ಬೆಂಗಳೂರು: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಆರೋಗ್ಯ ರಕ್ಷಾ ಸಮಿತಿಗೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಅನುಮೋದಿತ ಅಧಿಕಾರೇತರ ಸದಸ್ಯರನ್ನು ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲು ಆದೇಶ ಮಾಡಲಾಗಿದೆ. ಈ ಮೂಲಕ 21 ವರ್ಷಗಳ ಬಳಿಕ ಆಯುಕ್ತಾಲಯದ ಮಟ್ಟದಲ್ಲಿ ಅಧಿಸೂಚನೆಯ ಅಧಿಕಾರವನ್ನು ಬದಲಾಯಿಸಿ, ಜಿಲ್ಲಾ ಹಂತದಲ್ಲೇ ಡಿಸಿಗಳಿಗೆ ಅಧಿಕಾರವನ್ನು ನೀಡಿ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
2004ರಿಂದಲೇ ಆಯಾ ಜಿಲ್ಲಾ ಹಂತದಲ್ಲೇ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಅನುಮೋದನೆ, ಅಧಿಸೂಚನೆಗೆ ಅಧಿಕಾರ ನೀಡುವ ಕುರಿತು ಚರ್ಚೆ ನಡೆಸಲಾಗಿತ್ತು. ಆದರೇ ಅದು ಸಾಧ್ಯವಾಗಲಿಲ್ಲ. 2021ರದಲ್ಲಿ ಮತ್ತೆ ಮುಂಚೂಣಿಗೆ ಬಂದಿತ್ತು. ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಹರ್ಷ ಗುಪ್ತ ಅವರು ಸಮಸ್ಯೆಯ ಗಂಭೀರತೆಯನ್ನು ಅರಿತು, ಇದನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದರು. ಅದರಂತೆ ಇದೀಗ ಕೊನೆಗೂ ಆಯಾ ಜಿಲ್ಲಾ ಹಂತದಲ್ಲೇ ಆರೋಗ್ಯ ರಕ್ಷಾ ಸಮಿತಿ ಸದಸ್ಯರನ್ನು ಜಿಲ್ಲಾ ಉಸ್ತುವಾರಿ ಸಚಿವರು ಅನುಮೋದಿಸುವ, ಆ ಅನುಮೋದನೆಯನ್ನು ಅಧಿಸೂಚನೆ ಮೂಲಕ ಹೊರಡಿಸುವಂತ ಅಧಿಕಾರವನ್ನು ಡಿಸಿಗಳಿಗೆ ನೀಡಿ ಅಧಿಕೃತ ಆದೇಶ ಮಾಡಲಾಗಿದೆ.
ಆರೋಗ್ಯ ಇಲಾಖೆಯ ಸುತ್ತೋಲೆಯಲ್ಲಿ ಏನಿದೆ.?
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದು, ದಿನಾಂಕ: 24.06.2025ರನ್ವಯ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಆರೋಗ್ಯ ರಕ್ಷಾ ಸಮಿತಿಗೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದ ಅನುಮೋದಿತ ಅಧಿಕಾರೇತರ ಸದಸ್ಯರನ್ನು ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲು ಸೂಚಿಸಲಾಗಿದೆ.
ಮುಂದುವರೆದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆದೇಶ ಸಂಖ್ಯೆ: ಆಕುಕ 140 ಸಿಜಿಇ 2024, ದಿನಾಂಕ: 24.06.2025ರನ್ವಯ, ಪ್ರಾಥಮಿಕ ಆರೋಗ್ಯ ರಕ್ಷಾ ಸಮಿತಿಗೆ Representatives of Specified Organizations ಗಳಿಂದ ಮೂರು (03) ಅಧಿಕಾರೇತರ ಸದಸ್ಯರನ್ನು ಮಿಸಲಾತಿಗಳನ್ವಯ ಕೆಳಕಂಡಂತೆ ಅನುಮೋದಿತ ಸದಸ್ಯರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನೇಮಿಸಿ ಆದೇಶಿಸುವಂತೆ ತಿಳಿಸಲಾಗಿದೆ.
1. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ-1: ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ/ಕೇಂದ್ರ ಸ್ಥಾನದಲ್ಲಿನ ಗ್ರಾಮ ಪಂಚಾಯತಿಯ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಠಿಕಾಂಶ ಸಮಿತಿ (VHSNC) ಅನುಮೋದಿಸುವುದು.
2. ಮಹಿಳೆ-1: ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ/ಕೇಂದ್ರ ಸ್ಥಾನದಲ್ಲಿನ ಗ್ರಾಮ ಪಂಚಾಯತಿಯ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಸಮಿತಿ ಅನುಮೋದಿಸುವುದು.
3. ಸಾಮಾನ್ಯ-1: ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ/ಕೇಂದ್ರ ಸ್ಥಾನದಲ್ಲಿನ ಗ್ರಾಮ ಪಂಚಾಯತಿಯ ಗ್ರಾಮ ನೀರು ಸರಬರಾಜು ಮತ್ತು ಸ್ವಚ್ಛತಾ ಸಮಿತಿ ಅನುಮೋದಿಸುವುದು ಎಂಬುದಾಗಿ ತಿಳಿಸಲಾಗಿದೆ.
ಇಂತಹ ಮಹತ್ವದ ಸುತ್ತೋಲೆ ಹೊರಡಿಸೋದಕ್ಕೆ ಕಾರಣವಾದಂತ ರಾಜ್ಯ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಹರ್ಷ ಗುಪ್ತ ಅವರಿಗೆ ಇಲಾಖೆಯ ಸಿಬ್ಬಂದಿಗಳು, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರ ಆಕಾಂಕ್ಷಿಗಳು ಧನ್ಯವಾದವನ್ನು, ಕೃತಜ್ಞತೆಯನ್ನು ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು..

ಸೆ.13ರಂದು ಮಹಿಳಾ ನೌಕರರ ದಿನಾಚರಣೆ ಘೋಷಣೆ: ಸಿಎಂ ಸಿದ್ದರಾಮಯ್ಯ ಭರವಸೆ








