ಬೆಂಗಳೂರು: ರಾಜ್ಯ ಸರ್ಕಾರದಿಂದ ಗಣ್ಯರ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಬಳಕೆ ಮಾಡುವ ಸಂಬಂಧ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಆ ಬಗ್ಗೆ ಮುಂದೆ ಓದಿ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ರಾಷ್ಟ್ರಧ್ವಜ ಬಳಕೆ ಬಗ್ಗೆ ಧ್ವಜ ಸಂಹಿತೆ, 2002 ಅನ್ನು ಕೇಂದ್ರ ಸರ್ಕಾರದ ಗ್ರಹ ಮಂತ್ರಾಲಯವು ಹೊರಡಿಸಿದೆ. ಈ ಧ್ವಜ ಸಂಹಿತೆಯ ಸೆಕ್ಷನ್ IX ರ ಕಂಡಿಕೆ ಸಂ. 3.44 ಮತ್ತು 3.45 ಅನ್ನು ಕೆಳಗೆ ಉದ್ಧರಿಸಲಾಗಿದೆ.
3.44 The privilege of flying the National Flag on motor cars is limited to the :-
(1) President;
(2) Vice-President;
(3) Governors and Lieutenant Governors;
(4) Heads of Indian Missions/Posts abroad in the countries to
which they are accredited ;
(5) Prime Minister and other Cabinet Ministers;
Ministers of State and Deputy Ministers of the Union;
Chief Minister and other Cabinet Ministers of a State
or Union Territory;
Ministers of State and Deputy Ministers of a State
or Union Territory :
(6) Speaker of the Lok Sabha ;
Deputy Chairman of the Rajya Sabha ;
Deputy Speaker of Lok Sabha ;
Chairman of Legislative Councils in States
Speakers of Legislative Assemblies in States
and Union Territories.
Deputy Chairmen of Legislative Councils in States;
Deputy Speakers of Legislative Assemblies in States
and Union Territories;
(7) Chief Justice of India;
Judges of Supreme Court;
Chief Justice of High Courts; Judges of High Courts.
3.45 The dignitaries mentioned in Clauses (5) to (7) of paragraph 3.44 may fly the National Flag on their cars, whenever they consider it necessary or advisable.
ಮೇಲಿನ ಕಂಡಿಕೆ 3.44ರಲ್ಲಿ ನಿರ್ದಿಷ್ಟಪಡಿಸಿರುವ ರಾಜ್ಯದ ಗಣ್ಯರ ಅಧಿಕೃತ ಸರ್ಕಾರಿ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಅಳವಡಿಸುವಾಗ ಧ್ವಜ ಸಂಹಿತೆ, 2002ರ ಇತರೆ ಎಲ್ಲಾ ಉಪಬಂಧಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಕ್ತ ಕ್ರಮ ವಹಿಸುವಂತೆ ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಬರುವ ಸಂಬಂಧಪಟ್ಟವರಿಗೆ ಸೂಚನೆಗಳನ್ನು ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳು, ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರುಗಳಿಗೆ ತಿಳಿಸಲಾಗಿದೆ.
BREAKING : ವಾಲ್ಮೀಕಿ ಹಗರಣ : ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ಇಡಿ ವಶಕ್ಕೆ