ಜನರಲ್ ಆಸ್ಪತ್ರೆ-ಸಭಾಪತಿ
2. ವೈದ್ಯಕೀಯ ವಿಭಾಗ ತಜ್ಞ ವೈದ್ಯರು:- ಸರ್.ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ-ಸದಸ್ಯರು
3. ENT ವಿಭಾಗ ತಜ್ಞ ವೈದ್ಯರು:- ಕೆ.ಸಿ ಜನರಲ್ ಆಸ್ಪತ್ರೆ-ಸದಸ್ಯರು
4. ಅಸ್ಥಿ ಚಿಕಿತ್ಸಾ ತಜ್ಞ ವೈದ್ಯರು ವಿಭಾಗ:-ಸಾರ್ವಜನಿಕ ಆಸ್ಪತ್ರೆ,ಜಯನಗರ- ಸದಸ್ಯರು
5. ಚರ್ಮ ರೋಗ ತಜ್ಞರು:- ಕೆ.ಸಿ ಜನರಲ್ ಆಸ್ಪತ್ರೆ-ಸದಸ್ಯರು
6. ಶಸ್ತ್ರಚಿಕಿತ್ಸಾ ತಜ್ಞರು:- ಸರ್.ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ-ಸದಸ್ಯರು
7. ಡಿ.ಡಿ -ಮೆಂಟಲ್ ಹೆಲ್ತ್, ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು. ಸದಸ್ಯರು
8. ನರರೋಗ ತಜ್ಞರು: ವಿಕ್ಟೋರಿಯಾ ಆಸ್ಪತ್ರೆ,ಬೆಂಗಳೂರು-ಸದಸ್ಯರು
9. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು:- ಕೆ.ಸಿ ಜನರಲ್ ಆಸ್ಪತ್ರೆ-ಸದಸ್ಯರು
10. ನೇತ್ರ ರೋಗ ತಜ್ಞರು:- ಕೆ.ಸಿ ಜನರಲ್ ಆಸ್ಪತ್ರೆ-ಸದಸ್ಯರು
11. ಮೂತ್ರಪಿಂಡ ರೋಗ ತಜ್ಞರು:-INU, ವಿಕ್ಟೋರಿಯಾ ಆಸ್ಪತ್ರೆ ಆವರಣ,ಬೆಂಗಳೂರು-ಸದಸ್ಯರು
12. ಕ್ಯಾನ್ಸರ್ ರೋಗ ತಜ್ಞರು:-ಕಿದ್ವಾಯಿ ಆಸ್ಪತ್ರೆ, ಬೆಂಗಳೂರು-ಸದಸ್ಯರು
13. ಕರಳು ರೋಗ ತಜ್ಞರು:-IGOT, ವಿಕ್ಟೋರಿಯಾ ಆಸ್ಪತ್ರೆ ಆವರಣ,ಬೆಂಗಳೂರು-ಸದಸ್ಯರು
14. ಹೃದಯ ರೋಗ ತಜ್ಞರು:-ಕೆ.ಸಿ ಜನರಲ್ ಆಸ್ಪತ್ರೆ/ಜಯದೇವ ಹೃದ್ರೋಗಗಳ ಆಸ್ಪತ್ರೆ, (ವೈದ್ಯಕೀಯ ವಿಭಾಗ ತಮ್ಮ ವೈದ್ಯ ಸದಸ್ಯರು ಹೆಚ್ಚಿನ ಪರಿಣಿತಿಗಾಗಿ ನಿರ್ದೇಶಿಸಿದ ಪ್ರಕರಣಗಳಿಗೆ ಮಾತ್ರ)
15. ಮೇಲೆ ನಮೂದಿಸದ ತಜ್ಞರ ಅವಶ್ಯಕತೆ ಇದ್ದಲ್ಲಿ ಸಭಾಪತಿಗಳ ಅಪ್ಪಣೆ ಮೇರೆಗೆ ಆಹ್ವಾನಿತರು.
ಸದರಿ ಮಂಡಳಿಯು ವರ್ಗಾವಣೆ/ವೈದ್ಯಕೀಯ ರಜೆ ಪ್ರಕರಣಗಳಲ್ಲಿ ರಾಜ್ಯ ಆರೋಗ್ಯ ಮಂಡಳಿಯಾಗಿ ಕಾರ್ಯನಿರ್ವಹಿಸುವುದು. ರಾಜ್ಯ ಆರೋಗ್ಯ ಮಂಡಳಿಯು ವರ್ಗಾವಣೆ ಪ್ರಕರಣಗಳಲ್ಲಿ ಆದ್ಯತೆ ಮೇರೆಗೆ ಪರಿಶೀಲಿಸಿ ಸಮಯವನ್ನು ಪರಿಗಣಿಸಿ ವರದಿ ಸಲ್ಲಿಸುವುದು, ಕೆ.ಸಿ ಜನರಲ್ಲಿ ಸಾರ್ವಜನಿಕ ಆಸ್ಪತ್ರೆ ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ರಾಜ್ಯ ಆರೋಗ್ಯ ಮಂಡಳಿಯು ಸೇರಿ ಕಾರ್ಯನಿರ್ವಹಿಸುವುದು. ಸದರಿ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅವಶ್ಯಕತೆ ಇದ್ದಲ್ಲಿ ಮಾತ್ರ ಸಭಾಪತಿಗಳು ತಜ್ಞ ವೈದ್ಯರುಗಳನ್ನು ಆಹ್ವಾನಿಸುವುದು. ಸಭಾಪತಿಗಳನ್ನು ಸೇರಿಸಿ ಮೂರು ಸದಸ್ಯರ QUORUM ಅವಶ್ಯಕ ಎಂದಿದ್ದಾರೆ.
BIG NEWS: ರಾಜ್ಯದಲ್ಲಿ ‘ಹೊಸ ಜಿಲ್ಲೆ ಉದಯ’ದ ಸುಳಿವು ನೀಡಿದ ಸಿಎಂ ಸಿದ್ಧರಾಮಯ್ಯ
BIG NEWS : ಪ್ರಧಾನಿ ಮೋದಿಯಿಂದ ದೇಶದ ಬಡತನ ಕಡಿಮೆಯಾಗಿಲ್ಲ : CM ಸಿದ್ದರಾಮಯ್ಯ ವಾಗ್ದಾಳಿ