ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಈ ಪರಿಣಾಮ ಹಲ್ಲೆ, ಹತ್ಯೆ, ಗ್ಯಾಂಗ್ ವಾರ್ ಗಳು ಹೆಚ್ಚಾಗುತ್ತಿವೆ. ಇದಕ್ಕೆ ರಾಜ್ಯ ಸರ್ಕಾರ ಪೊಲೀಸರನ್ನು ತಮ್ಮ ಕೈಗೊಂಬೆ ಮಾಡಿಕೊಂಡು ಆಟ ಆಡ್ತಿರೋದೇ ಆಗಿದೆ ಅಂತ ಕರ್ನಾಟಕ ಬಿಜೆಪಿ ವಾಗ್ಧಾಳಿ ನಡೆಸಿದೆ.
ಇಂದು ಈ ಬಗ್ಗೆ ವೀಡಿಯೋ ಸಹಿತ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಬಿಜೆಪಿಯು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದಾಗಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಪರಿಣಾಮ ಅರಾಜಕತೆ ತಾಂಡವವಾಡುತ್ತಿದೆ ಅಂತ ಕಿಡಿಕಾರಿದೆ.
ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸುವುದಕ್ಕೆ ಹತ್ತಾರು ಪೊಲೀಸರನ್ನು ಸಿದ್ಧರಾಮಯ್ಯ ಸರ್ಕಾರ ಕಳುಹಿಸಿಕೊಡುತ್ತೆ. ಮತ್ತೊಂದೆಡೆ ಚೆನ್ನಗರಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಮತಾಂಧರ ಪರ ನಿಲ್ಲುತ್ತಾ ಪೊಲೀಸ್ ಅಧಿಕಾರಿಗಳನ್ನೇ ಅಮಾನತು ಮಾಡುತ್ತೆ ಅಂತ ಹೇಳಿದೆ.
ಪೊಲೀಸರನ್ನು ತಮ್ಮ ಕೈಗೊಂಬೆ ಮಾಡಿಕೊಂಡು ಆಟ ಆಡಿಸುತ್ತಿರುವ ಪರಿಣಾಮ ಕಾನೂನು ಮತಾಂಧರ ತಾಳಕ್ಕೆ ಕುಣಿಯುತ್ತಿದೆ. ಹೀಗಾಗಿ ಯುವತಿಯರ ಮೇಲೆ ಅತ್ಯಾಚಾರ, ಕೊಲೆ, ಹಲ್ಲೆ, ನಡೆಯುತ್ತಿದೆ. ಭಯೋತ್ಫಾದನೆ, ಕೋಮುಗಲಭೆಗಳು ರಾಜ್ಯದಲ್ಲಿ ರಾರಾಜಿಸುತ್ತಿವೆ ಎಂದು ಗುಡುಗಿದೆ.
ರಾಜ್ಯದಲ್ಲಿ @INCKarnataka ಸರ್ಕಾರದಿಂದಾಗಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಪರಿಣಾಮ ಅರಾಜಕತೆ ತಾಂಡವವಾಡುತ್ತಿದೆ.
ಬಿಜೆಪಿ ಶಾಸಕ @HPoonja ಅವರನ್ನು ಬಂಧಿಸುವುದಕ್ಕೆ ಹತ್ತಾರು ಪೊಲೀಸರನ್ನು @siddaramaiah ಸರ್ಕಾರ ಕಳುಹಿಸಿಕೊಡುತ್ತೆ. ಮತ್ತೊಂದೆಡೆ ಚೆನ್ನಗರಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಮತಾಂಧರ ಪರ… pic.twitter.com/TmB4AIrHYV
— BJP Karnataka (@BJP4Karnataka) May 25, 2024
ರಾಹುಲ್ ದ್ರಾವೀಡ್ ಬದಲಿಗೆ ʻಟೀಂ ಇಂಡಿಯಾʼದ ನೂತನ ಕೋಚ್ ಆಗಿ ʻಗೌತಮ್ ಗಂಭೀರ್ʼ ಆಸಕ್ತಿ : ವರದಿ
ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಬೆದರಿಕೆ ಕೇಸ್: ಕಾನೂನು ಎಲ್ಲರಿಗೂ ಒಂದೇ: CM ಸಿದ್ದರಾಮಯ್ಯ