Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವ್ಯಾಟಿಕನ್ ಗೆ ಮೊದಲ ಅಮೇರಿಕನ್ ಪೋಪ್ ‘ರಾಬರ್ಟ್ ಫ್ರಾನ್ಸಿಸ್ ಪ್ರೆವೊಸ್ಟ್’ | Robert Francis Prevost

09/05/2025 7:19 AM

BIG NEWS : ಭಾರತದ ಒಂದು ಕ್ಷಿಪಣಿಯನ್ನು ಸಹ ನಾವು ತಡೆಯಲಾಗಲಿಲ್ಲ : ಪ್ರಜೆಯಿಂದಲೇ ಪಾಕಿಸ್ತಾನದ ಮರ್ಯಾದೆ ಹರಾಜು

09/05/2025 7:11 AM

‘ದೇಶದ ಯಾವುದೇ ಭಾಗದಲ್ಲಿ ಆಹಾರ ಪದಾರ್ಥ, ಅಗತ್ಯ ವಸ್ತುಗಳ ಕೊರತೆ ಇಲ್ಲ’: ಪ್ರಹ್ಲಾದ್ ಜೋಶಿ | India pak tensions

09/05/2025 7:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯಾಧ್ಯಂತ ‘ಹುಕ್ಕಾ ಬಾರ್’ ಸಂಪೂರ್ಣ ನಿಷೇಧ: ‘ರಾಜ್ಯ ಸರ್ಕಾರ’ ಅಧಿಕೃತ ಆದೇಶ | Hookah Bar
KARNATAKA

BREAKING: ರಾಜ್ಯಾಧ್ಯಂತ ‘ಹುಕ್ಕಾ ಬಾರ್’ ಸಂಪೂರ್ಣ ನಿಷೇಧ: ‘ರಾಜ್ಯ ಸರ್ಕಾರ’ ಅಧಿಕೃತ ಆದೇಶ | Hookah Bar

By kannadanewsnow0907/02/2024 8:33 PM

ಬೆಂಗಳೂರು: ರಾಜ್ಯದಲ್ಲಿ ನಿಕೋಟಿನ್ ರಹಿತ ತಂಬಾಕು ರಹಿತ, ಸ್ವಾಧಭರಿತ, ಸ್ವಾಧರಹಿತ ಹುಕ್ಕ ಮೊಲಾಸಸ್, ಶಿಶಾ ಹಾಗೂ ಇದೇ ಮಾದರಿಯ ಇನ್ನಿತರೆ ಹೆಸರುಗಳಿಂದ ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಜಾಹೀರಾತು, ಪ್ರಚೋನೆ, ಸಂಗ್ರಹಣೆ, ವ್ಯಾಪಾರವನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸಿರುವ ಗ್ಲೋಬಲ್ ಅಡಲ್ ಟೊಬ್ಯಾಕೊ ಸರ್ವೇ 2016-17 ಅಧ್ಯಯನ ಪ್ರಕಾರ, ಕರ್ನಾಟಕದಲ್ಲಿ 22.8% ವಯಸ್ಕರು (15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಒಂದಲ್ಲ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಈ ಪೈಕಿ ಶೇ.8.8 ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ 23.9% ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ವರೋಕ್ತ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ ಎಂದಿದ್ದಾರೆ.

ಭಾರತದಲ್ಲಿ ತಂಬಾಕು ಉತ್ಪನ್ನಗಳ ಸೇವನೆ, ಮಾರಾಟ, ಜಾಹೀರಾತು, ಸಂಗ್ರಹಣೆ, ವಾಣಿಜ್ಯ ಮಹಾರ, ಉತ್ಪಾದನೆ, ಹಂಚಿಕೆ ಇವುಗಳನ್ನು ಸಿಗರೇಟ್ ಅಂಡ್ ಟೊಬ್ಯಾಕೋ ಪ್ರಾಡಕ್ಟ್ ಆಕ್ಟ್ (COTPA) 2003 ರಲ್ಲಿ ನಿಯಂತ್ರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಧಯನಗಳ ಪುಕಾರ, 45 ನಿಮಿಷಗಳ ಹುಕ್ಕಾ ಸೇವನ, 100 ಸಿಗರೇಟ್ ಸೇದುವುದಕ್ಕೆ ಸಮನಾಗಿರುತ್ತದೆ ಹಾಗೂ ಆರೋಗ್ಯಕ್ಕೆ ಮಾರಕ ಎಂದು ಉಲ್ಲೇಖಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಹುಕ್ಕಾ ಒಂದು ವ್ಯಸನಕಾರಿ ವಸ್ತುವಾಗಿದ್ದು, ಅದರಲ್ಲಿರುವ ನಿಕೋಟಿನ್ ಅಥವಾ ತಂಬಾಕು ಹಾಗೂ ಮೊಲಾಸಸ್ ಅಥವಾ ಸುವಾಸನಭರಿತ ಪದಾರ್ಥಗಳಲ್ಲಿ ಹಚ್ಚಿನ ಪುಮಾಣದಲ್ಲಿ ಕಾರ್ಬನ್ ಮಾನಾಕ್ಸೆಡ್ ರಾಸಾಯನಿಕ ವಸ್ತುವನ್ನು ಒಳಗೊಂಡಿದ್ದು ಆರೋಗ್ಯಕ್ಕೆ ಅತ್ಯಂತ ಮಾರಿಕ ಎಂದು ಎಚ್ಚರಿಸಿದ್ದಾರೆ.

COTPA 2003ರ ಕಾಯ್ದೆಯ ಕಲಂ 3(ಪಿ) ಶೆಡ್ಯೂಲ್‌ನಲ್ಲಿ ಹುಕ್ಕಾವನ್ನು ತಂಬಾಕು ಉತ್ಪನ್ನವೆಂದು ವರ್ಗೀಕರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿ ಸಮುದಾಯದವರು ತಂಬಾಕು ಸಹಿತ ಅಥವಾ ಹುಕ್ಕಾ ಮೊಲಾಸನ್ ಇತರ ಹೆಸರಿನಿಂದ ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವನೆಮಾಡಿ ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ ಎಂದು ಹೇಳಿದ್ದಾರೆ.

COTPA 2003 ಸೆಕ್ಷನ್ 4ರಡಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ ಮುಂದುವರಿದು, 30 ಹಾಗೂ ಮೂವತ್ತಕ್ಕಿಂತ ಹೆಚ್ಚು, ಆಸನ ವ್ಯವಸ್ಥೆ ಇರುವ ರೆಸ್ಟೋರೆಂಟ್, ಪಬ್‌ಗಳಲ್ಲಿ ನಿಗದಿಪಡಿಸಿದ ಪ್ರತ್ಯೇಕ ಧೂಮಪಾನ ವಲಯದಲ್ಲಿ ಮಾತ್ರ ಮಾಡಬಹುದಾಗಿರುತ್ತದೆ ಧೂಮಪಾನ ವಲಯ ಅಥವಾ ಕೊಠಡಿಯಲ್ಲಿ ಪ್ರಚೋದಿಸುವ ವಸ್ತುಗಳನ್ನು ಹಾಗೂ ಇತರ ಸೇವೆಗಳನ್ನು ನೀಡುವುದು COTPA 2003 ಕಾಯ್ದೆಯ ಸೆಕ್ಷನ್ 4ರ ಉಲ್ಲಂಘನೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.

COTPA ಕಲಂ 6(a) ಮತ್ತು 6(b) ಪುಕಾರ, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ತಂಬಾಕು ಸೇವನ ಮಾಡುವಂತೆ ಪ್ರಚೋದಿಸುವುದು ಹಾಗೂ ಶೈಕ್ಷಣಿಕ ಸಂಸ್ಥೆಯ ನೂರು ಗಜದ ವ್ಯಾಪ್ತಿಯಲ್ಲಿ ಹುಕ್ಕಾ ಒಳಗೊಂಡಂತೆ ಇತರ ತಂಬಾಕು ವಸ್ತುಗಳ ಮಾರಾಟ/ಉವಯೋಗ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ 2015 ಸೆಕ್ಷನ್ 77ರ ಪುಕಾರ, ಅಪ್ರಾಪ್ತರಿಗೆ ತಂಬಾಕು ಅಥವಾ ಇತರೆ ಮಾದಕ ವಸ್ತುಗಳ ಸೇವನ ಬಗ್ಗೆ ವುಚೋದಿಸುವುದು ಹಾಗೂ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದಿದ್ದಾರೆ.

ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ನಿಯಮ 2015 ರಡಿ ನಿಕೋಟಿನ್ ಅನ್ನು ವಿಷ ಅಥವಾ ಅಪಾಯಕಾರಿ ರಾಸಾಯನಿಕ ವಸ್ತುವಾಗಿ ವರ್ಗೀಕರಿಸಲಾಗಿದೆ. ಹುಕ್ಕಾವು ಮುಚ್ಚಿರುವ ಕೊಠಡಿಯಲ್ಲಿ ನಳಿಕೆ ಅಥವಾ ವೈಫ್ ಸಲಕರಣೆ ಮೂಲಕ ಬಾಯಿಯಿಂದ ಸೇವನೆ ಮಾಡುವ ಉತ್ಪನ್ನವಾಗಿರುತ್ತದೆ. ಇದರಿಂದ ಬಾಯಿ ಮೂಲಕ ಸಾಂಕ್ರಾಮಿಕ ಕಾಯಿಲೆಗಳಾದ ಹರ್ಪಿಸ್, ಕ್ಷಯರೋಗ, ಹೆಪಟೈಟಿಸ್, ಕೋವಿಡ್ 19 ಹಾಗೂ ಇತರ ಕಾಯಿಲೆಗಳು ಹರಡುವ ಆತಂಕವಿದೆ ಎಂದು ಹೇಳಿದ್ದಾರೆ.

ಹುಕ್ಕಾ ಬಾರ್ ವ್ಯವಸ್ಥೆಯು ರಾಜ್ಯ ಅಗ್ನಿ ಅನಾಹುತಗಳಿಗೆ ಕಾರಣವು ಮತ್ತು ರಾಜ್ಯ ಅಗ್ನಿ ನಿಯಂತ್ರಣ ಹಾಗೂ ಅಗ್ನಿ ಸುರಕ್ಷತೆ ಕಾಯ್ದೆ ಉಲ್ಲಂಘನೆ ಆಗುತ್ತದೆ. ಹುಕ್ಕಾ ಬಾರ್ ಗಳು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯಿದೆ 2006 ಹಾಗೂ 2.1.1 ಶೆಡ್ಯೂಲ್ 5ರ ನಿಬಂಧನೆಗಳ ಮೇರೆಗೆ ಪರವಾನಗಿ ಪಡೆದಿರುತ್ತವೆ. ಹೋಟೆಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಹುಕ್ಕಾ ಸೇವನೆ ಮಾಡುವುದರಿಂದ ಆಹಾರ ಪದಾರ್ಥಗಳು, ಸಾರ್ವಜನಿಕರ ಸೇವನೆಗೆ ಅಸುರಕ್ಷಿತವಾಗಿರುತ್ತದೆ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದಿದ್ದಾರೆ.

ಸಂವಿಧಾನದ 47ನೇ ಪರಿಚ್ಛೇದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದಂತೆ, ಸಾರ್ವಜನಿಕರ ಆರೋಗ್ಯ ಕಾವಾಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿರುತ್ತದೆ. ಒಟ್ಟಾರೆಯಾಗಿ, ಹುಕ್ಕಾ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ನಿಕೋಟಿನ್ ರಹಿತ ತಂಬಾಕು ರಹಿತ ಸ್ವಾದಭರಿತ, ಸ್ವಾಧರಹಿತ ಹುಕ್ಕಾ ಮೊಲಾಸನ್, ಶಿಶಾ ಹಾಗೂ ಇದೇ ಮಾದರಿಯ ಇನ್ನಿತರ ಹೆಸರುಗಳಿಂದ ಕರೆಯಲ್ಪಡುವ ಹುಕ್ಕಾ ಉತನಗಳ ಮಾರಾಟ, ಸೇವನೆ, ಜಾಹೀರಾತು, ವುಚೋದನೆ, ಸಂಗ್ರಹಣೆ, ವ್ಯಾಪಾರವನ್ನು ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಖಡಕ್ ಆದೇಶ ಮಾಡಿದ್ದಾರೆ.

ಇದನ್ನು ಉಲ್ಲಂಘನೆ ಮಾಡಿದವರ ವಿರುದ್ಧ COTPA 2003, ಕಾಯ ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದ 2015, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ನಿಯಮ 2015 ಮತ್ತು ಭಾರತೀಯ ದಂಡಸಂಹಿತ ಮತ್ತು ಅ ನಿಯಂತ್ರಣ ಹಾಗೂ ಅಗ್ನಿ ಸುರಕ್ಷತೆ ಕಾಯಿದ ಪ್ರಕಾರ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.

ರಾಜ್ಯದ ಜನತೆ ಗಮನಕ್ಕೆ: ಈ ‘ಡೈಡ್ ಲೈನ್’ ಒಳಗೆ ‘ವನ್ಯಜೀವಿ ಅಂಗಾಂಗ’ ವಾಪಾಸ್ ಕೊಡಿ, ಇಲ್ಲ ‘ಕೇಸ್ ಫಿಕ್ಸ್’

BREAKING : ಶರದ್ ಪವಾರ್ ಪಕ್ಷಕ್ಕೆ ಹೊಸ ಹೆಸರು ಘೋಷಿಸಿದ ಚುನಾವಣಾ ಆಯೋಗ

Share. Facebook Twitter LinkedIn WhatsApp Email

Related Posts

BREAKING : ‘ಆಪರೇಷನ್ ಸಿಂಧೂರ್’ : ಸೈನಿಕರಿಗೆ ಬೆಂಬಲ ಸೂಚಿಸಲು ಇಂದು ಕಾಂಗ್ರೆಸ್‌ ನಿಂದ ‘ತಿರಂಗಾ ಯಾತ್ರೆ’

09/05/2025 6:47 AM1 Min Read

BREAKING : ಬೆಂಗಳೂರಿನ ‘HAL’ ನಲ್ಲಿ ಹೈಅಲರ್ಟ್ : ಓವರ್ ಟೈಮ್ ಕೆಲಸಕ್ಕೆ ಸಿದ್ಧರಾಗಿರಿ ಎಂದು ಸಿಬ್ಬಂದಿಗಳಿಗೆ ಸೂಚನೆ

09/05/2025 6:13 AM1 Min Read

BREAKING : ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ : ಸಿಎಂ ಸಿದ್ದರಾಮಯ್ಯ

09/05/2025 6:02 AM1 Min Read
Recent News

BREAKING : ವ್ಯಾಟಿಕನ್ ಗೆ ಮೊದಲ ಅಮೇರಿಕನ್ ಪೋಪ್ ‘ರಾಬರ್ಟ್ ಫ್ರಾನ್ಸಿಸ್ ಪ್ರೆವೊಸ್ಟ್’ | Robert Francis Prevost

09/05/2025 7:19 AM

BIG NEWS : ಭಾರತದ ಒಂದು ಕ್ಷಿಪಣಿಯನ್ನು ಸಹ ನಾವು ತಡೆಯಲಾಗಲಿಲ್ಲ : ಪ್ರಜೆಯಿಂದಲೇ ಪಾಕಿಸ್ತಾನದ ಮರ್ಯಾದೆ ಹರಾಜು

09/05/2025 7:11 AM

‘ದೇಶದ ಯಾವುದೇ ಭಾಗದಲ್ಲಿ ಆಹಾರ ಪದಾರ್ಥ, ಅಗತ್ಯ ವಸ್ತುಗಳ ಕೊರತೆ ಇಲ್ಲ’: ಪ್ರಹ್ಲಾದ್ ಜೋಶಿ | India pak tensions

09/05/2025 7:01 AM

BREAKING : ಪಾಕಿಸ್ತಾನದ 50 ಡ್ರೋನ್ ಗಳನ್ನು ನಿಷ್ಕ್ರಿಯಗೊಳಿಸಿದ ಭಾರತ | Pakistan’s drone is inactive

09/05/2025 6:59 AM
State News
KARNATAKA

BREAKING : ‘ಆಪರೇಷನ್ ಸಿಂಧೂರ್’ : ಸೈನಿಕರಿಗೆ ಬೆಂಬಲ ಸೂಚಿಸಲು ಇಂದು ಕಾಂಗ್ರೆಸ್‌ ನಿಂದ ‘ತಿರಂಗಾ ಯಾತ್ರೆ’

By kannadanewsnow0509/05/2025 6:47 AM KARNATAKA 1 Min Read

ಬೆಂಗಳೂರು : ಪಹಲ್ಗಾಮ್ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಯೋಧರಿಗೆ ಬೆಂಬಲ ಸೂಚಿಸಲು…

BREAKING : ಬೆಂಗಳೂರಿನ ‘HAL’ ನಲ್ಲಿ ಹೈಅಲರ್ಟ್ : ಓವರ್ ಟೈಮ್ ಕೆಲಸಕ್ಕೆ ಸಿದ್ಧರಾಗಿರಿ ಎಂದು ಸಿಬ್ಬಂದಿಗಳಿಗೆ ಸೂಚನೆ

09/05/2025 6:13 AM

BREAKING : ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ : ಸಿಎಂ ಸಿದ್ದರಾಮಯ್ಯ

09/05/2025 6:02 AM

BREAKING : ಜನಾರ್ಧನ್ ರೆಡ್ಡಿಗೆ ಬಿಗ್ ಶಾಕ್ : ಶಾಸಕ ಸ್ಥಾನದಿಂದ ಅನರ್ಹ, ಗಂಗಾವತಿ ಕ್ಷೇತ್ರಕ್ಕೆ ಮತ್ತೆ ಬೈ ಎಲೆಕ್ಷನ್!

09/05/2025 5:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.