ಬೆಂಗಳೂರು: ರಾಜ್ಯ ಸರ್ಕಾರದಿಂದ ಬರಗಾಲದ ಹಿನ್ನಲೆಯಲ್ಲಿ ಮೇವಿನ ಖರೀದಿ ಮತ್ತು ಮೇವು ಸಾಗಾಣಿಕೆ ದರಗಳನ್ನು ಪರಿಷ್ಕರಿಸಿ ಆದೇಶಿಸಿದೆ.
ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷಾ.ಹೆಚ್.ಜಿ ಅವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯದಲ್ಲಿ ಬರಗಾಲ ಇರುವ ಹಿನ್ನಲೆಯಲ್ಲಿ ಮೇವು ಖರೀದಿ ಮತ್ತು ಸಾಗಾಣಿಕೆ ದರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶಿಸಿದ್ದಾರೆ.
ಹೀಗಿದೆ ಮೇವು ಖರೀದಿ ಪರಿಷ್ಕೃತ ದರಪಟ್ಟಿ
- ಒಣಗಿದ ಜೋಳದ ದಂಡು – ಪ್ರತಿ ಮೆಟ್ರಿಕ್ ಟನ್ ಗೆಳ ರೂ.6000 ದಿಂದ 7000ಕ್ಕೆ ಪರಿಷ್ಕರಿಸಲಾಗಿದೆ.
- ಒಣಗಿದ ಮುಸುಕಿನ ಜೋಳದ ಮೇವು – 6000 ದಿಂದ 7000 ಸಾವಿರಕ್ಕೆ ಸಾಗಾಣಿಕೆ ದರ ಹೊರತುಪಡಿಸಿ ಪರಿಷ್ಕರಿಸಲಾಗಿದೆ.
- ಬಾಡಿದ ಕಬ್ಬು(ಸೋಗೆ ಸಹಿತ) ರೂ.3000
- ಭತ್ತದ ಒಣ ಹುಲ್ಲು ರೂ.6000 ದಿಂದ 7000ಕ್ಕೆ ದರ ಪರಿಷ್ಕರಿಸಲಾಗಿದೆ.
- ರಾಗಿಯ ಒಣ ಹುಲ್ಲು ರೂ.6000 ದಿಂದ 7000ಕ್ಕೆ ಪರಿಷ್ಕರಿಸಲಾಗಿದೆ.
ಹೀಗಿದೆ ಪರಿಷ್ಕೃತ ಮೇವು ಸಾಗಾಣಿಕೆ ದರಗಳು
ಹಾಲಿ ಇರುವ ದರ ಪ್ರತಿ ಕ್ವಿಂಟಾಲ್ ಗೆ ಪ್ರತಿ ಕಿಲೋಮೀಟರ್ ಗೆ ರೂ.1.50 ಇದ್ದದ್ದನ್ನು ಪರಿಷ್ಕರಿಸಿ ರೂ.1.75ಕ್ಕೆ ಹೆಚ್ಚಳ ಮಾಡಲಾಗಿದೆ.
ಈ ಪರಿಷ್ಕೃತ ದರಪಟ್ಟಿಗೆ ಕೆಲ ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಅವುಗಳೆಂದರೇ ಮೇವು ಸಾಗಾಣಿಕೆ ವೆಚ್ಚವನ್ನು ಪ್ರತಿ ಕ್ವಿಂಟಾಲ್, ಪ್ರತಿ ಕಿಲೋಮೀಟರ್ ಗೆ ಗರಿಷ್ಠ ರೂ.1.75ರಂತೆ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದಾಗ ಮಾತ್ರ ನೀಡುವುದು ಎಂದಿದೆ.
ಮೇವು ಸಾಗಣಿಕೆಯನ್ನು ಗರಿಷ್ಠ 300 ಕಿ.ಮೀ ಗಳ ವಿಸ್ತೀರ್ಣದಲ್ಲಿ ಅನುಮತಿಸುವುದು. ಸರ್ಕಾರಿ ವಾಹನಗಳು ಲಭ್ಯವಿಲ್ಲದಿದ್ದಲ್ಲಿ ಮಾತ್ರ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆಯಬೇಕು. ಮೇವು ಸಾಗಾಣಿಕೆ ವೆಚ್ಚವನ್ನು ಬರ ಪೀಡಿತವೆಂದು ಘೋಷಿಸಲಾಗಿರುವ ತಾಲ್ಲೂಕುಗಳಲ್ಲಿ ಮೇವಿನ ಕೊರತೆಯಿದ್ದಲ್ಲಿ ಮಾತ್ರ ಬಳಸಲು ಅನ್ವಯಿಸುತ್ತದೆ ಎಂದಿದೆ.
ವರದಿ: ವಸಂತ ಬಿ ಈಶ್ವರಗೆರೆ
‘ಉದ್ಯೋಗಾಕಾಂಕ್ಷಿ’ಗಳೇ ಗಮನಿಸಿ: ‘ಪಂಚಾಯತ್ ರಾಜ್ ಇಲಾಖೆ’ಯ ‘2022 ಖಾಲಿ ಹುದ್ದೆ’ ಭರ್ತಿಗೆ ಪ್ರಕ್ರಿಯೆ ಆರಂಭ