ಬೆಂಗಳೂರು: ರಾಜ್ಯ ಸರ್ಕಾರದಿಂದ ಡೆಂಗ್ಯೂ ನಿಯಂತ್ರಣಕ್ಕೆ ಮಹತ್ವದ ಕ್ರಮ ಎನ್ನುವಂತೆ ಡೆಂಗ್ಯೂ ಪರೀಕ್ಷೆಗೆ 300 ರೂ ದರ ನಿಗದಿ ಪಡಿಸಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತಿದೆ.
ಈಗಾಗಲೇ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ನಂತ್ರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಅಧಿಕಾರಿಗಳ ಜೊತೆಗೆ ನಡೆದಂತ ಸಭೆಯಲ್ಲಿ ಡೆಂಗ್ಯೂ ನಿಯಂತ್ರಣ ಕ್ರಮವಾಗಿ ಪರೀಕ್ಷೆಗೆ ದರ ನಿಗದಿ ಪಡಿಸೋ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಡೆಂಗ್ಯೂ ಬಂದವರಿಗೆ ಎರಡು ಮಾದರಿಯ ಪರೀಕ್ಷೆ ಮಾಡಬೇಕಿದ್ದು, ಪ್ರತಿ ಟೆಸ್ಟ್ ಗೆ ರೂ.300 ನಿಗದಿ ಪಡಿಸೋದಕ್ಕೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಇನ್ನೂ ಡೆಂಗ್ಯೂ ಪ್ರತಿ ಪರೀಕ್ಷೆಗೆ 300 ರೂ ನಿಗದಿ ಮಾಡಿ, ರಾಜ್ಯ ಸರ್ಕಾರ ಇಂದೇ ಅಧಿಕೃತ ಅಧಿಸೂಚನೆ ಪ್ರಕಟಿಸೋ ಸಾಧ್ಯತೆ ಇದೆ. ಆ ಬಗ್ಗೆ ರಾಜ್ಯ ಸರ್ಕಾರ ಶೀಘ್ರವೇ ಅಧಿಸೀಚನೆ ಹೊರಡಿಸಲಿದೆ.
BREAKING: ಕೋಲಾರದಲ್ಲಿ ಮಾಲ್ಟ್ ಮಿಶ್ರಿತ ಹಾಲು ಸೇವಿಸಿದಂತ 19 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು