ಬೆಂಗಳೂರು : ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಹೆರಿಗೆಯಾಗುವ ನವಜಾತ ಶಿಶುಗಳ ಜನ್ಮಜಾತ (Congenital) ಮತ್ತು ಚಯಾಪಚಯ (Metabolic) ಅಸ್ವಸ್ಥತೆಗಳಿಗಾಗಿ (Disorders) ಸಾರ್ವತ್ರಿಕ ತಪಾಸಣೆಗೆ ‘ಸಾರ್ವತ್ರಿಕ ನವಜಾತ ಶಿಶು ತಪಾಸಣೆ ಯೋಜನೆ (Universal Newborn Screening Scheme (UNBS) ಅನುಷ್ಠಾನದ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಏಕ ಕಡತದಲ್ಲಿ, ಸಾರ್ವತ್ರಿಕ ನವಜಾತ ಶಿಶು ತಪಾಸಣೆ (UNBS) ಯೋಜನೆಯು ಗಂಭೀರವಾದ ಆದರೆ ಚಿಕಿತ್ಸೆ ನೀಡಬಹುದಾದ ಅಸ್ವಸ್ಥತೆಗಳಿಗೆ ಅವಾಯದಲ್ಲಿರುವ ಶಿಶುಗಳನ್ನು ಗುರುತಿಸುವ ಒಂದು ಮುಖ್ಯವಾದ ನಿರ್ಣಾಯಕ ಸಾರ್ವಜನಿಕ ಆರೋಗ್ಯ ಹಸ್ತಕ್ಷೇವವಾಗಿದೆ (intervention). ಕರ್ನಾಟಕದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಜನಿಸಿದ ಅಂದಾಜು 5.00ಲಕ್ಷ ನವಜಾತ ಶಿಶುಗಳಲ್ಲಿ ಐದು (05) ಸಾಮಾನ್ಯ ಗುಣಪಡಿಸಬಹುದಾದ ಅಸ್ವಸ್ಥತೆಗಳಿಗೆ ಸಾರ್ವತ್ರಿಕ ತಪಾಸಣೆಯನ್ನು ಜಾರಿಗೆ ತರುವ ಯೋಜನೆಯನ್ನು ಈ ಪ್ರಸ್ತಾವನೆಯು ವಿವರಿಸುತ್ತದೆ.
Congenital Hypothyroidism, Congenital Adrenal Hyperplasia (CAH), Galactosemia, Phenylketonuria and Glucose-6-Phosphate Dehydrogenase (G6PD) deficiency ಕೇಂದ್ರೀಕರಿಸುವ ಮೂಲಕ, ಈ ಯೋಜನೆಯು ಆರಂಭಿಕ ಪತ್ತೆ ಮತ್ತು ಸಕಾಲಿಕ ಹಸ್ತಕ್ಷೇಪದ ಮೂಲಕ ಅನಾರೋಗ್ಯ ಮತ್ತು ಮರಣವನ್ನು ಕಡಿಮೆ ಮಾಡುವ ಹಾಗೂ ನವಜಾತ ಶಿಶುವಿನಲ್ಲಿ ಕಂಡುಬರುವ ನಿರ್ದಿಷ್ಟ ಅಪರೂಪದ ಕಾಯಿಲೆಗಳನ್ನು ಗುರುತಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇವುಗಳಿಗೆ ಸಕಾಲಿಕ ಚಿಕಿತ್ಸೆ ನೀಡಿದರೆ (ಅಂದರೆ, ಮಗು ಜನಿಸಿದ 15 ದಿನಗಳಲ್ಲಿ) ಮಗುವಿಗೆ ಸಾಮಾನ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಇಲ್ಲದೇ ಇದ್ದಲ್ಲಿ, ಅದು ಮಗುವಿನ ಮಾನಸಿಕ ಕುಂಠಿತ ಮತ್ತು ಸಾವಿಗೆ ಕಾರಣವಾಗಬಹುದು.
ಸ್ಟೀನಿಂಗ್ ಅನ್ನು ಆರೋಗ್ಯ ಸೌಲಭ್ಯಗಳಲ್ಲಿ ನಡೆಸಲಾಗುವುದು ಮತ್ತು ದೃಢೀಕರಣ Indra Gandhi Institute of Child Health, Center of Excellence for Rare Diseases, Bengaluru, ಇಲ್ಲಿ ನಡೆಸಲಾಗುವುದು. ಈಗಾಗಲೇ ಚಿಕಿತ್ಸಾ ವೆಚ್ಚವನ್ನು ಕೇಂದ್ರ ಸರ್ಕಾರದ NPRD (National Policy for Rare Diseases) ಯೋಜನೆಯಲ್ಲಿ ಒಳಗೊಂಡಿರುವುದರಿಂದ, ವಸ್ತಾವಿತ ಯೋಜನೆಯು ನಿಂಗ್ ಮತ್ತು ಪರೀಕ್ಷಾ ವೆಚ್ಚಗಳನ್ನು ಮಾತ್ರ ಭರಿಸುತ್ತದೆ.
ಮಕ್ಕಳಲ್ಲಿ ಪ್ರಚಲಿತದಲ್ಲಿರುವ ನಾಲ್ಕು “ಡಿ” ಗಳಿಗೆ ಜನನ ದೋಷಗಳು, ಮಕ್ಕಳಲ್ಲಿನ ರೋಗಗಳು, ಕೊರತೆಯ ಪರಿಸ್ಥಿತಿಗಳು ಮತ್ತು ಅಂಗವೈಕಲ್ಯಗಳು ಸೇರಿದಂತೆ ಬೆಳವಣಿಗೆಯ ವಿಳಂಬಗಳು ಅಸ್ತಿತ್ವದಲ್ಲಿರುವ ತಪಾಸಣೆ ಚಟುವಟಿಕೆಗಳನ್ನು ರಾಷ್ಟ್ರೀಯ ಬಾಲ ಸ್ವಾಸ ಕಾರ್ಯಕ್ರಮ (RBSK) ಅಡಿಯಲ್ಲಿ ನಡೆಸಲಾಗುತ್ತದೆ. ಪ್ರಸ್ತುತ. ನವಜಾತ ಶಿಶುಗಳ ಸಮಗ್ರ ತಪಾಸಣೆಯು ಆರೋಗ್ಯ ಪೂರೈಕೆದಾರರಿಂದ ದೈಹಿಕ ಪರೀಕ್ಷೆಯ ಮೂಲಕ ಗುರುತಿಸಬಹುದಾದ ಒಟ್ಟು ದೈಹಿಕ ದೋಷಗಳಿಗೆ ಸೀಮಿತವಾಗಿದೆ. ಮಕ್ಕಳಲ್ಲಿ ಮರಣ ಮತ್ತು ಅನಾರೋಗ್ಯವನ್ನು ಕಡಿಮ ಮಾಡಲು ಆರಂಭಿಕ ಪತ್ತೆ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಚಯಾಪಚಯ ಕ್ರಿಯೆಯ ಜನ್ಮಜಾತ ದೋಷಗಳನ್ನು ಗುರುತಿಸಲು ತಪಾಸಣೆಯ ವ್ಯಾಪ್ತಿಯನ್ನು ವಿಸ್ತರಿಸುವ ಅವಶ್ಯಕತೆಯಿದೆ.
ಆನ್ಲೈನ್ ವರದಿ ಮಾಡುವ ಸ್ವಾಸ್ಥ್ಯ ಕಿರಣ” ಸಾಫ್ಟ್ ವೇರ್ನಲ್ಲಿ ಮಕ್ಕಳನ್ನು ದಾಖಲಿಸಿ, ಇವರ ಆರೋಗ್ಯ ಸ್ಥಿತಿಗಳನ್ನು ಹದಿನೆಂಟು (18) ವರ್ಷ ವಯಸ್ಸಿನವರೆಗೆ ಟ್ರ್ಯಾಕ್ ಮಾಡಲಾಗುತ್ತದೆ. RBSK ಯೋಜನೆಯಡಿಯಲ್ಲಿ ರಾಜ್ಯಾದ್ಯಂತ ಮಗುವಿನ ಮೇಲ್ನೋಟಕ್ಕೆ ಕಾಣುವಂತಹ ಅಥವಾ ಮಗುವಿನ ದೈನಂದಿನ ಚಟುವಟಿಕೆಗಳನ್ನು ಅಡ್ಡಪಡಿಸುವ ದೋಷಗಳಿಗಾಗಿ ನಿಂಗ್ ಅನ್ನು ಜಾರಿಗೆ ತರಲಾಗಿದೆ. ಆದರೆ ಎಲ್ಲಾ ಹರಿಗೆ ಕೇಂದ್ರಗಳಲ್ಲಿ ಚಯಾವಚಯ ಕ್ರಿಯೆಯ ಜನ್ಮಜಾತ ದೋಷಗಳಿಗಾಗಿ ನವಜಾತ ಶಿಶುಗಳ ತಪಾಸಣೆಯ ಅವಶ್ಯಕತೆಯಿದೆ.
ಈ ಕೆಳಗಿನ ಕಾಯಿಲೆಗಳು ಮತ್ತು ಜನ್ಮಜಾತ ಅಸ್ವಸ್ಥತೆಗಳಿಗೆ ಪ್ರೀನಿಂಗ್ ಅಗತ್ಯವಾಗಿದ್ದು, ಜನ್ಮಜಾತ ಹೈಪೋಥೈರಾಯಿಸಮ್, ಜನ್ಮಜಾತ ಅಡ್ರಿನಲ್ ಹೈವರ್ವ್ಯಾಸಿಯಾ, G6PD ಕೊರತೆ, ಗ್ಯಾಲಕ್ಟೋಸೀಮಿಯಾ ಮತ್ತು ಫಿನ್ನೆಲೆಟೋನೂರಿಯಾ, ವಿಲ್ಸನ್ ಮತ್ತು ಜಂಗ್ಟರ್ ಮಾನದಂಡಗಳ ಆಧಾರದ ಮೇಲೆ ಸ್ಟ್ರೀನಿಂಗ್ ಅನ್ನು ಪರಿಚಯಿಸುವ ಮಾನದಂಡಗಳು ಕೆಳಕಂಡಂತಿದೆ: