ಬೆಂಗಳೂರು: ರಾಜ್ಯ ಸರ್ಕಾರದಿಂದ ಶಾಸಕ ಮುನಿರತ್ನ ವಿರುದ್ಧದ ಪ್ರಕರಣವನ್ನು ಸಿಐಡಿಯ ವಿಶೇಷ ತನಿಖಾ ತಂಡವನ್ನು ರಚಿಸಿ, ಆ ತಂಡದ ಮೂಲಕ ತನಿಖೆಗೆ ವಹಿಸಿ ಆದೇಶಿಸಿದೆ.
ಈ ಸಂಬಂಧ ಇಂದು ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದ್ದು, ದೂರುದಾರರು ತಮಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ ಹಾಗೂ ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಕುರಿತು ಶ್ರೀ ಮುನಿರತ್ನ, ಶಾಸಕರು, ಹಾಗೂ ಇತರರ ವಿರುದ್ಧ ಬೆಂಗಳೂರು ನಗರ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ: 121/2024, ಕಲಂ 506, 504, 385, 420, 323 ರೆ/ವಿ 34 ಐಪಿಸಿ ಹಾಗೂ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ: 122/2024, ಕಲಂ 153(ಎ)(1)(ಎ)(ಬಿ), 509, 504, 153 ಐಪಿಸಿ ಹಾಗೂ ಕಲಂ 3(1)(ಆರ್)(ಎಸ್) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ರಡಿ ದಿನಾಂಕ:13.09.2024 ರಂದು ಪ್ರಕರಣಗಳು ದಾಖಲಾಗಿರುತ್ತದೆ ಎಂದಿದೆ.
ಮಹಿಳೆಯೊಬ್ಬರ ದೂರಿನ ಮೇರೆಗೆ ಶ್ರೀ ಮುನಿರತ್ನ, ಶಾಸಕರು, ಹಾಗೂ ಇತರರ ವಿರುದ್ಧ ರಾಮನಗರ ಜಿಲ್ಲೆ, ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ G Iver SOFT 02: 312/2024, 00 354(), 354(2), 376(2)(), 506, 504, 120(2), 149, 384, 406, 308 22 JE TOO 66, 66(a) ∞.-2000 & ದಿನಾಂಕ:18.09.2024ರಂದು ಪ್ರಕರಣವು ದಾಖಲಾಗಿರುತ್ತದೆ ಎಂದು ಹೇಳಿದೆ.
ಸರ್ಕಾರವು ಈ ಮೇಲ್ಕಂಡ ಪಕರಣಗಳ ಗಂಭೀರತೆಯನ್ನು ಪರಿಗಣಿಸಿ, ಈ ಪುಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳಲು ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಒಂದು ವಿಶೇಷ ತನಿಖಾ ತಂಡ (Special Investigation Team)ವನ್ನು ರಚಿಸುವುದು ಸೂಕ್ತವೆಂದು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶಾಸಕರಾದ ಶ್ರೀ ಮುನಿರತ್ನ ಹಾಗೂ ಇತರರ ವಿರುದ್ಧ ಬೆಂಗಳೂರು ನಗರ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ: 121/2024, ಕಲಂ 506, 504, 385, 420, 323 ರೆ/ವಿ 34 ಐಪಿಸಿ, ಬೆಂಗಳೂರು ನಗರ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ: 122/2024, ಕಲಂ 153(ಎ)(1)(ಎ)(ಬಿ), 509, 504, 153 ಐಪಿಸಿ ಮತ್ತು ರಾಮನಗರ ಜಿಲ್ಲೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ: 312/2024, ಕಲಂ 354(ಎ), 354(2), 376(2)(a), 506, 504, 120(29), 149, 384, 406, 308 2 0 66, 66(a) ಐ.ಟಿ ಕಾಯ್ದೆ-2000 ರಡಿ ದಾಖಲಾಗಿರುವ ಪಕರಣಗಳ ಕುರಿತು ಸಮಗ್ರ ತನಿಖೆಯನ್ನು ಕೈಗೊಳ್ಳಲು ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಈ ಕೆಳಕಂಡ ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಒಂದು ವಿಶೇಷ ತನಿಖಾ ತಂಡ (Special Investigation Team)ವನ್ನು ರಚಿಸಿ ಸರ್ಕಾರವು ಆದೇಶಿಸಿದ್ದಾರೆ.
ಎಸ್ ಐಟಿ ತಂಡ ಮುಖ್ಯಸ್ಥರನ್ನಾಗಿ ಬಿ. ಕೆ. ಸಿಂಗ್, ಐ.ಪಿ.ಎಸ್ ಅವರನ್ನು ನೇಮಸಿದ್ದಾರೆ, ಸದಸ್ಯರನ್ನಾಗಿ ಲಭುರಾಮ್ ಐ.ಪಿ.ಎಸ್, ಸೌಮ್ಯಲತ ಐ.ಪಿ.ಎಸ್, ಸಿ.ಎ.ಸೈಮನ್ ನೇಮಕ ಮಾಡಲಾಗಿದೆ.
ಈ ಮೇಲ್ಕಂಡ ಮೂರು ಪ್ರಕರಣಗಳು ಸೇರಿದಂತೆ ಹಾಗೂ ಈ ಸಂಬಂಧ ಮೇಲ್ಕಂಡ ಶಾಸಕರು ಹಾಗೂ ಇತರರ ವಿರುದ್ಧ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ | ದಾಖಲಾಗಬಹುದಾದ ಎಲ್ಲಾ ಪ್ರಕರಣಗಳನ್ನು ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಈ ವಿಶೇಷ ತನಿಖಾ BO (Special Investigation Team) ವರ್ಗಾಯಿಸುವುದು ಹಾಗೂ ವಿಶೇಷ ತನಿಖಾ ತಂಡಕ್ಕೆ ಅವಶ್ಯವಿರುವ ಇತರೆ ಸದಸ್ಯರುಗಳು, ಅಧಿಕಾರಿಗಳು / ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು, ಬೆಂಗಳೂರು ರವರ ಅನುಮೋದನೆಯೊಂದಿಗೆ ತನಿಖಾ ತಂಡಕ್ಕೆ ಸೇರಿಸಿಕೊಳ್ಳುವುದು.
ವಿಶೇಷ ತನಿಖಾ ತಂಡವು (Special Investigation Team) ಸಿಐಡಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು.
ಪೊಲೀಸ್ ಮಹಾ ನಿರ್ದೇಶಕರು, ಸಿಐಡಿ, ರವರ ಮೇಲ್ವಿಚಾರಣೆಯಲ್ಲಿ ಈ ವಿಶೇಷ ತನಿಖಾ ತಂಡ(Special Investigation Team)ವು ಕಾರ್ಯ ನಿರ್ವಹಿಸುವುದು ಅಂತ ತಿಳಿಸಿದ್ದಾರೆ.
ವಿಶೇಷ ತನಿಖಾ ತಂಡವು ಮೇಲ್ಕಂಡ ಪ್ರಕರಣಗಳು ಹಾಗೂ ಮೇಲ್ಕಂಡ ಶಾಸಕರುಗಳ ವಿರುದ್ಧ ದಾಖಲಾಗುವ ಇತರೆ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆಯನ್ನು ನಡೆಸಿ, ತನಿಖಾ ವರದಿಯನ್ನು ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು, ಬೆಂಗಳೂರು ರವರ ಮುಖಾಂತರ ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದು ಎಂದು ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BIG NEWS: ಸಾರ್ವಜನಿಕರು ‘ಸರ್ಕಾರಿ ಅಧಿಕಾರಿ’ಗಳ ಭೇಟಿಗೆ ಸಮಯ ನಿಗದಿ: ಸಮಸ್ಯೆ ಬಗೆ ಹರಿಸಲು ‘ರಾಜ್ಯ ಸರ್ಕಾರ’ ಆದೇಶ
ಬೆಂಗಳೂರಲ್ಲಿ ಹೆಚ್ಚಿದ ‘ನಿಫಾ’ ಭೀತಿ : ಓರ್ವ ವ್ಯಕ್ತಿಗೆ ಸೊಂಕಿನ ಗುಣಲಕ್ಷಣ ಪತ್ತೆ, 41 ಜನರಿಗೆ ‘ಹೋಮ್ ಕ್ವಾರಂಟೈನ್’!