ಗದಗ : ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿಸಲು ರಾಜ್ಯ ಸರ್ಕಾರದ ಸಹಕಾರ ಮುಖ್ಯವಾಗಿರುತ್ತದೆ. ಆದರೆ, ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಅವರು ಭಾನುವಾರ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಗೃಹ ಕಚೇರಿಯ ಆವರಣದಲ್ಲಿ ನಡೆದ ರೋಣ ವಿಧಾನಸಭಾಕ್ಷೇತ್ರದ ಕಾರ್ಯಕರ್ತರು ಹಾಗೂ ಮತದಾರರಿಗೆ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಗದಗ ನಗರದಲ್ಲಿ ಕಳೆದ 7 ವರ್ಷದ ಹಿಂದೆ ಕೇಂದ್ರೀಯ ವಿದ್ಯಾಲಯವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು. ಆದರೆ, ಅಲ್ಲಿನ ರಾಜಕೀಯ ನಾಯಕರ ನಿರಾಸಕ್ತಿಯಿಂದ ಸ್ಥಳದ ಸಮಸ್ಯೆಯಾಗಿ ವಿದ್ಯಾಲಯ ಸ್ಥಾಪನೆಯಾಗಲಿಲ್ಲ. ರಾಜ್ಯ ಸರ್ಕಾರಕ್ಕೆ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಒಂದು ಕೆಲಸವಾಗಿದೆ. ತಮ್ಮ ವೈಫಲ್ಯ ಮುಚ್ಚಿಕೊಂಡು ಬರಪರಿಹಾರ, ಯಾವುದೇ ಟೆಂಡರಗಳನ್ನು ಕರಿಯದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಕೇಂದ್ರ ಸರ್ಕಾರದತ್ತ ಕೈ ತೋರಿಸುತ್ತಿದೆ. ಕೇಂದ್ರ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಸಂವಿಧಾನ ಬದಲು ಮಾಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಾರೆ. ತುರ್ತುಪರಿಸ್ಥಿತಿಯಲ್ಲಿ ಎಲ್ಲರನ್ನು ಒಳಗಡೆ ಹಾಕಿ ಸಂವಿಧಾನ ಬದಲು ಮಾಡಿದ್ದೇ ಕಾಂಗ್ರೆಸ್ ಸರ್ಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ 25 ಸಾವಿರ ಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದರು.
ಈ ಬಾರಿ ಕರ್ನಾಟಕಕ್ಕೆ ರೈಲ್ವೇಗೆ 7328 ಕೋಟಿ ರೂ. ನೀಡಿದೆ. ಸಾಗರಮಾಲಾ ಯೋಜನೆಗೆ 700 ಕೋಟಿ, ತೆರಿಗೆಯಲ್ಲಿ ಕರ್ನಾಟಕದ 44,485 ಕೋಟಿ ಪಾಲು ಕೊಟ್ಟಿದೆ. ಮೋದಿಯವರ ಐದು ಯೋಜನೆಗಳು ರಸ್ತೆ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಉದ್ಯೋಗ ಸಿಗಬೇಕು ಎಲ್ಲ ಈಡೇರಿದಾಗ ಮಾತ್ರ ದೇಶದಲ್ಲಿ ಬಡತನ ನಿರ್ಮೂಲನೆ ಆಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕೇಂದ್ರ ಸರ್ಕಾರ ಕೆಲಸ ಮಾಡುತ್ತದೆ ಎಂದು ಹೇಳಿದರು.
ಸಂಸದರ ನಿಧಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಮಾಡುವುದಕ್ಕೆ ಅನುದಾನವಿಲ್ಲ. ವಿಧೆಯಕ ತಿದ್ದುಪಡಿಯಾದರೆ ಶೈಕ್ಷಣಿಕ ಕಾಂತಿಯನ್ನೇ ಮಾಡುತ್ತೇನೆ. ಕೇಂದ್ರ ಸರ್ಕಾರದ ಯೋಜನೆಗಳ ಹೊರತಾಗಿಯೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಕೆಲಸವನ್ನು ನನ್ನ ಕ್ಷೇತ್ರದಲ್ಲಿ ಮಾಡಲು ನಾನು ಸದಾ ಸಿದ್ಧ. ಇಳಕಲ್ಲದಿಂದ ಕೈಗಾ ರಾಷ್ಟ್ರೀಯ ಹೆದ್ದಾರಿ ಆಗಬೇಕೆಂಬುದು ಇಲ್ಲಿನ ಜನರ ಹಲವಾರು ದಶಕಗಳ ಕನಸು, ಇದು ನನ್ನ ಲೋಕಸಭಾ ವ್ಯಾಪ್ತಿಯ ಹಲವಾರು ತಾಲೂಕುಗಳಿಗೆ ಉಪಯುಕ್ತವಾಗಿದೆ. ಇದನ್ನು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಪ್ರಸ್ತಾವನೆ ಇಟ್ಟಿದ್ದೇನೆ. ಈ ವಾರ ನಿಮಗೆಲ್ಲ ಶುಭ ಸುದ್ದಿ ಬರಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 3 ಕೋಟಿ ಮನೆ ನಿರ್ಮಾಣ ಗುರಿ ಹೊಂದಿದ್ದೇವೆ. ಒಟ್ಟಾರೆ ನನ್ನನ್ನು ಆಯ್ಕೆ ಮಾಡಿದ ಮಾಲೀಕರಿಗೆ ನೀವು ಹೇಳಿದ ಕೆಲಸ ಮಾಡುವುದು ನನ್ನ ಧರ್ಮ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಬಿ.ಎಂ.ಸಜ್ಜನರ, ನಿಂಗಪ್ಪ ಕೆಂಗಾರ, ಬಿ.ವಿ.ಕಂಬಳ್ಳಾಳ, ಎಸ್.ಎಸ್.ವಾಲಿ, ಅಮರೇಶ ಬಳಿಗೇರ, ಶಿವಾನಂದ ಮಠದ, ಇಂದಿರಾ ತೇಲಿ, ಉಮೇಶ ಮಲ್ಲಾಪುರ, ಎಂ.ಎಸ್.ಕರಿಗೌಡ್ರ, ಅಶೋಕ ವನ್ನಾಲ, ಉಮೇಶ ಪಾಟೀಲ, ವಿಶ್ವಾನಾಥ ಕುಷ್ಟಗಿ, ಬಸವರಾಜ ಬಂಕದ, ವೀರಪ್ಪ ಪಟ್ಟಣಶೆಟ್ಟಿ, ರೂಪಲೇಶ ರಾಠೋಡ, ಸುಭಾಸ ಮ್ಯಾಗೇರಿ, ಶರಣಪ್ಪ ಉಪ್ಪಿನಬೆಟಗೇರಿ. ಶಿವಾನಂದ ಅರಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಶಿವಮೊಗ್ಗದಲ್ಲಿ ‘ಭಾರೀ ಮಳೆ’ಯಿಂದ ಪ್ರವಾಹದ ಭೀತಿ: ಜಿಲ್ಲಾಡಳಿತದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದ ‘DC’
BREAKING: ಹಿರಿಯ ಕಾಂಗ್ರೆಸ್ ಮುಖಂಡ ‘ಕಾಗೋಡು ತಿಮ್ಮಪ್ಪ’ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು | Kagodu Thimmappa
ಪ್ರಯಾಣಿಕರ ಗಮನಕ್ಕೆ: ಜು.29ರ ನಾಳೆಯಿಂದ ಜು.4ರವರೆಗೆ ಈ ರೈಲುಗಳ ಸಂಚಾರ ರದ್ದು | Train Cancelled