ಬೆಂಗಳೂರು: ಕೃಷ್ಣ ಮೇಲ್ದಂಡೆ ಯೋಜನೆಯ 3ನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತ್ವರಿತವಾಗಿ ಕೈಗೊಳ್ಳಲು ರಾಜ್ಯ ಸರ್ಕಾರ ದರ ನಿಗದಿ ಪಡಿಸಿ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದೆ. ಅದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಒಪ್ಪಂದದ ಐತೀರ್ಪು ದರಗಳು ಹಾಗೂ ಸಂಬಂಧಿಸಿದ ಇನ್ನಿತರೆ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ವಿಷಗಳಿಗೆ ಈ ಕೆಳಗಿನಂತೆ ಅನುಮೋದನೆ ನೀಡಿರುವುದಾಗಿ ತಿಳಿಸಿದೆ.
ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ 75,563 ಎಕರೆ ಮುಳುಗಡೆಯಾಗುವ ಭೂಮಿಗಾಗಿ RL:519.60 ಮೀಟರ್ ನಿಂದ RL:524.256 ಮೀಟರ್ ವರೆಗೆ ಒಂದೇ ಹಂತದಲ್ಲಿ ಒಪ್ಪಂದದ ದರ ಅಥವಾ ಭೂ ಖರೀದಿ ಮುಖಾಂತರ ಭೂಸ್ವಾದೀನ ಮಾಡಲು ಆದೇಶಿಸಿದೆ.
ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆಗೆ ಅಗತ್ಯವಿರುವ ಮುಳುಗಡೆ ಜಮೀನು ಮತ್ತು ಕಾಲುವೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ನಿಗದಿಪಡಿಸಿದ ಒಪ್ಪಂದದ ಐತೀರ್ಪು ದರಗಳು ಈ ಕೆಳಕಂಡಂತೆ ಇದೆ.
ಮುಳುಗಡೆ ಜಮೀನುಗಳ ಭೂಸ್ವಾಧೀನತೆಗಾಗಿ
ಖುಷ್ಕಿ ಒಣ ಭೂಮಿಗೆ ರೂ.30 ಲಕ್ಷ ಪ್ರತಿ ಎಕರೆಗೆ
ತರಿ ಜಮೀನಿಗೆ ರೂ.40 ಲಕ್ಷ ಪ್ರತಿ ಎಕರೆಗೆ
ಕಾಲುವೆ ಜಮೀನುಗಳ ಭೂಸ್ವಾಧೀನತೆಗಾಗಿ
ಖುಷ್ಕಿ ಒಣ ಭೂಮಿಗೆ ರೂ.25 ಲಕ್ಷ ಪ್ರತಿ ಎಕರೆಗೆ
ತರಿ ಜಮೀನಿಗೆ ರೂ.30 ಲಕ್ಷ ಪ್ರತಿ ಎಕರೆಗೆ
BIG NEWS: ರಾಜ್ಯದಲ್ಲೊಂದು ಧಾರುಣ ಘಟನೆ: ಕೃಷಿ ಹೊಂಡದಲ್ಲಿ ಮುಳುಗಿ ಅಕ್ಕ-ತಮ್ಮ ದುರ್ಮರಣ
BREAKING: ಮತ್ತೆ ಇಡಿ ಅಧಿಕಾರಿಗಳಿಂದ ಶಾಸಕ ವೀರೇಂದ್ರ ಪಪ್ಪಿಗೆ ಸೇರಿದ 50 ಕೋಟಿ ಮೌಲ್ಯದ 44 ಕೆಜಿ ಚಿನ್ನ ಸೀಜ್