Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅರುಣಾಚಲ ಪ್ರದೇಶದ ‘ ವಾಸ್ತವ’ವನ್ನು ಚೀನಾಕ್ಕೆ ನೆನಪಿಸಿದ ಭಾರತ

14/05/2025 10:24 AM

BREAKING : ಸುಪ್ರೀಂ ಕೋರ್ಟ್ ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ `ಬಿ.ಆರ್.ಗವಾಯಿ’ | WATCH VIDEO

14/05/2025 10:20 AM

BIG NEWS : ನಾಳೆ DCM `ಡಿ.ಕೆ. ಶಿವಕುಮಾರ್’ ಜನ್ಮದಿನ : ಅಭಿಮಾನಿಗಳಿಗೆ ವಿಶೇಷ ಮನವಿ.!

14/05/2025 10:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ‘ಮಂಕಿಪಾಕ್ಸ್’ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ | Monkeypox Case
KARNATAKA

ರಾಜ್ಯ ಸರ್ಕಾರದಿಂದ ‘ಮಂಕಿಪಾಕ್ಸ್’ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ | Monkeypox Case

By kannadanewsnow0927/08/2024 8:31 PM

ಬೆಂಗಳೂರು: ವಿಶ್ವದ ವಿವಿಧೆಡೆ ಮಂಕಿಪಾಕ್ಸ್ ಆರ್ಭಟಿಸುತ್ತಿದೆ. ಕೋವಿಡ್ ರೀತಿಯಲ್ಲಿ ಜನರನ್ನು ತಲ್ಲಣಗೊಳಿಸುತ್ತಿದೆ. ಈ ಕಾರಣದಿಂದಲೇ ಮಂಕಿಪಾಕ್ಸ್ ಅನ್ನು ತುರ್ತು ಆರೋಗ್ಯ ಪರಿಸ್ಥಿತಿ ಎಂಬುದಾಗಿ ಡಬ್ಲ್ಯೂ ಹೆಚ್ಓ ಘೋಷಣೆ ಮಾಡಲಾಗಿತ್ತು. ಈಗ ಕರ್ನಾಟಕ ಸರ್ಕಾರವು ಮಂಕಿಪಾಕ್ಸ್ ಪ್ರಕರಣಗಳ ಸರ್ವೇಕ್ಷಣೆಗೆ ಮಹತ್ವದ ಮಾರ್ಗಸೂಚಿ ಕ್ರಮಗಳನ್ನು ಹೊರಡಿಸಿದೆ.

ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ  ಆಫ್ರಿಕಾದ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC)ದಲ್ಲಿ ನವೆಂಬರ್ 2023 ರಿಂದ ಹರಡುತ್ತಿರುವ ಮಂಕಿಪಾಕ್ಸ್ (ಎಮ್-ಪಾಕ್ಸ್ ಪಕರಣಗಳು ಇತ್ತೀಚೆಗೆ ದಕ್ಷಿಣ ಆಫ್ರಿಕಾ, ಕೀನ್ಯಾ, ರುವಾಂಡಾ, ಉಗಾಂಡಾ, ಬುರುಂಡಿ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಕಾಂಗೋ ಬ್ರಜಾವಿ, ಕ್ಯಾಮರೂನ್, ನೈಜೀರಿಯಾ, ಐವರಿ ಕೋಸ್ಟ್, ಲೈಬೀರಿಯಾ ಸೇರಿದಂತೆ ಆಫ್ರಿಕನ್ ಮತ್ತು ಇತರ ದೇಶಗಳಿಗೆ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ದಿನಾಂಕ 14-08-2024 ರಂದು ಎಮ್-ಪಾಕ್ಸ್ ನ್ನು ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು. ಆಫ್ರಿಕನ್ ರಾಷ್ಟ್ರವು ಜನವರಿ 2023 ರಿಂದ ಇಲ್ಲಿಯವರೆಗೆ ಒಟ್ಟು 16,600 ಶಂಕಿತ ಪುಕರಣಗಳನ್ನು ವರದಿ ಮಾಡಿದ್ದು, 2,863 ದೃಢಪಟ್ಟ ಪ್ರಕರಣಗಳು ಹಾಗೂ 537 ಸಾವುಗಳನ್ನು ದಾಖಲಿಸಿದೆ ಎಂದಿದ್ದಾರೆ.

ಆಫ್ರಿಕಾದಲ್ಲಿ ಕಳೆದ ವರ್ಷ ಸೋಂಕಿನ ಉಲ್ಬಣಕ್ಕೆ ಎರಡು ವಿಧದ mpox ಕ್ರೇಡ್‌ಗಳು ಕಾರಣವಾಗಿದ್ದು, ಮೊದಲ ವಿಧ ಅಂದರೆ ಕ್ರೇಡ್-1 ಆಫ್ರಿಕಾದಲ್ಲಿ ಸ್ಥಳೀಯವಾಗಿದೆ ಮತ್ತು ತೀವ್ರತರವಾದ ಸೋಕಿಗೆ ಕಾರಣವಾಗುತ್ತಿದ್ದು, ಮರಣ ಪ್ರಮಾಣ 10ಪುತಿಶತದಷ್ಟು ಇರುವುದಾಗಿ ತಿಳಿದುಬಂದಿದೆ. ಆಫ್ರಿಕಾದಲ್ಲಿ ಸ್ಥಳೀಯವಾಗಿರುವ mpox ಕ್ರೇಡ್-2 ನ ಎರಡನೇ ರೂಪಾಂತರವು ದೃಢಪಟ್ಟ ಸೋಂಕು ಪ್ರಕರಣಗಳಲ್ಲಿ 0.1 ಪ್ರತಿಶತದಷ್ಟು ಸಾವಿನ ಪ್ರಮಾಣದೊಂದಿಗೆ ಕಡಿಮೆ ತೀವ್ರವಾಗಿದೆ ಎಂದು ತಿಳಿದುಬಂದಿದೆ. mpox ತಳಿಗಳು ಉಸಿರಾಟ ಮಾರ್ಗದ ಮೂಲಕ ಹರಡುವುದಿಲ್ಲ. ಸೋಂಕಿತ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ, ಲೈಂಗಿಕ ಸಂಪರ್ಕ ಅಥವಾ ಗಾಯಗಳೊಂದಿಗೆ ನಿಕಟ ಸಂಪರ್ಕಗಳು ಸೋಂಕಿಗೆ ಒಳಗಾಗುವ ಏಕೈಕ ಮಾರ್ಗವಾಗಿದೆ. ಆದ್ದರಿಂದ, ವ್ಯಕ್ತಿಗಳು ಸೋಂಕಿತ ವ್ಯಕ್ತಿಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸಿದರೆ, ಹೊಸ ಲೈಂಗಿಕ ಪಾಲುದಾರರನ್ನು ತಪ್ಪಿಸಿದರೆ ಅಥವಾ ರಕ್ಷಣಾ ಮಾದರಿಗಳನ್ನು ಅನುಸರಿಸುವ ಮೂಲಕ ವೈರಸ್‌ನ ವುಸರಣ ಸರಪಳಿಯನ್ನು ಮುರಿಯಬಹುದಾಗಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ Mpox ವರದಿಯಾಗಿಲ್ಲ, ಆದರೆ ಪ್ರಕರಣಗಳು ಸ್ವೀಡನ್ ಮತ್ತು ನೆರೆಯ ಪಾಕಿಸ್ತಾನದಲ್ಲಿ ವರದಿಯಾಗಿರುವುದರಿಂದ, ಭಾರತದಲ್ಲಿ ಈ ರೋಗವು ಸಂಭವಿಸದಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಪ್ರಪಂಚದಾದ್ಯಂತ ವರದಿಯಾಗಿರುವ ಪ್ರಕರಣಗಳು ಸ್ಥಳೀಯ ಪಸರಣ ಮತ್ತು ಆಫ್ರಿಕನ್ ದೇಶಗಳಿಗೆ ಪ್ರಯಾಣದ ಕಾರಣದಿಂದಾಗಿವೆ. ಪೂರ್ವಭಾವಿ ವಿಧಾನವಾಗಿ NCDC, MoHFW ಭಾರತದಿಂದ ಶಂಕಿತ ಪುಕರಣಗಳು ವರದಿಯಾದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಹಲವಾರು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಗುರುತಿಸಿದೆ. ಪ್ರವೇಶ ಘಟ್ಟ (ಪಾಯಿಂಟ್ ಆಫ್ ಎಂಟ್ರಿ -PoE) ಮತ್ತು ರಾಜ್ಯದಾದ್ಯಂತ ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಶಿಫಾರಸು ಮಾಡಲಾದ ಕಣಾವಲು ಚಟುವಟಿಕೆಗಳು ಮತ್ತು ಸನ್ನದ್ಧತೆಯನ್ನು ಲಗತ್ತಿಸಲಾದ ಅನುಬಂಧಗಳಲ್ಲಿ ವಿವರಿಸಲಾಗಿದೆ. PoE ನಲ್ಲಿ ಶಿಫಾರಸು ಮಾಡಲಾದ ಕ್ರಮಗಳು:

1. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DOHFW) ಬೆಂಗಳೂರು ಮತ್ತು ಮಂಗಳೂರಿನಲ್ಲಿರುವ ವಿಮಾನ ನಿಲ್ದಾಣ/ಬಂದರು ಆರೋಗ್ಯ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಈ ಪ್ರವೇಶಘಟ್ಟಗಳಲ್ಲಿ ಮೇಲೆ ಹೇಳಲಾದ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರಲ್ಲಿ ಹೆಚ್ಚಿನ ಅನುಮಾನಗಳನ್ನು ಇರಿಸಿಕೊಂಡು ಕ್ರಮತೆಗೆದುಕೊಳ್ಳುವುದು.
2. PoE ನಲ್ಲಿ ಗುರುತಿಸಲ್ಪಟ್ಟ ಎಲ್ಲಾ Mpox ಶಂಕಿತ ಪ್ರಕರಣಗಳನ್ನು PoE ನಲ್ಲಿನ ಟ್ರಾನ್ಸಿಟ್ ಐಸೋಲೇಶನ್ ಸೌಲಭ್ಯದಲ್ಲಿ ಪುತ್ಯೇಕಿಸುವುದು ಮತ್ತು IHIP ಪೋರ್ಟಲ್‌ನಲ್ಲಿ ಆರಂಭಿಕ ಎಚ್ಚರಿಕೆಯ ಸಂಕೇತವನ್ನು (EWS) ನೀಡುವ ಮೂಲಕ ಸಮಗ್ರ ರೋಗ ಕಣಾವಲು ಕಾರ್ಯಕ್ರಮ (IDSP) ದಡಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಕಣ್ಯಾವಲು ಅಧಿಕಾರಿಯೊಂದಿಗೆ ಮಾಹಿತಿಯನ್ನು ತಕ್ಷಣವೇ ಹಂಚಿಕೊಳ್ಳುವುದು.

3. PoE ನಲ್ಲಿ ಶಂಕಿತ ಪ್ರಕರಣಗಳನ್ನು ಎಂಪಾಕ್ಸ್ ಪ್ರತ್ಯೇಕತೆ ಮತ್ತು ನಿರ್ವಹಣೆಗಾಗಿ ಕರ್ನಾಟಕದ ಸರ್ಕಾರದಿಂದ ಗುರುತಿಸಲ್ಪಟ್ಟ ಈ ಕೆಳಗಿನ ರೆಫರಲ್ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ನಲ್ಲಿ ವರ್ಗಾಯಿಸುವುದು.. a. ಪ್ರತ್ಯೇಕತೆ/ಇಡಿ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು
b. ವೆಬ್ಲಾಕ್ ಆಸ್ಪತ್ರೆ, ಮಂಗಳೂರು
4. ಶಂಕಿತ Mpox ಪ್ರಕರಣದ ವಿವರಗಳನ್ನು ರೆಫರಲ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ (MO)ಯು IHIP ಪೋರ್ಟಲ್‌ನಲ್ಲಿ “ಫೀವರ್ ವಿತ್ ರಾಶ್” ಪುಕರಣವಾಗಿ P-ಫಾರ್ಮ್‌ನಲ್ಲಿ ವರದಿ ಮಾಡುವುದು ಹಾಗೂ ಪರೀಕ್ಷೆಗಾಗಿ ಸಂಗ್ರಹಿಸಲಾದ ಮಾದರಿಯನ್ನು IHIP ಪೋರ್ಟಲ್‌ನಲ್ಲಿ “Mpox” ರೋಗನಿರ್ಣಯಕ್ಕಾಗಿ ಬಾಹ್ಯ ಪ್ರಯೋಗಾಲಯವಾಗಿ “SRL-BMC & RI” ಗೆ ಮ್ಯಾಪ್ ಮಾಡುವುದು.
5. ಶಂಕಿತ ಪುಕರಣದಿಂದ ಮಾರ್ಗಸೂಚಿಗಳ ಪ್ರಕಾರ (ಅನುಬಂಧ-ಬಿ(ಸಿ)) ಕ್ಲಿನಿಕಲ್ ಮಾದರಿಯನ್ನು ಸಂಗ್ರಹಿಸಲು ಮತ್ತು BMC&RI, ಬೆಂಗಳೂರಿನಲ್ಲಿರುವ ಗುರುತಿಸಲಾದ VRDL ಪ್ರಯೋಗಾಲಯಕ್ಕೆ ಸಾಗಿಸಲು ವ್ಯವಸ್ಥೆಗಳನ್ನು ಮಾಡಬೇಕು.
a. ಸಂಪರ್ಕ ವ್ಯಕ್ತಿ – ಡಾ. ಅಸೀಮಾಬಾನು, ವಿಭಾಗದ ಮುಖ್ಯಸ್ಥರು, ಮೈಕ್ರೋಬಯಾಲಜಿ ವಿಭಾಗ, BMC&RI, OT, FORT ZOB: 9845720258
6. ಯಾವುದೇ ಶಂಕಿತ ಪುಕರಣಗಳನ್ನು ನಿರ್ವಹಿಸುವಾಗ ಎಲ್ಲಾ ಸೋಂಕು ನಿಯಂತ್ರಣ ಅಭ್ಯಾಸಗಳನ್ನು ಅನುಸರಿಸುವುದು.
ಶಂಕಿತ ಪುಕರಣವನ್ನು
7. Mpox ಪರೀಕ್ಷೆಯ ಫಲಿತಾಂಶವು ಋಣಾತ್ಮಕವಾಗಿದ್ದರೆ (NEGATIVE) ಪ್ರತ್ಯೇಕತೆಯಿಂದ ಬಿಡುಗಡೆ ಮಾಡಬಹುದು. ಆದಾಗ್ಯೂ, ಪರೀಕ್ಷೆಯ ಫಲಿತಾಂಶವು ಸಕಾರಾತ್ಮಕವಾಗಿದ್ದರೆ 21 ದಿನಗಳವರೆಗೆ ಅಥವಾ ರಾಶ್ ಸಂಪೂರ್ಣವಾಗಿ (POSITIVE), ಪ್ರಕರಣವನ್ನು ಕನಿಷ್ಠ
ವಾಸಿಯಾಗುವವರೆಗೆ ಮತ್ತು ಎಲ್ಲಾ ಹುರುವುಗಳು ಬೀಳುವವರೆಗೆ ಪ್ರತ್ಯೇಕವಾಗಿ ಇರಿಸಲಾಗುತ್ತದೆ.
8. PoE ನಲ್ಲಿರುವ ಅಧಿಕಾರಿಗಳು ಶಂಕಿತ ಪ್ರಕರಣದ ಸಂಪರ್ಕಗಳ ಪಟ್ಟಿಯನ್ನು (ವಿಮಾನದಲ್ಲಿ ಸಹ- ಪುಯಾಣಿಕರು) ಸಿದ್ದವಿಡುವುದು ಮತ್ತು ಶಂಕಿತರು ಧನಾತ್ಮಕವಾಗಿ ತಿರುಗಿದರೆ ರಾಜ್ಯ/ಜಿಲ್ಲಾ ಕಣಾವಲು ಅಧಿಕಾರಿಯೊಂದಿಗೆ ಹಂಚಿಕೊಳ್ಳುವುದು.
9. IHIP ನಲ್ಲಿ ಆರಂಭಿಕ ಎಚ್ಚರಿಕೆಯ ಸಂಕೇತ (EWS) ವನ್ನು ರಚಿಸುವಾಗ ಶಂಕಿತ ಪ್ರಕರಣಗಳ ಸ್ವಯಂ-ವರದಿ ಮಾಡುವ ನಮೂನೆಯನ್ನು IHIP ಗೆ ಅಪ್‌ಲೋಡ್ ಮಾಡುವುದು (ಅನುಬಂಧ ಇ) ಮತ್ತು ಅದರ ಹಾರ್ಡ್ ಕಾಪಿಯನ್ನು ರೆಫರಲ್ ಆಸ್ಪತ್ರೆಯ ನೋಡಲ್ ಅಧಿಕಾರಿಯೊಂದಿಗೆ ಹಂಚಿಕೊಳ್ಳಬೇಕು.
10. ಜಾಗೃತಿ ಮೂಡಿಸಲು ಈ ಕೆಳಗಿನ WHO FAQ ಲಿಂಕ್ ಮತ್ತು NCDC ಸಹಾಯವಾಣಿ ಸಂಖ್ಯೆಯನ್ನು ಗಮನಿಸಿ.
a. WHO FAQ GOT:
i. https://www.who.int/news-room/questions-and-answers/item/monkeypox
b. NCDC ಸಹಾಯವಾಣಿ ಸಂಖ್ಯೆ – (+91) 011-23909348
ಪುವೇಶ ಘಟ್ಟಗಳಲ್ಲಿ (PoEs) ಹಾಗೂ ಆಸ್ಪತ್ರೆಗಳಲ್ಲಿ ಕೈಗೊಳ್ಳಬೇಕಾದ ಸರ್ವೇಕ್ಷಣಾ ಕ್ರಮಗಳು ಹಾಗೂ ಮಾದರಿ ಸಂಗ್ರಹ ಮತ್ತು ಸಾಗಾಣಿಕೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಮಾರ್ಗಸೂಚಿಗಳನ್ನು ಈ ಸುತ್ತೋಲೆಯ ಅನುಬಂಧದಲ್ಲಿ ನೀಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ/ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಇದನ್ನು ತಪ್ಪದೆ ಅನುಸರಿಸುವಂತೆ ಈ ಮೂಲಕ ಸೂಚಿಸಿದ್ದಾರೆ.

BREAKING: ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್ ಬಿಜೆಪಿ ಪಕ್ಷ ಸೇರುವುದಾಗಿ ಅಧಿಕೃತವಾಗಿ ಘೋಷಣೆ | Champai Soren

GOOD NEWS: ಇನ್ಮುಂದೆ ಕರ್ನಾಟಕದಲ್ಲಿ ‘ಡಿಜಿಟಲ್ ಮೀಡಿಯಾ’ಗಳಿಗೂ ಸಿಗುತ್ತೆ ‘ಸರ್ಕಾರಿ ಜಾಹೀರಾತು’: ಇಲ್ಲಿದೆ ಮಾರ್ಗಸೂಚಿ

BREAKING : ‘DYSP’ ಎಂ.ಕೆ ಗಣಪತಿ ಆತ್ಮಹತ್ಯೆ ಕೇಸ್ : ಇಂಧನ ಸಚಿವ ಕೆಜೆ ಜಾರ್ಜ್ ಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್

Share. Facebook Twitter LinkedIn WhatsApp Email

Related Posts

BIG NEWS : ನಾಳೆ DCM `ಡಿ.ಕೆ. ಶಿವಕುಮಾರ್’ ಜನ್ಮದಿನ : ಅಭಿಮಾನಿಗಳಿಗೆ ವಿಶೇಷ ಮನವಿ.!

14/05/2025 10:14 AM1 Min Read

ನಿಮ್ಮಎಲ್ಲಾ ಪಾಪಗಳಿಂದ ಕರ್ಮ ಶಾಪ ಗಳಿಂದ ಮುಕ್ತಿ ಹೊಂದಲು ಒಮ್ಮೆ ಈ ಆತ್ಮಲಿಂಗವನ್ನು ಸ್ಪರ್ಶಿಸಿ ನೋಡಿ ಸರ್ವ ಪಾಪಗಳಿಂದ ಮುಕ್ತರಾಗುತ್ತೀರಿ!

14/05/2025 10:09 AM3 Mins Read

ಅನುಮೋದನೆಗಾಗಿ 6 ಮಸೂದೆಗಳು ಮತ್ತೊಮ್ಮೆ ರಾಜ್ಯಪಾಲರಿಗೆ ರವಾನೆ: ರಾಜ್ಯ ಸರ್ಕಾರ

14/05/2025 10:06 AM1 Min Read
Recent News

ಅರುಣಾಚಲ ಪ್ರದೇಶದ ‘ ವಾಸ್ತವ’ವನ್ನು ಚೀನಾಕ್ಕೆ ನೆನಪಿಸಿದ ಭಾರತ

14/05/2025 10:24 AM

BREAKING : ಸುಪ್ರೀಂ ಕೋರ್ಟ್ ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ `ಬಿ.ಆರ್.ಗವಾಯಿ’ | WATCH VIDEO

14/05/2025 10:20 AM

BIG NEWS : ನಾಳೆ DCM `ಡಿ.ಕೆ. ಶಿವಕುಮಾರ್’ ಜನ್ಮದಿನ : ಅಭಿಮಾನಿಗಳಿಗೆ ವಿಶೇಷ ಮನವಿ.!

14/05/2025 10:14 AM

ನಿಮ್ಮಎಲ್ಲಾ ಪಾಪಗಳಿಂದ ಕರ್ಮ ಶಾಪ ಗಳಿಂದ ಮುಕ್ತಿ ಹೊಂದಲು ಒಮ್ಮೆ ಈ ಆತ್ಮಲಿಂಗವನ್ನು ಸ್ಪರ್ಶಿಸಿ ನೋಡಿ ಸರ್ವ ಪಾಪಗಳಿಂದ ಮುಕ್ತರಾಗುತ್ತೀರಿ!

14/05/2025 10:09 AM
State News

BIG NEWS : ನಾಳೆ DCM `ಡಿ.ಕೆ. ಶಿವಕುಮಾರ್’ ಜನ್ಮದಿನ : ಅಭಿಮಾನಿಗಳಿಗೆ ವಿಶೇಷ ಮನವಿ.!

By kannadanewsnow5714/05/2025 10:14 AM KARNATAKA 1 Min Read

ಬೆಂಗಳೂರು : ಮೇ.15ರ ನಾಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ಅಭಿಮಾನಿಗಳು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಡಿಕೆಶಿ ವಿಶೇಷ…

ನಿಮ್ಮಎಲ್ಲಾ ಪಾಪಗಳಿಂದ ಕರ್ಮ ಶಾಪ ಗಳಿಂದ ಮುಕ್ತಿ ಹೊಂದಲು ಒಮ್ಮೆ ಈ ಆತ್ಮಲಿಂಗವನ್ನು ಸ್ಪರ್ಶಿಸಿ ನೋಡಿ ಸರ್ವ ಪಾಪಗಳಿಂದ ಮುಕ್ತರಾಗುತ್ತೀರಿ!

14/05/2025 10:09 AM

ಅನುಮೋದನೆಗಾಗಿ 6 ಮಸೂದೆಗಳು ಮತ್ತೊಮ್ಮೆ ರಾಜ್ಯಪಾಲರಿಗೆ ರವಾನೆ: ರಾಜ್ಯ ಸರ್ಕಾರ

14/05/2025 10:06 AM

ಉದ್ಯೋಗವಾರ್ತೆ : ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

14/05/2025 10:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.