ಬೆಂಗಳೂರು: ರಾಜ್ಯದ ಗ್ರಾಮೀಣ ಕರ್ನಾಟಕಕ್ಕೆ ಸುಲಲಿತ ಜನಸೇವೆಯ ಗ್ಯಾರಂಟಿಯ ಯೋಜನೆಯಾಗಿ ಪಂಚಮಿತ್ರ ಪೋರ್ಟಲ್ ಮೂಲಕ ವಾಟ್ಸಾಪ್ ಚಾಟ್ ಸೇವೆಯನ್ನು ಆರಂಭಿಸಲಾಗಿದೆ. ಇದೇ ದೇಶದಲ್ಲೇ ಮೊದಲು ಜಾರಿಗೊಳಿಸಿದಂತ ಸೇವೆಯಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗ್ರಾಮ ಪಂಚಾಯ್ತಿಗಳ ಸಂಪೂರ್ಣ ಮಾಹಿತಿ ಈಗ ನಿಮ್ಮ ಅಂಗೈಯಲ್ಲೇ ಲಭ್ಯವಾಗಲಿದೆ. ಅದಕ್ಕಾಗಿ ಪಂಚಮಿತ್ರ ಪೋರ್ಟಲ್ ಮತ್ತು ದೇಶದಲ್ಲಿಯೇ ಮೊದಲ ಬಾರಿ ವಾಟ್ಸಾಪ್ ಚಾಟ್ ಲೋಕಾರ್ಪಣೆಗೊಳಿಸಲಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರಿ ಗ್ರಾಮೀಣ ಕರ್ನಾಟಕಕ್ಕೆ ಸುಲಲಿತ ಜನಸೇವೆಯ ಗ್ರಾರಂಟಿಯ ಯೋಜನೆ ಇದಾಗಿದೆ. ಗ್ರಾಮೀಣ ಜನರು ಜಸ್ಟ್ ವಾಟ್ಸಾಪ್ ಮಾಡಿ ಗ್ರಾಮ ಪಂಚಾಯ್ತಿಯ ಸೇವೆಗಳನ್ನು ಕುಳಿತಲ್ಲೇ ಪಡೆಯಬಹುಗಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಪಂಚಮಿತ್ರ ಪೋರ್ಟಲ್ ವಾಟ್ಸಾಪ್ ಚಾಟ್.?
ಗ್ರಾಮೀಣ ಪ್ರದೇಶದ ಜನರು ಕುಳಿತಲ್ಲೇ ನಾನಾ ಸೇವೆಗಳನ್ನು ಪಡೆಯಲು ಹಾಗೂ ತಮ್ಮ ಕುಂದು ಕೊರತೆಗಳನ್ನು ದಾಖಲಿಸುವ ಸಲುವಾಗಿ ನಮ್ಮ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಪಂಚಮಿತ್ರ ಪೋರ್ಟಲ್ ಹಾಗೂ ವಾಟ್ಸಾಪ್ ಚಾಟ್ ಲೋಕಾರ್ಪಣೆಗೊಳಿಸಿದ್ದು, panchamitra.karnataka.gov.in ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸೇವೆಗಳನ್ನು ಪಡೆಯಬಹುದಾಗಿದೆ.
ಇನ್ನೂ ನೀವು 8277506000 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಖಾಸಗಿ ಸಂಸ್ಥೆಗಳ FSL ವರದಿಗಳಿಗೆಲ್ಲಾ ಸರ್ಕಾರ ಮಾನ್ಯತೆ ಕೊಡುವುದಿಲ್ಲ: ಪೊಲೀಸ್ ಇಲಾಖೆ ವರದಿಯೇ ಅಧಿಕೃತ – ಸಿಎಂ
BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ : ನೆಲಮಂಗಲದಲ್ಲಿ ’73 ಭ್ರೂಣ ಹತ್ಯೆ’ ಪ್ರಕರಣ ಬೆಳಕಿಗೆ