ಬೆಂಗಳೂರು :ರಾಜ್ಯ ಸರ್ಕಾರದ ಪ್ರಮುಖ ಭತ್ಯೆಗಳಲ್ಲಿ ತುಟ್ಟಿ ಭತ್ಯೆ ಮನೆ ಬಾಡಿಗೆ ಭತ್ಯೆ ನಗರ ಪರಿಹಾರ ಭತ್ಯೆ, ಪುಭಾರ ಭತ್ಯೆ ನಿಗದಿತ ಪುಯಾಣ ಭತ್ಯೆ ಪ್ರಯಾಣ ಭತ್ಯೆ ದಿನಭತ್ಯೆ ವರ್ಗಾವಣೆ ಭತ್ಯೆ ಹೊರ ರಾಜ್ಯ ಭತ್ಯೆ. ಸಮವಸ್ತ್ರ ಭತ್ಯೆ ಮತ್ತು ವಿಶೇಷ (ಕರ್ತವು ಭತ್ಯೆಗಳು ಒಳಗೊಂಡಿವೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸಮಾನ ಶ್ರೇಣೀಕೃತ ಹುದ್ದೆಗಳು ಏಕ ರೀತಿಯ ವೇಶನವನ್ನು ಪಡೆಯುವ ರೀತಿಯಲ್ಲಿ ವೇತನ ಶ್ರೇಣಿಗಳನ್ನು ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ ಸಾಮಾನ್ಯವಾಗಿ ನೌಕರರಿಗೆ ಅನ್ವಯಿಸುವ ವೇತನ ಶ್ರೇಣಿಗಳು ಸಾಕಷ್ಟು ಬಾರಿ ಈ ಹುದ್ದೆಗಳ ನಡುವಿನ ಕಾರ್ಯಸ್ಥಿತಿ ಮತ್ತು ಕೆಲಸದ ಪ್ರಮಾಣ ಮತ್ತು ಸ್ವರೂಪ ಮತ್ತು ನೌಕರರು ಕಾರ್ಯನಿರ್ವಹಣೆ ಸಂದರ್ಭದಲ್ಲಿ ಮಾಡುವ ವೆಚ್ಚದಲ್ಲಿ ಮತ್ತು ಕಾರ್ಯಕ್ಷೇತ್ರಗಳಲ್ಲಿ ಎದುರಿಸುವ ಕಷ್ಟಪರಿಸ್ಥಿತಿಗಳಲ್ಲಿ ಇರುವ ಗಣನೀಯ ವ್ಯತ್ಯಾಸಗಳಿಗೆ ಸೂಕ್ತವಾದ ಪರಿಹಾರ ನೀಡುವುದಿಲ್ಲ. ವೇತನದ ಮೌಲ್ಯವನ್ನು ಹಣದುಬ್ಬರಿದಂದ ಕುಸಿಯುವುದನ್ನು ರಕ್ಷಿಸಲು ತುಟ್ಟಿ ಭತ್ಯೆಯಂತಹ ಭತ್ಯೆಗಳನ್ನು ಎಲ್ಲಾ ನೌಕರರಿಗೆ ಸಂದಾಯ ಮಾಡಲಾಗುತ್ತಿದ್ದರೆ, ಕೆಲವು ಭತ್ಯೆಗಳನ್ನು ಆತ ಅಥವಾ ಆಕೆ ನಿರ್ವಹಿಸುವ ಯಾವುದೇ ಹೆಚ್ಚುವರಿ ಅಥವಾ ವಿಶೇಷವಾಗಿ ಕಠಿಣವಾದ ಕಾರ್ಯನಿರ್ವಹಣೆಗಾಗಿ ಪಾವತಿಸಲಾಗುತ್ತದೆ.
ರಾಜ್ಯ ಸರ್ಕಾರದ ಪ್ರಮುಖ ಭತ್ಯೆಗಳಲ್ಲಿ ತುಟ್ಟಿ ಭತ್ಯೆ ಮನೆ ಬಾಡಿಗೆ ಭತ್ಯೆ ನಗರ ಪರಿಹಾರ ಭತ್ಯೆ, ಪುಭಾರ ಭತ್ಯೆ ನಿಗದಿತ ಪುಯಾಣ ಭತ್ಯೆ ಪ್ರಯಾಣ ಭತ್ಯೆ ದಿನಭತ್ಯೆ ವರ್ಗಾವಣೆ ಭತ್ಯೆ ಹೊರ ರಾಜ್ಯ ಭತ್ಯೆ. ಸಮವಸ್ತ್ರ ಭತ್ಯೆ ಮತ್ತು ವಿಶೇಷ (ಕರ್ತವು ಭತ್ಯೆಗಳು ಒಳಗೊಂಡಿವೆ. ಎಲ್ಲಾ ಇಲಾಖೆಗಳ ಪತ್ರಾಂಕಿತ ಆಪ್ತ ಸಹಾಯಕರು, ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಲಿಫ್ಟ್ ಆಟೆಂಡರ್ ಗಳಂತಹ ನಿರ್ದಿಷ್ಟ ಪ್ರವರ್ಗಗಳ ನೌಕರರಿಗೆ ನೀಡುವ ವಿಶೇಷ ಭತ್ಯೆಗಳಲ್ಲಿ ಏಕರೂಪತೆ ಇದೆ. ಪೊಲೀಸ್ ಇಲಾಖೆಯಲ್ಲಿ ನೀಡಲಾಗುತ್ತಿರುವ ಕಷ್ಟ ಪರಿಹಾರ ಭತ್ಯೆ ಪಡಿತರ ಭತ್ಯೆ ಸಾರಿಗೆ ಭತ್ಯೆ; ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿನ ಅಧಿಕಾರಿಗಳಿಗೆ ನೀಡಲಾತ್ತಿರುವ ಉಡುಪಿನ ಭತ್ಯೆ ಮತ್ತು ನಾನ್-ಪ್ಯಾಕ್ಸಿಸಿಂಗ್ ಭತ್ಯೆಗಳಂತಹ ಇನ್ನು ಕೆಲವು ಭತ್ಯೆಗಳು ಕೆಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೀಮಿತ ವರ್ಗದ ನೌಕರರಿಗೆ ನಿರ್ದಿಷ್ಟವಾಗಿರುತ್ತದೆ.
ಸಾಮಾನ್ಯ ಪರಿಶೀಲನಾ ವಿಧಾನ
ಪ್ರಚಲಿತವಿರುವ ಭತ್ಯೆಯ ದರಗಳಲ್ಲಿ ಹೆಚ್ಚಳ, ಹೊಸ ಭತ್ಯೆಗಳ ಮಂಜೂರಾತಿ ಮತ್ತು ಜಾರಿಯಲ್ಲಿರುವ ಕೆಲವು ಭತ್ಯೆಗಳನ್ನು ಹೊಸ ವರ್ಗದ ನೌಕರರಿಗೆ ವಿಸ್ತರಿಸುವುದಕ್ಕಾಗಿ ಇಲಾಖೆಗಳ ಮುಖ್ಯಸ್ಥರಿಂದ. ನೌಕರರ ಸಂಘಗಳಿಂದ ಮತ್ತು ವೈಯಕ್ತಿಕವಾಗಿ ನೌಕರರಿಂದ ಹಲವಾರು ಕೋರಿಕೆ ಮತ್ತು ಮನವಿಗಳನ್ನು ಆಯೋಗವು ಸ್ವೀಕರಿಸಿದೆ. ಕೆಲ ಭತ್ಯೆಗಳನ್ನು ತರ್ಕಬದ್ಧಗೊಳಿಸಲು ಸಹ ಕೆಲವು ಸಲಹೆಗಳು ಬಂದಿರುತ್ತವೆ.
2011 ರ ಅಧಿಕಾರಿ ವೇತನ ಸಮಿತಿಯು, ರಾಜ್ಯ ಸರ್ಕಾರಿ ನೌಕರರಿಗೆ ಅಂದು ಜಾರಿಯಲ್ಲಿದ್ದ ಭತ್ಯೆಗಳ ವಿಸ್ತ್ರತ ಪರಿಷ್ಕರಣೆಯನ್ನು ಕೈಗೊಂಡು ಭತ್ಯೆ ಅಥವಾ ವಿಶೇಷ ಭತ್ಯೆಗಳನ್ನು ಸಮರ್ಥಿಸುವ ವಿವಿಧ ಪರಿಸ್ಥಿತಿಗಳನ್ನು ಪಟ್ಟಿ ಮಾಡಿರುತ್ತದೆ ಸಮಿತಿಯು ತಾನು ಗುರುತಿಸಿದ ಮಾನದಂಡಗಳ ಆಧಾರದ ಮೇಲೆ ಕೆಲವು ಭತ್ಯೆಗಳಲ್ಲಿ ಹೆಚ್ಚಳವನ್ನು ಕೆಲವು ಹೊಸ ಭತ್ಯೆಗಳನ್ನು ಮತ್ತು ಸಮರ್ಥನೀಯವಲ್ಲದ ಕೆಲವು ಭತ್ಯೆಗಳನ್ನು ರದ್ದುಗೊಳಿಸಲು ಶಿಫಾರಸ್ಸು ಮಾಡಿರುತ್ತದೆ ಸಮಿತಿಯು ಭತ್ಯೆಗಳನ್ನು ಮೂಲ ವೇತನದ ಶೇಕಡಾವಾರು ಅಥವಾ ಅನುನಾತಕ್ಕನುಸಾರವಾಗಿ ನಿಗದಿಪಡಿಸುವ ಬದಲಾಗಿ ಸ್ಥಿರ ಪ್ರಮಾಣದಲ್ಲಿ ನಿಗದಿಪಡಿಸುವ ಮೂಲಕ ಭತ್ಯೆಗಳ ಮಂಜೂರಾತಿ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿರುತ್ತದೆ. ಇಂದು ಅಸ್ತಿತ್ವದಲ್ಲಿರುವ ಬಹುತೇಕ ಭತ್ಯೆಗಳು 2011 ರಲ್ಲಿ ಉಳಿಸಿಕೊಳ್ಳಲಾದ ಅಥವಾ ಹೊಸದಾಗಿ ಜಾರಿಗೊಳಿಸಲಾದವುಗಳೇ ಆಗಿರುತ್ತದೆ. ನಂತರ ಕೆಲವು ಭತ್ಯೆಗಳನ್ನು ಸ್ವತಃ ಸರ್ಕಾರವೇ ಮಂಜೂರು ಮಾಡಿರುತ್ತದೆ. 2011ರ ಸಮಿತಿಯು ನಿರ್ಧರಿಸಿದ ಮಾನದಂಡವನ್ನೇ ಪ್ರಮುಖವಾಗಿ ಉಪಯೋಗಿಸಿಕೊಂಡು 6ನೇ ರಾಜ್ಯ ವೇತನ ಆಯೋಗವು ಕೆಲವು ಪರಿಷ್ಕರಣೆ ಮತ್ತು ಬದಲಾವಣೆಗಳನ್ನು ಶಿಫಾರಸ್ಸು ಮಾಡಿರುತ್ತದೆ.
ಈ ಆಯೋಗವು ತನ್ನ ಶಿಫಾರಸ್ಸುಗಳನ್ನು ರೂಪಿಸುವಲ್ಲಿ ವಿವಿಧ ಭತ್ಯೆಗಳ ಕುರಿತು ವಿಸ್ಕೃತ ಪರಿಶೀಲನೆಯನ್ನು ಕೈಗೊಂಡಿರುತ್ತದೆ. ಸಂಬಂಧಪಟ್ಟ ಇಲಾಖೆಗಳ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದರ ಮೂಲಕ ಕೆಲವು ಭತ್ಯೆಗಳು ಮತ್ತು ಸೌಲಭ್ಯಗಳನ್ನು ತರ್ಕಬದ್ರಗೊಳಿಸಲಾಗಿದೆ. ಆಯೋಗವು ವಿವಿಧ ಭತ್ಯೆಗಳ ದರಗಳ ಪರಿಷ್ಕರಣೆಯ ಶಿಫಾರಸ್ಸನ್ನು ಮಾಡುವಾಗ ಜೀವನ ವೆಚ್ಚ ವಸತಿ ವೆಚ್ಚ ಮತ್ತು ಸಾರಿಗೆ ದರಗಳಲ್ಲಿನ ಹೆಚ್ಚಳದ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿದೆ. ಈ ಆಯೋಗದ ಹೊಸ ವೇತನ ರಚನೆಯ ಶಿಫಾರಸ್ಸಿನ ಪರಿಣಾಮವಾಗಿ ಆಗುವ ವೇತನ ಮತ್ತು ಉಪಲಭ್ಯಗಳ ಪಮಾಣದಲ್ಲಿನ ಹೆಚ್ಚಳ. ಭತ್ಯೆ ಮಂಜೂರು ಮಾಡಿದ ಮತ್ತು ಹಿಂದಿನ ಪರಿಷ್ಕರಣೆಯ ದಿನಾಂಕ, ನೆರೆಯ ರಾಜ್ಯಗಳಲ್ಲಿ ಮತ್ತು ಭಾರತ ಸರ್ಕಾರದಲ್ಲಿ ಸಮಾನ ಭತ್ಯೆಗಳ ಪ್ರಚಲಿತ ದರಗಳು ಜಾರಿಯಲ್ಲಿರುವ ಭತ್ಯೆಯ ಪ್ರಮಾಣದ ಸಮರ್ಪಕತೆ ಮತ್ತು ಪರಿಷ್ಕರಣೆಯಿಂದ ರಾಜ್ಯ ಸರ್ಕಾರದ ಮೇಲೆ ಉಂಟಾಗಬಹುದಾದ ಆರ್ಥಿಕ ಪರಿಣಾಮವನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಹೊಸ ರೀತಿಯ ಭತ್ಯೆಗಳ ಮಂಜೂರಾತಿ ಮತ್ತು ಕೆಲವು ಜಾರಿಯಲ್ಲಿರುವ ಭತ್ಯೆಗಳನ್ನು ಹೊಸ ವರ್ಗದ ನೌಕರರಿಗೆ ವಿಸ್ತರಿಸುವ ಕುರಿತು ಸ್ವೀಕರಿಸಲಾದ ಮನವಿಗಳನ್ನು ಪ್ರತ್ಯೇಕವಾಗಿ ಪರಾಮರ್ಶಿಸಲಾಗಿದೆ ಮತ್ತು ಪ್ರತಿ ಇಲಾಖೆಗಳ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಸಂಪುಟ || ರಲ್ಲಿ ಶಿಫಾರಸ್ಸು ಮಾಡಿರುವ ಸಂದರ್ಭದಲ್ಲಿ
ಭತ್ಯೆಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ಮತ್ತು ವಿಶೇಷ ಭತ್ಯೆಗಳ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಕಾರ್ಯಸ್ವರೂಪಕ್ಕೆ ನಿರ್ದಿಷ್ಟವಾಗಿ ಸಂಬಂಧಿಸದ ಕೆಲವು ಭತ್ಯೆಗಳನ್ನು ಜಾರಿ ಮಾಡಿರುವುದು ಆಯೋಗವು ಗಮನಿಸಿದೆ. ಅವುಗಳ ಅಸ್ತಿತ್ವವು ಸಾಕಷ್ಟು ಬಾರಿ, ಆಯಾ ನೌಕರರ ಸಂಘಗಳು ಆಡಳಿತದ ಮೇಲೆ ಬೀರುವ ಒತ್ತಡಕ್ಕೆ ನೇರ ಸಂಬಂಧ ಹೊಂದಿರುವುದು ಕಂಡುಬರುತ್ತದೆ. ನಿರಂತರವಾಗಿ ವಿಸ್ತರಣೆಗೊಳ್ಳುತ್ತಿರುವ ಭತ್ಯೆಗಳ ಫಲಾನುಭವಿಗಳ ಪಟ್ಟಿಗೆ ಯಾವುದೇ ವೇತನ ಆಯೋಗ/ಸಮಿತಿಗಳ ಶಿಫಾರಸ್ಸುಗಳಿಲ್ಲದೆ ಸ್ವತಂತ್ರವಾಗಿ ಕಾರ್ಯಕಾರಿ ಆದೇಶಗಳ ಮೂಲಕ ಹೊಸ ಸೇರ್ಪಡೆಗಳಾಗುತ್ತಿರುವುದು ಕಂಡು ಬಂದಿರುತ್ತದೆ. ಅದೇ ರೀತಿ, ವೇತನ ಆಯೋಗ/ಸಮಿತಿಗಳ ವರದಿಗಳ ನಡುವಿನ ಅಂತರದಲ್ಲಿ ಸರ್ಕಾರವು ಕೆಲ ನಿರ್ದಿಷ್ಟ ವರ್ಗಗಳ ನೌಕರರಿಗೆ ಭತ್ಯೆಗಳನ್ನು ಪರಿಷ್ಕರಣೆ ಮಾಡಿರುತ್ತದೆ ಮತ್ತು ಹೊಸ ಭತ್ಯೆಗಳನ್ನು ಜಾರಿಗೊಳಿಸಿರುತ್ತದೆ. ಈ ಕಾರಣಕ್ಕಾಗಿ ನಾವು ಯಾವುದೇ ವಿಶೇಷ ಭತ್ಯೆಯನ್ನು ಮುಂದುವರೆಸಲು ಅಥವಾ ರದ್ದುಗೊಳಿಸುವ ಅಗತ್ಯತೆ ಬಗ್ಗೆ ಚರ್ಚಿಸಿರುವುದಿಲ್ಲ. ಆದರೆ, ಈ ಹಿಂದೆ ತಿಳಿಸಿದಂತೆ ಈಗಾಗಲೇ ಜಾರಿಯಲ್ಲಿರುವ ಭತ್ಯೆಗಳು ಜಾರಿಯಾದ ಅಥವಾ ಹಿಂದಿನ ಪರಿಷ್ಕರಣೆಯ ನಂತರದಲ್ಲಿ ಆಗಿರುವ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಚಲಿತ ಭತ್ಯೆಗಳ ದರಗಳನ್ನು ಮಾತ್ರ ಪರಿಷ್ಕರಿಸಲಾಗಿದೆ.
ಯಾವುದೇ ಭತ್ಯೆಯನ್ನು ಜಾರಿಗೊಳಿಸಲು ಅಥವಾ ಪರಿಷ್ಕರಿಸಲು ನಿರ್ದಿಷ್ಟ ಕಾರ್ಯವಿಧಾನ ಇಲ್ಲದೇ ಇರುವಂತೆಯೇ ಪ್ರಸ್ತುತ ಜಾರಿಯಲ್ಲಿದ್ದು ಈಗ ಅವಶ್ಯಕತೆ ಇಲ್ಲದಿರುವಂತಹ ಭತ್ಯೆಗಳು ಹಾಗೂ ಸೌಲಭ್ಯಗಳನ್ನು ರದ್ದುಗೊಳಿಸಲು ಸಹ ಯಾವುದೇ ವ್ಯವಸ್ಥೆ ಕಂಡುಬರುತ್ತಿಲ್ಲ ಆರ್ಥಿಕ ಇಲಾಖೆ. ಸಿಆಸುಇಲಾಖೆ ಮತ್ತು ಸಂಬಂಧಪಟ್ಟ ಆಡಳಿತಾತ್ಮಕ ಇಲಾಖೆಗಳನ್ನೊಳಗೊಂಡ ಸ್ನಾಯಿ ಸಮಿತಿಯು ಸಂಬಂಧಪಟ್ಟ ಇಲಾಖೆಯಲ್ಲಿ ಜಾರಿಯಲ್ಲಿರುವ ಭತ್ಯೆಗಳನ್ನು ನಿಯತವಾಗಿ ಪುನರ್ ವಿಮರ್ಶೆ ಮಾಡಿ ಅಗತ್ಯವಲ್ಲದವುಗಳನ್ನು ರದ್ದುಗೊಳಿಸಲು ಕ್ರಮಕೈಗೊಳ್ಳಬೇಕೆಂಬುದು ಆಯೋಗದ ಅಭಿಪ್ರಾಯವಾಗಿದೆ. ಯಾವುದೇ ಸಂದರ್ಭದಲ್ಲಿ, ಈ ಸಮಿತಿಯು ನಿರ್ದಿಷ್ಟ ಶಿಫಾರಸ್ಸಿನ ಹೊರತು ಯಾವುದೇ ಹೊಸ ಭತ್ಯೆಯನ್ನು ಜಾರಿಗೊಳಸತಕ್ಕದಲ್ಲ.
ನಿರ್ದಿಷ್ಟವಾಗಿ ಪರಿಗಣಿಸದಿರುವ ಆದರೆ ಪ್ರಸ್ತುತ ಮಂಜೂರು ಮಾಡಲಾಗುತ್ತಿರುವ ಯಾವುದೇ ಭತ್ಯೆ/ವಿಶೇಷ ಭತ್ಯೆಗಳು ಅಥವಾ ಯಾವುದೇ ಇತರೆ ಸೌಲಭ್ಯಗಳು ಇದ್ದಲ್ಲಿ ಅವುಗಳು ಪ್ರಚಲಿತ ದರ ಹಾಗೂ ಷರತ್ತು ಮತ್ತು ನಿಬಂಧನೆಗಳೊಂದಿಗೆ ಮುಂದುವರೆಯತಕ್ಕದ್ದು.
ಶಿಫಾರಸ್ಸುಗಳು
ಎ. ಮನೆ ಬಾಡಿಗೆ ಭತ್ಯೆ (ಹೆಚ್‌ಆರ್.ಎ)
ಮನೆ ಬಾಡಿಗೆ ಭತ್ಯೆಯು ನೌಕರನು/ನೌಕರಳು ತನ್ನ ವಾಸ ಸ್ನಾನಕ್ಕಾಗಿ ಭರಿಸುವ ವೆಚ್ಚಕೆ, ಸಂಬಂಧಿಸಿದಂತೆ ನೀಡಲಾಗುವ ಪರಿಹಾರವಾಗಿದೆ. ಇದನ್ನು ನೌಕರನ ಅಥವಾ ನೌಕರಳ ಮೂಲ ವೇತನದ ಶೇಕಡಾವಾರು ಪ್ರಮಾಣದಲ್ಲಿ ಸೂಚಿಸಲಾಗುತ್ತದೆ ಜನಸಂಖ್ಯೆಯ ಆಧಾರದ ಮೇಲೆ ನಗರ. ಪಟ್ಟಣಗಳು ಮತ್ತು ಇತರ ವಾಸಸ್ಥಳಗಳ ವರ್ಗಿಕರಣದ ಮೂಲಕ ಇದನ್ನು ಪಾವತಿಸಲಾಗುತ್ತದೆ. 2011 ದ ಜನಗಣತಿಯ ಅಂಕಿ-ಅಂಶಗಳ ಆಧಾರದ ಮೇಲೆ ಕಳೆದ ಬಾರಿ 2015ರಲ್ಲಿ ವರ್ಗೀಕರಣವನ್ನು ಕೈಗೊಳ್ಳಲಾಗಿದ್ದು, 25ಲಕ್ಷ ಮತ್ತು ಮೇಲ್ಮಟ್ಟ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು “ಎ” ಪವರ್ಗವೆಂದು, 5 ಲಕ್ಷ ಮತ್ತು ಮೇಲ್ಪಟ್ಟ ಆದರೆ 25 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು “ಬಿ” ಪ್ರವರ್ಗವಾಗಿ ಮತ್ತು ಇತರೆ ಎಲ್ಲಾ ಪಟ್ಟಣಗಳು ಮತ್ತು ಸ್ಥಳಗಳನ್ನು “ಸಿ” ಪ್ರವರ್ಗಗಳಾಗಿ ವರ್ಗೀಕರಿಸಲಾಗಿದೆ. ಇದನ್ನು ಆಧರಿಸಿ ಕರ್ನಾಟಕ ರಾಜ್ಯ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ |ಬಿಬಿಎಂಪಿ) ಸಂಪೂರ್ಣ ಪ್ರದೇಶವನ್ನು ‘ಎ’ ಪ್ರವರ್ಗವಾಗಿ, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಮತ್ತು ಕಲಬುರಗಿ ಪುರಸಭೆ ಪ್ರದೇಶಗಳನ್ನು ‘ಬಿ’ ಪ್ರವರ್ಗವಾಗಿ ಮತ್ತು ಇತರೆ ಎಲ್ಲಾ ಪ್ರದೇಶಗಳನ್ನು ‘ಸಿ’ ಪ್ರವರ್ಗವಾಗಿ ವರ್ಗೀಕರಣ ಮಾಡಿದೆ.
ಎಲ್ಲಾ ಪ್ರದೇಶಗಳಲ್ಲಿ ಮನೆ ಬಾಡಿಗೆ ಭತ್ಯೆಯ ದರಗಳಲ್ಲಿ ಗಣನೀಯ ಹೆಚ್ಚಳಕ್ಕಾಗಿ ಅನೇಕ ಬೇಡಿಕೆಗಳನ್ನು ಆಯೋಗವು ಸ್ವೀಕರಿಸಿದೆ. ಮನೆ ಬಾಡಿಗೆ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸಮನಾಗಿ ಪರಿಗಣಿಸಬೇಕೆಂದು ಕೆಲವರು ಮನವಿ ಮಾಡಿದ್ದಾರೆ. ಕೆಎಜಿಇಎಯು ತಮ್ಮ ವಿಸ್ತ್ರತ ಮನವಿಯಲ್ಲಿ ಇತರೆ ವಿಷಯಗಳೊಂದಿಗೆ, ಪುದೇಶಗಳ ಮರುವರ್ಗೀಕರಣವನ್ನು ಕೋರಿದೆ ಮತ್ತು ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯನ್ನು (ಕೇವಲ ಬಿಬಿಎಂಪಿ ಪ್ರದೇಶವಲ್ಲದ) “ಎ” ಪ್ರವರ್ಗದ ಅಡಿಯಲ್ಲಿ ತರಬೇಕೆಂಬುದನ್ನು ಸಹ ಕೋರಿರುತ್ತದೆ. ಮುಂದುವರೆದು, ಶಿವಮೊಗ, ದಾವಣಗೆರೆ, ತುಮಕೂರು, ವಿಜಯಪುರ ಮತ್ತು ಬಳ್ಳಾರಿ ನಗರಗಳನ್ನು ‘ಬಿ’ ಪ್ರವರ್ಗದ ಅಡಿಯಲ್ಲಿ ಸೇರಿಸಬೇಕೆಂದು ಕೋರಿರುತ್ತದೆ.
ಮನೆ ಬಾಡಿಗೆ ಭತ್ಯೆಯ ಮಂಜೂರಾತಿ ಉದ್ವೇಶಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಸರಿಸಮನಾಗಿ ಪರಿಗಣಿಸುವ ಕೋರಿಕೆಗೆ ಸಂಬಂಧಿಸಿದಂತೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜೀವನಮಟ್ಟ ಮತ್ತು ಜೀವನ ವೆಚ್ಚದಲ್ಲಿ ಗಣನೀಯ ಅಂತರವಿರುವುದರಿಂದ ಕೋರಿಕೆಯನ್ನು ಅಂಗೀಕರಿಸುವುದು ಕಷ್ಟವಾಗುತ್ತದೆ. ಭತ್ಯೆಯು ವಾಸ್ತವಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸಬೇಕೆ ಹೊರತು ಇದು ಎಲ್ಲಾ ನೌಕರರಿಗೆ ವಿಸ್ತರಿಸಲಾಗುವ ಒಂದು ಸೌಲಭ್ಯ ಎಂಬಂತೆ ಪರಿಗಣಿಸಬಾರದು.
ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯನ್ನು ‘ಎ’ ಪವರ್ಗವನ್ನಾಗಿ ಮರು ವರ್ಗೀಕರಣ ಮಾಡುವ ಬೇಡಿಕೆಗೆ ಸಂಬಂಧಿಸಿದಂತೆ, ಬೆಂಗಳೂರು ನಗರ ಜಿಲ್ಲೆಯು 2.196 ಚದರ ಕಿಲೋಮೀಟರ್ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದ್ದು, ಬಿಬಿಎಂಪಿಯ ವ್ಯಾಪ್ತಿಯ ನಗರ ಪ್ರದೇಶದ ವಾಸಸ್ಥಳಗಳಲ್ಲಿ ಕಂಡು ಬರುವ ವಿಶೇಷ ಲಕ್ಷಣಗಳು ಮತ್ತು ವೈಶಿಷ್ಟ್ಯತೆಗಳು ಬಿಬಿಎಂಪಿ ವ್ಯಾಪ್ತಿಗೆ ಸೇರದ ಪ್ರದೇಶಗಳಿಗಿಂತ ಭಿನ್ನವಾಗಿರುತ್ತವೆ. ಉದಾಹರಣೆಗೆ ಬಿಬಿಎಂಪಿ ಅಲ್ಪದ ಪ್ರದೇಶಗಳಲ್ಲಿನ ಜೀವನ ವೆಚ್ಚ ಮತ್ತು ಬಾಡಿಗೆಯು ಬಿಬಿಎಂಪಿ ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಕಡಿಮೆಯಿರುತ್ತದೆ. ಆದಕಾರಣ ಈ ಬೇಡಿಕೆಯನ್ನು ಪರಿಗಣಿಸಲು ಸಾಧ್ಯವಿರುವುದಿಲ್ಲ.
ಪ್ರಸ್ತುತ ‘ಸಿ’ ಪ್ರವರ್ಗದ ಅಡಿಯಲ್ಲಿ ಬರುವ ಶಿವಮೊಗ, ದಾವಣಗೆರೆ, ತುಮಕೂರು, ವಿಜಯಪುರ ಮತ್ತು ಬಳ್ಳಾರಿ ನಗರಗಳನ್ನು ‘ಬಿ’ ಪ್ರವರ್ಗದ ಅಡಿಯಲ್ಲಿ ಸೇರಿಸಬೇಕೆಂಬ ಕೋರಿಕೆಗೆ ಸಂಬಂಧಿಸಿದಂತೆ ಈ ನಗರಗಳ ಹಾಲಿ ಜನಸಂಖ್ಯೆಯ ಆಧಾರದ ಮೇಲೆ ಈ ಬೇಡಿಕೆಯಲ್ಲಿ ಕೆಲವು ಸಮರ್ಥನೀಯ ಅಂಶಗಳು ಇರಬಹುದು. ಆದಾಗ್ಯೂ ವಾಸ್ತವವೆಂದದೆ. ಮನೆ ಬಾಡಿಗೆ ಭತ್ಯೆಯನ್ನು ನಿಗದಿಪಡಿಸುವ ಉದ್ದೇಶಕ್ಕಾಗಿ ಇಂದಿನ ನಗರಗಳ ವರ್ಗೀಕರಣವು 2011 ರ ಜನಗಣತಿಯನ್ನು ಆಧರಿಸಿರುವುದರಿಂದ ಕೆಲವು ಪ್ರದೇಶಗಳಿಗೆ ಸಂಬಂಧಿಸಿದಂತೆ ಮಾತ್ರವೇ ವಿನಾಯಿತಿ ತೋರುವುದು ಕಷ್ಟವಾಗುತ್ತದೆ.
ಬೆಂಗಳೂರು ಗ್ರಾಮೀಣ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ದೇವನಹಳ್ಳಿಯಲ್ಲಿನ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯನ್ನು ಬಿಬಿಎಂಪಿಯ ವ್ಯಾಪ್ತಿಯ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಸಮನಾಗಿ ಪರಿಗಣಿಸಬೇಕೆಂದು ಮತ್ತು ಸಮಾನ ರೀತಿಯ ಮನೆ ಬಾಡಿಗೆ ಭತ್ಯೆಗೆ ನೀಡಬೇಕೆಂಬ ಪೊಲೀಸ್ ಇಲಾಖೆಯ ನಿರ್ದಿಷ್ಟ ಕೋರಿಕೆಯನ್ನು ಆಯೋಗವು ಸ್ವೀಕರಿಸಿರುತ್ತದೆ. ಇದಕ್ಕೆ, ದೇವನಹಳ್ಳಿ ಪೊಲೀಸ್ ಠಾಣೆಯು ಪೊಲೀಸ್ ಆಯುಕ್ತರು, ಬೆಂಗಳೂರು ಇವರ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಬರುತ್ತದೆಂದೂ ಮತ್ತು ಆಯುಕ್ತರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಿಬ್ಬಂದಿಯನ್ನು ಸಮವಾಗಿ ಪರಿಗಣಿಸಬೇಕು ಎಂಬುದು ಪ್ರಮುಖ ವಾದವಾಗಿರುತ್ತದೆ. ಆಯೋಗವು ಈ ಬೇಡಿಕೆಯನ್ನು ಪರಿಶೀಲಿಸಿದೆ. ಮನೆ ಬಾಡಿಗೆ ಭತ್ಯೆಯ ಪ್ರಮಾಣವು ಪ್ರದೇಶಗಳ ವರ್ಗೀಕರಣವನ್ನು ಆಧರಿಬೇಕು ಎಂಬುದು ಆಯೋಗದ ಅಭಿಪ್ರಾಯವಾಗಿದೆ.