ಗದಗ: ರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು, ಹೆಣ್ಣು ಮಕ್ಕಳಿಗೆ ಗೌರವಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಗ್ಯಾರಂಟಿ’ ಯೋಜನೆಗಳು ರಾಜಕೀಯ ಲಾಭಕ್ಕಾಗಿ, ಮತಕ್ಕಾಗಿ ಮಾಡಿದ ಯೋಜನೆಗಳಾಗಿವೆ. ಜನರಿಗೆ, ತಾಯಂದಿರಿಗೆ ಕಣ್ಣಲ್ಲಿ ಮಣ್ಣುಹಾಕುವ ಯೋಜನೆ. ಗೃಹ ಲಕ್ಷ್ಮೀ ಹಣ ಸರಿಯಾಗಿ ಯಾವ ತಿಂಗಳೂ ಬಂದಿಲ್ಲ. ಗೃಹ ಲಕ್ಷ್ಮೀ ಯೋಜನೆ ಹಣ ಸಂಬಳವೆ ಅಂತಾ ಕೇಳುತ್ತಾರೆ. ಅದು ಗೌರವ ಧನ. ಪ್ರತಿ ತಿಂಗಳು ಕೊಟ್ಟಿಲ್ಲ ಅಂದರೆ ಹೆಣ್ಣು ಮಕ್ಕಳಿಗೆ ಗೌರವಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಹಣ ಕಾಸಿನ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಮುಖ್ಯಮಂತ್ರಿಗಳು ಭಂಡತನದಿಂದ ಒಪ್ಪಿಕೊಳ್ಳುತ್ತಿಲ್ಲ. ಕೇವಲ ಗ್ಯಾರಂಟಿಗೆ ಅಷ್ಟೆ ಅಲ್ಲ, ಯಾವುದೇ ಅಭಿವೃದ್ಧಿಗೂ ಹಣ ಇಲ್ಲ. ಸಾಲದ ರೂಪದ ಯೋಜನೆಗಳನ್ನು ಬಿಟ್ಟರೆ ಯಾವುದು ಇಲ್ಲ. ಕುಡಿಯುವ ನೀರಿನ ಯೋಜನೆಗೆ ಹಣ ಕೊಡದೇ ಕುಂಠಿತವಾಗಿದೆ. ರಾಜ್ಯ ಸರ್ಕಾರ ಜನರನ್ನ ಸಂಕಷ್ಟಕ್ಕೆ ದೂಡುತ್ತಿದೆ. ಜನ ಸಾಮಾನ್ಯರು ಬಳಸುವ ಎಲ್ಲ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ತೆರಿಗೆ ಪಡೆದು ಅದನ್ನೇ ಗ್ಯಾರಂಟಿ ರೂಪದಲ್ಲಿ ಮರಳಿ ಕೊಡುಲು ಮುಂದಾಗಿದೆ. ಆದರೆ, ಅದರಲ್ಲೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ಇವರಿಗೆ ಅಭಿವೃದ್ಧಿ ಮಾಡಲು ಮನಸ್ಸಿಲ್ಲ ಹೀಗಾಗಿ ಕಾಂಗ್ರೆಸ್ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಉದಯಗಿರಿ ಗಲಾಟೆ, ಆತಂಕರಿಗೆ ಗಲಭೆ ಸೃಷ್ಠಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಿಜಾಬ್ ವಿಷಯವಾಗಿ ಹೈಕೋರ್ಟ್ ಆದೇಶಕೊಟ್ಟಿದೆ.. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೆ. 1980 ರ ಶಿಕ್ಷಣ ನೀತಿಯ ಪ್ರಕಾರ ಸಮವಸ್ತ್ರ ಒಪ್ಪಿಕೊಳ್ಳಲಾಗಿದೆ. ಹಿಜಾಬ್, ಮತ್ತೊಂದು ತರುವ ಯೋಚನೆ ಮಾಡಲಾಗ್ತಿದೆ. ಕೆಲವು ಸಂಘಟನೆಗಳು ಹಿಜಾಬ್ ತರಲು ಮುಂದಾಗಿದ್ದು ಸರ್ಕಾರದ ಕುಮ್ಮಕ್ಕು ನೀಡ್ತಿದೆ ಎಂದು ಆರೋಪಿಸಿದರು.
ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ತೀವ್ರಗೊಂಡಿದೆ. ಹಳೆಯವಿಶ್ವವಿದ್ಯಾಲಯ ಬಿಳಿ ಆನೆಗಳಾಗಿ ಪರಿವರ್ತನೆಗೊಂಡಿವೆ. ನೂರಾರು ಕೋಟಿ ಖರ್ಚು ಮಾಡುತ್ತಾರೆ. ಆದರೆ ಅಲ್ಲಿ ಸರಿಯಾಗಿ ಪರೀಕ್ಷೆ ನಡೆಯುತ್ತಿಲ್ಲ. ಸಂಶೋಧನೆ ಆಗುತ್ತಿಲ್ಲ. ಯಾವುದೇ ಕೆಲಸ ಆಗುತ್ತಿಲ್ಲ. ಅವು ಭ್ರಷ್ಟಾಚಾರದ ಕೂಪಗಳಾಗಿವೆ. ಅದನ್ನ ಸರಿ ಪಡೆಸುವುದನ್ನು ಬಿಟ್ಟು ಹೊಸ ವಿಶ್ವವಿದ್ಯಾಲಯ ಬಂದ್ ಮಾಡುತ್ತಿದ್ದಾರೆ.
ಅತೀ ಕಡಿಮೆ ವೆಚ್ಚದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ವಿಶೇಷವಾಗಿ ಎಸ್ ಸಿ ಎಸ್ ಟಿ, ಒಬಿಸಿ ಹೆಣ್ಣುಮಕ್ಕಳು ದೊಡ್ಡಮಟ್ಟದಲ್ಲಿ ವಿವಿಯಲ್ಲಿ ನೋಂದಾಯಿತರು. ಇವರ ಭವಿಷ್ಯಕ್ಕೆ ದೊಡ್ಡಮಟ್ಟದ ಕೊಡಲಿ ಪೆಟ್ಟನ್ನ ಕೊಟ್ಟಿದ್ದಾರೆ. ಹೊಸ ವಿಶ್ವವಿದ್ಯಾಲಯ ಮುಚ್ಚಲು ಬಿಡುವುದಿಲ್ಲ. ಕಾನೂನು ಹೋರಾಟ ಮಾಡುತ್ತೇವೆ ಎಂದರು
ಬಡವರ ಭಾಗ್ಯವಿಧಾತ ಪುಸ್ತಕ ಬೆವರಿನ ಮೌಲ್ಯ ತೆರೆದಿಟ್ಟಿದೆ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್
BIG NEWS: NPS ರದ್ದು, OPS ಜಾರಿಗೆ ಸಿಎಂ, ಡಿಸಿಎಂ ಸ್ಪಷ್ಟ ಸಂದೇಶ: ಸಿಎಸ್ ಷಡಕ್ಷರಿ