ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಎನ್ನುವಂತೆ, ನಿಮ್ಮ ಉಳಿತಾಯ ಖಾತೆಯನ್ನು ವೇತನ ಖಾತೆಯಾಗಿ ಬದಲಾವಣೆ ಮಾಡಲು ಕೆಲ ದಾಖಲೆಗಳು ಕಡ್ಡಾಯಗೊಳಿಸಲಾಗಿದೆ. ಅವು ಏನು ಅಂತ ಮುಂದೆ ಓದಿ.
ಈ ಸಂಬಂಧ ಬ್ಯಾಂಕ್ ನಿಂದ ಮಾಹಿತಿ ನೀಡಲಾಗಿದ್ದು, ಇದಕ್ಕಾಗಿ ಸರ್ಕಾರಿ ನೌಕರರು ಬ್ಯಾಂಕಿಗೆ ಒಂದು ಅರ್ಜಿಯನ್ನು ಸಲ್ಲಿಸಬೇಕಿದೆ. ಅದರಲ್ಲಿ ಹೆಸರು, ಹುದ್ದೆ, ಶಾಖೆಯ ಹೆಸರು, ಬ್ಯಾಂಕ್ ಖಾತೆಯ ವಿವರವನ್ನು ನಮೂದಿಸಬೇಕು.
ಇದಲ್ಲದೇ ನಾನು ಉಳಿತಾಯ ಖಾತೆಯನ್ನು ಈ ಬ್ಯಾಂಕ್ ನಲ್ಲಿ ಹೊಂದಿದ್ದೇನೆ. ಈ ಖಾತೆಯನ್ನು ವೇತನ ಖಾತೆಯಾಗಿ ಬದಲಾಯಿಸೋದಕ್ಕೆ, ತಮ್ಮ ಬ್ಯಾಂಕಿನ ಮೂಲಕ ಸಿಗುವ ವಿವಿಧ ಪ್ರಯೋಜನ ಪಡೆಯಲು ಇಚ್ಚಿಸುತ್ತೇನೆ ಎಂಬುದಾಗಿಯೂ ತಿಳಿಸಬೇಕು.
ಪ್ರಸ್ತುತ ರಾಜ್ಯ ಸರ್ಕಾರಿ ನೌಕರರೆಲ್ಲರೂ ತಮ್ಮ ಉಳಿತಾಯ ಖಾತೆಯನ್ನು ವೇತನ ಖಾತೆಯಾಗಿ ಬದಲಾಯಿಸಿಕೊಂಡು, ಸಂಬಂಳ ಪ್ಯಾಕೇಜ್ ಗಳ ಅಡಿಯಲ್ಲಿನ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರ ಆದೇಶಿಸಿರುತ್ತದೆ. ಹೀಗಾಗಿ ನನ್ನ ವೇತನ ಖಾತೆಯಾಗಿ ಬದಲಾಯಿಸೋದಕ್ಕೆ ಮನವಿಯನ್ನು ಮಾಡಬೇಕು.
ಉಳಿತಾಯ ಖಾತೆ, ವೇತನ ಖಾತೆಯಾಗಿ ಬದಲಾಯಿಸಲು ಈ ದಾಖಲೆ ಕಡ್ಡಾಯ
- ಇತ್ತೀಚಿನ ವೇತನ ಪಾವತಿ ಪ್ರತಿ
- ಬ್ಯಾಂಕ್ ಪಾಸ್ ಬುಕ್ ಮುಖ ಪುಟದ ಜೆರಾಕ್ಸ್ ಪ್ರತಿ
- ಸರ್ಕಾರಿ ನೌಕರರ ಆಧಾರ್ ಕಾರ್ಜ್ ನಕಲು ಪ್ರತಿ
- ಪ್ಯಾನ್ ಕಾರ್ಡ್ ನಕಲು ಪ್ರತಿ
ಈ ಮೇಲ್ಕಂಡ ದಾಖಲೆಗಳನ್ನು ಅರ್ಜಿಯ ಜೊತೆಗೆ ಸರ್ಕಾರಿ ನೌಕರರು ಹೊಂದಿರುವಂತ ಉಳಿತಾಯ ಖಾತೆಯ ಬ್ಯಾಂಕ್ ಗೆ ತೆರಳಿ ನೀಡಿದರೇ, ಅದನ್ನು ವೇತನ ಖಾತೆಯಾಗಿ ಅಂದರೇ ಸ್ಯಾಲರಿ ಅಕೌಂಟ್ ಆಗಿ ಬ್ಯಾಂಕ್ ಸಿಬ್ಬಂದಿ ಬದಲಾವಣೆ ಮಾಡಲಿದ್ದಾರೆ. ಆ ಮೂಲಕ ವೇತನ ಖಾತೆಯ ಅಡಿಯಲ್ಲಿ ಸಿಗುವಂತ ಕೆಲ ಪ್ರಯೋಜನಗಳು ಲಭ್ಯವಾಗುವಂತೆ ಆಗಲಿದೆ.