ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ಕುಟುಂಬ ನಿಯಂತ್ರಣ ಭತ್ಯೆ/ವಿಶೇಷ ವೇತನ ಬಡ್ತಿ (SFN) ಮಂಜೂರು ಮಾಡಿದ್ದು, ಅರ್ಜಿ ಸಲ್ಲಿಸಲು ಸರ್ಕಾರಿ ನೌಕರರು ಈ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.
ಕುಟುಂಬ ನಿಯಂತ್ರಣ ಭತ್ಯೆ/ವಿಶೇಷ ವೇತನ ಬಡ್ತಿಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
1. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಪ್ರಮಾಣ ಪತ್ರ (STERILIZATION CERTIFICATE)
2. ಮುಚ್ಚಳಿಕೆ ಪ್ರಮಾಣ ಪತ್ರ : ಒಂದು/ಎರಡು ಮಕ್ಕಳಿದ್ದಾರೆಂದು ಹಾಗೂ ಪತಿ/ಪತ್ನಿಯು ‘ಕುಟುಂಬ ನಿಯಂತ್ರಣ ಭತ್ಯೆ’ ಪಡೆದಿಲ್ಲವೆಂದು ಛಾಪಾ ಕಾಗದದಲ್ಲಿ ಬರೆದುಕೊಟ್ಟಿರುವ ಮುಚ್ಚಳಿಕೆ ಪತ್ರ.
3. ಮಾಹೆಯ ವೇತನ ಪ್ರಮಾಣ ಪತ್ರ
4. ಪತಿ/ಪತ್ನಿಯ ಮಾಹೆಯ ವೇತನ ಪ್ರಮಾಣ ಪತ್ರ
5.ಅರ್ಜಿದಾರರ SSLC ಅಂಕಪಟ್ಟಿ
6. ಪತಿ/ಪತ್ನಿಯ SSLC ಅಂಕಪಟ್ಟಿ
7.ಚೆಕ್ ಲಿಸ್ಟ್ : ‘ಕುಟುಂಬ ನಿಯಂತ್ರಣ ಭತ್ಯೆ (SFN) ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸುವ ಬಗ್ಗೆ (ಕಛೇರಿ ನಮೂನೆ)