ಬೆಂಗಳೂರು: 2025- 26ನೇ ಸಾಲಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ, ಖಾಸಗಿ ಆಯುರ್ವೇದ, ಯುನಾನಿ, ಹೋಮಿಯೋಪಥಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪದ್ಧತಿ ವೈದ್ಯಕೀಯ ಮಹಾವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಆಯುಷ್ ಇಲಾಖೆಯಿಂದ ಶುಲ್ಕ ನಿಗದಿಪಡಿಸಿ ಆಯುಷ್ ಇಲಾಖೆಯು ಆದೇಶ ಹೊರಡಿಸಲಾಗಿದೆ.
ಅಖಿಲ ಭಾರತೀಯ ಮಟ್ಟದ ಶುಲ್ಕ, ಮ್ಯಾನೇಜ್ಮೆಂಟ್ ಮತ್ತು ಎನ್ ಆರ್ಐ ಕೋರ್ಸ್ಗಳಿಗೆ 2.50 ಲಕ್ಷ ರೂ. ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ 2.50 ಲಕ್ಷ ರೂ. ಗಳಿಂದ 2.75 ಲಕ್ಷ ರೂ. ನಿಗದಿಪಡಿಸಿದೆ.
ರಾಜ್ಯ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗೆ ಶುಲ್ಕದಲ್ಲಿ ಹೆಚ್ಚಳ ಮಾಡದೆ, ಕಳೆದ ವರ್ಷದ ಶುಲ್ಕವನ್ನೇ ಮುಂದುವರಿಸಿದೆ. ಖಾಸಗಿ ಆಡಳಿತ ಮಂಡಳಿಯವರು ಸರ್ಕಾರ ನಿಗದಿಪಡಿಸಿರುವ ಗರಿಷ್ಠ ವಾರ್ಷಿಕ ಶುಲ್ಕದ ಮೊತ್ತಕ್ಕಿಂತ ಹೆಚ್ಚಿಗೆ ಶುಲ್ಕ ಪಡೆಯುವಂತಿಲ್ಲ ಎಂದು ಸೂಚಿಸಿದೆ.
ಮೇಲೆ ಓದಲಾದ ಕ್ರ.ಸಂ. (1)ರ ಸರ್ಕಾರದ ಆದೇಶದಲ್ಲಿ, 2023-24ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಮತ್ತು ಅನುದಾನ ರಹಿತ, ಖಾಸಗಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ, ಹೋಮಿಯೋಪತಿ, ಆಯುರ್ವೇದ ಹಾಗೂ ಯುನಾನಿ ಮಹಾವಿದ್ಯಾಲಯಗಳಲ್ಲಿನ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳಿಗೆ ಸೀಟು ಹಂಚಿಕೆ ಅನುಪಾತ ಮತ್ತು ವಾರ್ಷಿಕ ಶುಲ್ಕವನ್ನು ನಿಗದಿಪಡಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರ.ಸಂ. (2)ರ ಸರ್ಕಾರದ ಆದೇಶದಲ್ಲಿ ಆಯುರ್ವೇದ, ಯುನಾನಿ ಹಾಗೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪದ್ಧತಿಯಲ್ಲಿನ ರಾಜ್ಯದ ಸರ್ಕಾರಿ ಮತ್ತು ಅನುದಾನ ರಹಿತ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿನ ಪದವಿ ಮತ್ತು ಸ್ನಾತ್ತಕೋತ್ತರ ಕೋರ್ಸ್ಗಳಿಗೆ 2023-24ನೇ ಶೈಕ್ಷಣಿಕ ಸಾಲಿಗೆ ನಿಗದಿಪಡಿಸಿದ ಸೀಟು ಹಂಚಿಕೆಯ ಅನುಪಾತ ಮತ್ತು ಶುಲ್ಕವನ್ನು 2024-25ನೇ ಸಾಲಿಗೆ ಯಥಾವತ್ತಾಗಿ ಮುಂದುವರೆಸಿ ಆದೇಶಿಸಿದೆ ಹಾಗೂ ಅನುದಾನರಹಿತ ಖಾಸಗಿ ಹೋಮಿಯೋಪತಿ ಮಹಾವಿದ್ಯಾಲಯಗಳಿಗೆ ಸಂಬಂಧಿಸಿದ ಈ ಕೆಳಕಂಡ ಕೋಟಾ ಸೀಟುಗಳ ಶುಲ್ಕವನ್ನು ಮಾತ್ರ ಈ ಕೆಳಗೆ ನಮೂದಿಸಿರುವಂತೆ ಕಡಿಮೆ ಮಾಡಿ ಆದೇಶಿಸಲಾಗಿರುತ್ತದೆ:-
ಮೇಲೆ ಓದಲಾದ ಕ್ರ.ಸಂ. (3)ರ ಪತ್ರಗಳಲ್ಲಿ ಆಯುಕ್ತರು, ಆಯುಷ್ ಇಲಾಖೆ ಇವರು ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಆಯುರ್ವೇದ, ಯುನಾನಿ, ಹೋಮಿಯೋಪತಿ ಮತ್ತು ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯಗಳಲ್ಲಿನ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳಿಗೆ 2024-25ನೇ ಶೈಕ್ಷಣಿಕ ಸಾಲಿಗೆ ನಿಗದಿಪಡಿಸಿರುವ ಸೀಟು ಹಂಚಿಕೆ ಅನುಪಾತ ಮತ್ತು ಶುಲ್ಕವನ್ನು 2025-26ನೇ ಸಾಲಿಗೆ ಯಥಾವತ್ತಾಗಿ ಮುಂದುವರೆಸುವಂತೆ ಕೋರಿರುತ್ತಾರೆ.