ಬೆಂಗಳೂರು: ರಾಜ್ಯ ಸರ್ಕಾರವು ಸಾರಿಗೆ ನೌಕರರ ಒತ್ತಾಯಕ್ಕೆ ಮಣಿದಿದೆ. ಇಂದು 26 ತಿಂಗಳ ಹಿಂಬಾಗಿ ನೀಡಲು ನಿರ್ಧರಿಸಿದೆ. ಅಲ್ಲದೇ ಮಾರ್ಚ್.1, 2025ರಿಂದ ವೇತನ ಹೆಚ್ಚಿಸಲು ನಿರ್ಧರಾವನ್ನು ಕೈಗೊಂಡು ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದು, 38 ತಿಂಗಳ ಹಿಂಬಾಕಿ ವೇತನ ಬೇಡಿಕೆಯಲ್ಲಿ 26 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಮತ್ತು ವೆಚ್ಚಕ್ಕಾಗಿ 1239.47 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾಗಿ ತಿಳಿಸಿದ್ದಾರೆ.
ಇದಲ್ಲದೇ ದಿನಾಂಕ 01-04-2025ರಿಂದ ಜಾರಿಗೆ ಬರುವಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳಿಗೆ ವೇತನ ಹೆಚ್ಚಳ ಪರಿಷ್ಕರಣೆಗೂ ಆದೇಶಿಸಿದ್ದಾರೆ. ಈ ಮೂಲಕ ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.
ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿ/ನೌಕರರ ವೇತನ ಪರಿಷ್ಕರಣೆ ಸಂಬಂಧಪಟ್ಟಂತೆ
1) ಹಿಂಬಾಕಿ ಪಾವತಿ: ಒಟ್ಟು 26 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಮತ್ತು ವೆಚ್ಚ ರೂ.1239.47 ಕೋಟಿ:
ಅ) 38 ತಿಂಗಳ ಹಿಂಬಾಕಿ ವೇತನ ಪಾವತಿ ಬೇಡಿಕೆ ಸಂಬಂಧ ಶ್ರೀ ಶ್ರೀನಿವಾಸ ಮೂರ್ತಿ, ಭಾಆಸೇ., (ನಿವೃತ್ತ) ರವರ ಏಕ ಸದಸ್ಯ ಸಮಿತಿಯ ಶಿಫಾರಸ್ಸಿನಂತೆ ದಿನಾಂಕ:01.01.2022 ರಿಂ 28.02.2023 ಅವಧಿಗೆ 14 ತಿಂಗಳ ವರೆಗಿನ ಹಿಂಬಾಕಿ ವೇತನ ನೀಡಲು ಒಪ್ಪಿಗೆ ನೀಡಿ, ತತ್ಸಂಬಂಧ ತಗಲುವ ವೆಚ್ಚ, ರೂ.718.93 ಕೋಟೆಗಳ ವಿಶೇಷ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಲಿದೆ
ಆ) 38 ತಿಂಗಳ ಹಿಂಬಾಕಿ ಪೈಕಿ ಉಳಿದ 24 ತಿಂಗಳಲ್ಲಿ ದಿನಾಂಕ 01.01.2020 ರಿಂದ 31.12.2020ರ ವರೆಗೆ 12 ಮಾಹೆಯ ವೇತನ ಹಿಂಬಾಕಿ ಮೊತ್ತ ರೂ. 520.54 ಕೋಟಿಗಳ ವಿಶೇಷ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಲಿದೆ.
2. ವೇತನ ಹೆಚ್ಚಳ :
ಅ) ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳಿಗೆ ಶೇಕಡವಾರು ಎಷ್ಟು ದಿನಾಂಕ:01.04.2025 ರಿಂದ ಜಾರಿಗೆ ಬರುವಂತೆ
ಪ್ರಮಾಣದಲ್ಲಿ ವೇತನ ಹೆಚ್ಚಳ ಪರಿಷ್ಕರಿಸಬೇಕು ಎನ್ನುವ ಸಂಬಂಧ ಕಾರ್ಮಿಕ ಸಂಘಟನೆಗಳೊಡನೆ ಮಾತುಕತೆ ಮತ್ತು ಸಂಧಾನ ಪ್ರಕ್ರಿಯೆ ಪ್ರಾರಂಭಿಸಲು ಆದೇಶಿಸಲಾಗಿದೆ.
ವೇತನ ಪರಿಷ್ಕರಣೆ ವಿಳಂಬಕ್ಕೆ ಕಾರಣಗಳು:
ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿ/ನೌಕರರ ವೇತನ ಪರಿಷ್ಕರಣೆ ಮಾಡಿ, ಆ ಸಂಬಂಧ ಬಜೆಟ್‌ನಲ್ಲಿ ಯಾವುದೇ ಅನುದಾನವನ್ನು ಮೀಸಲಿಡದೆ ಹಾಗೂ 38 ತಿಂಗಳ ಹಿಂಬಾಕಿ ವೇತನ ಪಾವತಿ ಬೇಡಿಕೆ ಸಂಬಂಧ ಶ್ರೀ ಶ್ರೀನಿವಾಸ ಮೂರ್ತಿ, ಭಾಆಸೇ., (ನಿವೃತ್ತ) ರವರ ಏಕ ಸದಸ್ಯ ಸಮಿತಿಯನ್ನುರಚಿಸಿ, ಸಮಿತಿಯ ಶಿಫಾರಸಿನ ಮೇರೆಗೆ ಹಿಂಬಾಕಿ ವೇತನ ಪಾವತಿ ಎಂಬುದಾಗಿ ಆದೇಶಿಸಿದ್ದರಿಂದ ಈ ರೀತಿಯ ವಿಳಂಬವಾಗಿದೆ.
ನಿವೃತ್ತ ನೌಕರರ ವೇತನ ಪರಿಷ್ಕರಣೆ ಸಂಬಂಧ ಉಪಧನ ಬಾಕಿ ಮೊತ್ತ ರೂ.224 ಕೋಟಿ ಗಳನ್ನು ಯಾವುದೇ ಅನುದಾನವನ್ನು ಮೀಸಲಿಡದೆ ಇದ್ದಾಗ್ಯೂ, ಸಹ ಬಿಡುಗಡೆಗೊಳಿಸಲಾಗಿದೆ.
• 2019-2023ರ ಅವಧಿಯಲ್ಲಿನ ರೂ.4900 ಕೋಟಿ ಬಾಕಿ ಉಳಿಸಿರುವ ಹೊಣೆಗಾರಿಕೆ ಮೊತ್ತದಲ್ಲಿ, ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಪಾವತಿಗಾಗಿ ನಮ್ಮ ಸರ್ಕಾರವು ಬ್ಯಾಂಕ್‌ನಿಂದ ರೂ.2000 ಕೋಟಿ ಸಾಲವನ್ನು ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಅನುಮತಿಸಿದ್ದು,ಈ ಸಾಲದ ಅಸಲು ಮತ್ತು ಬಡ್ಡಿಯನ್ನು ಸರ್ಕಾರವು ಪಾವತಿಸುತ್ತಿದೆ.
• 2019-2023 ರ ಅವಧಿಯಲ್ಲಿ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಹೊಸ ಬಸ್ಸುಗಳ ಸೇರ್ಪಡೆಯಾಗದೆ ಮತ್ತು ಹೊಸ ನೇಮಕಾತಿ ಸ್ಥಗಿತಗೊಂಡಿದ್ದರಿಂದ, ಕಳೆದ ಎರಡುವರೆ ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಪುಯಾಣಿಕರ ಅನುಕೂಲಕ್ಕಾಗಿ 7800 ಹೊಸ ಬಸ್ಸುಗಳ ಸೇರ್ಪಡೆ 8.3510 ಕೋಟಿ ಮತ್ತು 10000 ಹೊಸ ನೇಮಕಾತಿಯನ್ನು ಮಾಡಲಾಗಿದೆ.








