ಬೆಂಗಳೂರು: ಸಹಕಾರ ಇಲಾಖೆ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಯಶಸ್ವಿನಿ ಯೋಜನೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ABARK ಯೋಜನೆಲ್ಲಿ ಅನೇಕ ಕುಟುಂಬಗಳು ಎರಡು ಯೋಜನೆಗಳಲ್ಲಿಯೂ ಫಲಾನುಭವಿಗಳಿದ್ದಾರೆ ಎಂದು ತಿಳಿಸಲಾಗಿದೆ. ಎರಡೂ ಯೋಜನೆಗಳು ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ಗಳವರೆಗೆ ಆರೋಗ್ಯ ರಕ್ಷಣೆಯನ್ನು (Health Coverage) ಒದಗಿಸುತ್ತವೆ ಎಂದು ತಿಳಿಸಲಾಗಿದೆ.
ಯಶಸ್ವಿನಿ ಫಲಾನುಭವಿಗಳ ಆಧಾರ್ ಸೀಡೆಡ್ ಡೇಟಾವನ್ನು ಸಹಕಾರ ಇಲಾಖೆಯಿಂದ ಸಂಗ್ರಹಿಸಲಾಗಿದೆ ಮತ್ತು ಅದನ್ನು ABArK ಫಲಾನುಭವಿಗಳ ಡೇಟಾಬೇಸ್‌ನೊಂದಿಗೆ ತಾಳೆ ಮಾಡಲಾಗಿದೆ (de-duplicate) ಎಂದು ವರದಿಸಲಾಗಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಯಶಸ್ವಿನಿ ಯೋಜನೆಯ 3,07,192 ಫಲಾನುಭವಿಗಳು ABArK ಯೋಜನೆಯಲ್ಲಿ ರೂ. 130,22,65,020/-ಮೊತ್ತದ ಚಿಕಿತ್ಸೆಯನ್ನು ಪಡೆದಿರುತ್ತಾರೆಂದು ವರದಿಸಲಾಗಿದೆ.
ಆದರೆ, ABARK ಯೋಜನೆಯ ಮಾರ್ಗಸೂಚಿಯಲ್ಲಿ ಫಲಾನುಭವಿಗಳು ಬೇರೆ ಯಾವುದೇ ಸರ್ಕಾರಿ ನೆರವಿನ ಯೋಜನೆಯಲ್ಲಿ ನೋಂದಾಯಿಸಬಾರದು ಎಂದು ನಿರ್ದಿಷ್ಟಪಡಿಸಲಾಗಿರುತ್ತದೆ. ಆದುದರಿಂದ, ಯಶಸ್ವಿನಿ ಯೋಜನೆಯು ಸರ್ಕಾರಿ ನೆರವಿನ ಯೋಜನೆಯಾಗಿರುವುದರಿಂದ, ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಲ್ಪಟ್ಟ ಫಲಾನುಭವಿಗಳು AbArK ಯೋಜನೆಯಡಿಯಲ್ಲಿ ಫಲಾನುಭವಿಗಳಾಗಲು ಅರ್ಹರಾಗಿರುವುದಿಲ್ಲ. ಈ ಎರಡು ಯೋಜನೆಗಳಲ್ಲಿ ಫಲಾನುಭಾವಿಗಳು ಪುನರಾವರ್ತಿತರಾಗಿರುವುದರಿಂದ, AbArk ಯೋಜನೆಯಿಂದ ಇಂತಹ ಪುನರಾವರ್ತಿತ ಫಲಾನುಭವಿಗಳನ್ನು ತೆಗೆದುಹಾಕುವ ಮೂಲಕ ಅಥವಾ ಯಶಸ್ವಿನಿ ಯೋಜನೆಯನ್ನು SAST ಪ್ಲಾಟ್‌ಫಾರ್ಮ್‌ಗೆ ಆನ್‌ಬೋರ್ಡಿಂಗ್ ಮಾಡುವ ಮೂಲಕ ಯೋಜನೆಗಳ ಪುನರಾವರ್ತಿತ ಫಲಾನುಭಾವಿಗಳನ್ನು ತೆಗೆದುಹಾಕಲು ಸಾಧ್ಯವಾಗುತ್ತದೆಯೆಂದು ಸೂಚಿಸಲಾಗಿದೆ.