Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಬೋಳು ತಲೆಯ ಮೇಲೆ ಕೂದಲು ಬೇಕಾ.?! ಹಾಗಾದ್ರೆ, ಹೀಗೆ ಮಾಡಿ.!

03/07/2025 10:02 PM

‘ಮಳೆನೀರು’ ಕುಡಿಯುವುದು ಒಳ್ಳೆಯದೇ.? ತಜ್ಞರು ಹೇಳುವುದೇನು ಗೊತ್ತಾ.?

03/07/2025 9:44 PM

BREAKING : ಥೈಲ್ಯಾಂಡ್ ಹಂಗಾಮಿ ಪ್ರಧಾನಿಯಾಗಿ ‘ಫುಮ್ಥಾಮ್’ ನೇಮಕ

03/07/2025 9:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಂಗವಿಕಲ ಸರ್ಕಾರಿ ನೌಕರರಿಗೆ ʻವರ್ಗಾವಣೆʼಗೆ ವಿನಾಯ್ತಿ : ರಾಜ್ಯ ಸರ್ಕಾರದಿಂದ ಮಹತ್ವದ ಸುತ್ತೋಲೆ
KARNATAKA

ಅಂಗವಿಕಲ ಸರ್ಕಾರಿ ನೌಕರರಿಗೆ ʻವರ್ಗಾವಣೆʼಗೆ ವಿನಾಯ್ತಿ : ರಾಜ್ಯ ಸರ್ಕಾರದಿಂದ ಮಹತ್ವದ ಸುತ್ತೋಲೆ

By kannadanewsnow5713/06/2024 5:46 AM
vidhana soudha
vidhana soudha

ಬೆಂಗಳೂರು : ವಿಶೇಷ ಚೇತನ ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ವಿಸ್ತೃತ ಮಾರ್ಗಸೂಚಿ ಪ್ರಕಟಿಸಿದೆ.

ಮೇಲೆ ಓದಲಾದ ಉಲ್ಲೇಖ (1)ರ ಸರ್ಕಾರಿ ಆದೇಶದಲ್ಲಿ ಸರ್ಕಾರಿ ನೌಕರರ ವರ್ಗಾವಣೆಗಳ ಕುರಿತಂತೆ ವಿಸ್ತ್ರತ ಮಾರ್ಗಸೂಚಿಗಳನ್ನು ನೀಡಲಾಗಿದೆ. ಸದರಿ ಸರ್ಕಾರಿ ಆದೇಶದಲ್ಲಿ ವಿಶೇಷ ಚೇತನ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಕೈಗೊಳ್ಳುವ ಬಗ್ಗೆ ತಿಳಿಸಲಾಗಿದೆ.

ಅಂಗವಿಕಲ ವ್ಯಕ್ತಿಗಳ ಹಕ್ಕು (ಅಧಿನಿಯಮ) 2016ರ ಸೆಕ್ಷನ್ 20(5)ರನ್ನಯ ವಿಶೇಷ ಚೇತನ ನೌಕರರಿಗೆ ಮತ್ತು ವಿಶೇಷ ಚೇತನ ಅವಲಂಬಿತರ ಪಾಲನ ಪೋಷಣೆಯ ಜವಾಬ್ದಾರಿ ಹೊಂದಿರುವ ನೌಕರರಿಗೆ ಸಾಮಾನ್ಯ ಮತ್ತು ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡುವುದು, ವರ್ಗಾವಣೆ ಮತ್ತು ಪದೋನ್ನತ್ತಿಯ ನಂತರದಲ್ಲಿ ಸ್ಥಳ ನಿಯುಕ್ತಿಯಲ್ಲಿ ಪ್ರಾಶಸ್ತ್ರ ನೀಡುವುದು, ನೇಮಕಾತಿ ನಂತರದಲ್ಲಿ ನೀಡುವ ಆರಂಭಿಕ ಸ್ಥಳ ನಿಯುಕ್ತಿಯನ್ನು ಅವರ ವಾಸಸ್ಥಳದ ಹತ್ತಿರದ ಸ್ಥಳಕ್ಕೆ ನೀಡುವುದನ್ನು ಒಳಗೊಂಡಂತೆ, ಅವರು ಘನತೆಯಿಂದ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ವರ್ಗಾವಣೆ ಮತ್ತು ಸ್ಥಳನಿಯುಕ್ತಿ ನಿಯಮಗಳನ್ನು ರೂಪಿಸುವುದು ಅಗತ್ಯವಾಗಿರುತ್ತದೆ. ಆದ್ದರಿಂದ ವಿಶೇಷ ಚೇತನ ನಿಯಂತ್ರಿಸಲು ಸರ್ಕಾರವು 2016ರ ಕಾಯ್ದೆಯ ಅಂಶಗಳನ್ವಯ ಕೆಳಕಂಡಂತೆ ಆದೇಶಿಸಿದ. ನೌಕರರ ವರ್ಗಾವಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 26 ಸೇನೌವ 2022 ದಿನಾಂಕ: 12.06.2024 ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಮೇಲೆ ಓದಲಾದ ಉಲ್ಲೇಖ 1ರ ಸರ್ಕಾರಿ ಆದೇಶದ ಕಂಡಿಕೆ 9.ಅ.vii ಕ್ಕೆ ಈ ಕೆಳಕಂಡ ಅಂಶಗಳನ್ನು ಸೇರ್ಪಡೆಗೊಳಿಸಿ ಆದೇಶಿಸಲಾಗಿದೆ.

(ಎ) ವಿಶೇಷ ಚೇತನ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡುವುದು;

(ಬಿ) ವಿಶೇಷ ಚೇತನರು ನೇಮಕಾತಿಗೆ ಆಯ್ಕೆಯಾದ ನಂತರದಲ್ಲಿ ನೀಡುವ ಪ್ರಾರಂಭಿಕ ಸ್ಥಳ ನಿಯುಕ್ತಿಯನ್ನು (Initial posting) ಹಾಗೂ ಪದೋನ್ನತಿಯ ನಂತರದಲ್ಲಿ ಅವರ ವರ್ಗಾವಣೆ ಅವಶ್ಯಕವೆನಿಸಿದಲ್ಲಿ ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸುವುದು.

(ಸಿ) ಸರ್ಕಾರಿ ನೌಕರನ ಅವಲಂಬಿತ ಮಕ್ಕಳು, ಪತಿ/ಪತ್ನಿ, ತಂದ, ತಾಯಿ ಇವರುಗಳು ತೀವ್ರತರವಾದ ಅಂಗವೈಕಲ್ಯವನ್ನು ಹೊಂದಿದ್ದಲ್ಲಿ ಹಾಗೂ ಸರ್ಕಾರಿ ನೌಕರನು ಅವರ ನಿರ್ವಹಣೆ ಹಾಗೂ ಪುನರ್ ವಸತಿಯ ಜವಾಬ್ದಾರಿ ಹೊತ್ತು ಅಂಗವಿಕಲರ ಹಕ್ಕುಗಳನ್ನು ಸಂರಕ್ಷಣೆ ಮಾಡುವಲ್ಲಿ ಹೆಚ್ಚಿನ ಪಾತ್ರವಹಿಸುತ್ತಿದ್ದಲ್ಲಿ ಅಂತಹ ನೌಕರರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವ ಷರತ್ತಿಗೊಳಪಟ್ಟು, ಅಂತಹ ದಾಖಲೆಗಳನ್ನು ಪರಿಶೀಲಿಸಿ, ನಿಯತಕಾಲಿಕ ವರ್ಗಾವಣೆಗಳಿಂದ ವಿನಾಯಿತಿ ನೀಡಬಹುದು ಮತ್ತು ಅಂತಹ ನೌಕರರುಗಳಿಗೆ ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸುವುದು.

(ಡಿ) ಸೇವಾನಿರತ ಸರ್ಕಾರಿ ನೌಕರರು ತಮ್ಮ ಸೇವೆಯ ಅವಧಿಯಲ್ಲಿ ಅಂಗವಿಕಲರಾದಲ್ಲಿ, ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರವನ್ನು ಹಾಜರುಪಡಿಸುವ ಷರತ್ತಿಗೊಳಪಟ್ಟು ಅವರನ್ನು ಹತ್ತಿರದ ಸ್ಥಳಕ್ಕೆ ವರ್ಗಾಯಿಸುವುದು.

State govt issues circular exempting disabled government employees from 'transfer' ಅಂಗವಿಕಲ ಸರ್ಕಾರಿ ನೌಕರರಿಗೆ ʻವರ್ಗಾವಣೆʼಗೆ ವಿನಾಯ್ತಿ : ರಾಜ್ಯ ಸರ್ಕಾರದಿಂದ ಮಹತ್ವದ ಸುತ್ತೋಲೆ
Share. Facebook Twitter LinkedIn WhatsApp Email

Related Posts

BREAKING: NEET ಶ್ರೇಣಿ ಪಟ್ಟಿ ಪ್ರಕಟಿಸಿದ KEA: ಈ ರೀತಿ ಚೆಕ್ ಮಾಡಿ | NEET Rank

03/07/2025 8:20 PM1 Min Read

ಚಿತ್ರದುರ್ಗ: ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಹಿರಿಯೂರು 2ನೇ ಸ್ಥಾನ – ಬಿಸಿ ಸಂಜೀವಮೂರ್ತಿ

03/07/2025 4:59 PM2 Mins Read

ರಾಜ್ಯಾದ್ಯಂತ ಏಕಕಾಲಕ್ಕೆ ಕಣ್ಣಿನ ಆರೈಕೆಗೆ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ

03/07/2025 4:33 PM2 Mins Read
Recent News

ನಿಮ್ಮ ಬೋಳು ತಲೆಯ ಮೇಲೆ ಕೂದಲು ಬೇಕಾ.?! ಹಾಗಾದ್ರೆ, ಹೀಗೆ ಮಾಡಿ.!

03/07/2025 10:02 PM

‘ಮಳೆನೀರು’ ಕುಡಿಯುವುದು ಒಳ್ಳೆಯದೇ.? ತಜ್ಞರು ಹೇಳುವುದೇನು ಗೊತ್ತಾ.?

03/07/2025 9:44 PM

BREAKING : ಥೈಲ್ಯಾಂಡ್ ಹಂಗಾಮಿ ಪ್ರಧಾನಿಯಾಗಿ ‘ಫುಮ್ಥಾಮ್’ ನೇಮಕ

03/07/2025 9:21 PM

BREAKING : ಇಂಡಿಗೋ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ‘NITI’ ಆಯೋಗದ ಮಾಜಿ CEO ‘ಅಮಿತಾಭ್ ಕಾಂತ್’ ನೇಮಕ

03/07/2025 8:23 PM
State News
KARNATAKA

BREAKING: NEET ಶ್ರೇಣಿ ಪಟ್ಟಿ ಪ್ರಕಟಿಸಿದ KEA: ಈ ರೀತಿ ಚೆಕ್ ಮಾಡಿ | NEET Rank

By kannadanewsnow0903/07/2025 8:20 PM KARNATAKA 1 Min Read

ಬೆಂಗಳೂರು: ಪ್ರಸಕ್ತ ಸಾಲಿನ ಯುಜಿನೀಟ್ ಅರ್ಜಿಯಲ್ಲಿ ಕರ್ನಾಟಕ ಎಂದು ನಮೂದಿಸಿ, ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದ 87,909…

ಚಿತ್ರದುರ್ಗ: ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಹಿರಿಯೂರು 2ನೇ ಸ್ಥಾನ – ಬಿಸಿ ಸಂಜೀವಮೂರ್ತಿ

03/07/2025 4:59 PM

ರಾಜ್ಯಾದ್ಯಂತ ಏಕಕಾಲಕ್ಕೆ ಕಣ್ಣಿನ ಆರೈಕೆಗೆ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ

03/07/2025 4:33 PM

ಬಿಜೆಪಿಯ ಚೀಫ್ ವಿಪ್ ಹೀಗೆ ಚೀಪ್ ಆಗಿ ಮಾತಾಡ್ತಾನೆ : ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಏಕವಚನದಲ್ಲೇ ವಾಗ್ದಾಳಿ

03/07/2025 4:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.