ಬೆಂಗಳೂರು: ರಾಜ್ಯ ಸರ್ಕಾರದಿಂದ ಮಂಗಳೂರು ವಿಶ್ವವಿದ್ಯಾಲಯಕ್ಕೆ 6 ಮಂದಿ ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಆದೇಶಿಸಿದೆ.
ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಪ್ರಾಧಿಕಾರಕ್ಕೆ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ 6 ಮಂದಿಯನ್ನು ನಾಮನಿರ್ದೇಶ ಮಾಡಲಾಗಿದೆ ಅಂತ ತಿಳಿಸಿದೆ.
ಅಂದಹಾಗೇ ಮಂಗಳೂರು ವಿವಿಯ ಸಿಂಡಿಕೇಟ್ ಗೆ ಸುರೇಶ್ ಕುಮಾರ್ ಬಿ ನಾವೂರು, ಸಿ.ಎ ನಿತಿನ್ ಚ ಶೆಟ್ಟಿ, ಮಜೂಡಿತ್ ಮೆಂಡೋನಿಕ, ರಘುರಾಜ್, ಅಚ್ಯುತ್ ಗಟ್ಟಿ ಹಾಗೂ ಸವಾದ್ ಸುಳ್ಯ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಈ ನಾಮನಿರ್ದೇಶಿತ ಸದಸ್ಯರು ಮೀಸಲಾತಿಯ, ವಿದ್ಯಾರ್ಹತೆ ಬಗ್ಗೆ ಒಂದು ತಿಂಗಳ ಒಳಗಾಗಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಅಲ್ಲದೇ ನಾಮನಿರ್ದೇಶಿತ ಸದಸ್ಯರು ನಾಮನಿರ್ದೇಶನಗೊಂಡ ವಿವಿಯ ಸಂಯೋಜಿತ ಕಾಲೇಜಿನಲ್ಲಿ ಅಥವಾ ವಿವಿಯ ಯಾವುದೇ ಸ್ಥಾನಮಾನದಲ್ಲಿ ನಿಯೋಜನೆ ಹೊಂದಿರದ ಬಗ್ಗೆ ದೃಢೀಕರಿಸಿಕೊಳ್ಳತಕ್ಕದ್ದು.
ಗಮನಿಸಿ: ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
BREAKING ; ಫೆ.13ರಂದು ಬುಬುಧಾಬಿಯಲ್ಲಿ ‘ಪ್ರಧಾನಿ ಮೋದಿ’ ಮೆಗಾ ಕಾರ್ಯಕ್ರಮ, 50,000 ಜನರು ಭಾಗಿ |Ahlan Modi