ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತಿ ವೇತನ, ನಿವೃತ್ತಿ ವೇತನದ ಸೌಲಭ್ಯಗಳ ಕುರಿತಂತೆ ಮಹತ್ವದ ಮಾಹಿತಿಯನ್ನು ನೀಡಲಾಗಿದೆ. ನಿವೃತ್ತಿ ವೇತನ (ಪೆನ್ನನ್ನ ಮೂಲ ಲ್ಯಾಟಿನ್ ಪದ ಪೆನ್ನಿಯೊ – “ಪಾವತಿ) ಎಂದರೆ ಸೇವೆಯಿಂದ ನಿವೃತ್ತಿಯಾದ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಆರ್ಥಿಕ ಬೆಂಬಲ ನೀಡುವ ದೃಷ್ಟಿಯಿಂದ ಪಾವತಿಸಲಾಗುವ ವೇತನ ಮತ್ತು ನಿವೃತ್ತಿಯಾದ ನೌಕರರಿಗೆ ಆತ ಅಥವಾ ಆಕೆಯ ನಿವೃತ್ತಿಯ ಪ್ರಾರಂಭದಿಂದಲೂ ಪ್ರತಿ ತಿಂಗಳು ಮಾಡುವ ಪಾವತಿಯಾಗಿರುತ್ತದೆ.
ನಿವೃತ್ತಿ ವೇತನವು ಉದ್ಯೋಗದಾತನಿಗೆ ಸೇವೆಯನ್ನು ಸಲ್ಲಿಸಿದ್ದರ ಪ್ರತಿಫಲ ಹಾಗೂ ಮುಪ್ಪಿನ ಸಮಯದಲ್ಲಿ ಹಣಕಾಸು ಭದ್ರತೆಯನ್ನು ಒದಗಿಸುವ ವಿಧಾನವೂ ಆಗಿರುತ್ತದೆ.
2. ಮಾನ್ಯ ಭಾರತದ ಸರ್ವೋಚ್ಚ ನ್ಯಾಯಾಲಯವು ಡಿ. ಎಸ್. ನಕಾರ ಮತ್ತು ಇತರರ ವಿರುದ್ಧ ಭಾರತ ಸರ್ಕಾರ (ಎಐಆರ್ 1983 ಎಸ್ 130) ಪ್ರಕರಣದ ತನ್ನ ತೀರ್ಪಿನಲ್ಲಿ
“A pension scheme consistent with available resources must provide that the pensioner would be able to live: (1) free from want, with decency, independence and self-respect, and (ii) at a standard equivalent at the pre-retirement level.” And further that “pension is not an ex-gratia payment but payment for past services rendered” and, pension for a retiree “is neither a bounty nor a matter of grace depending upon the sweet will of the employer.”
ನಿವೃತ್ತಿ ವೇತನವು ಸಾಮಾಜಿಕ ಕಲ್ಯಾಣ ಕ್ರಮವಾಗಿದ್ದು “ವ್ಯದಾಪ್ಯದಲ್ಲಿ ಉದ್ಯೋಗದಾತನು ತಮ್ಮ ಕೈಬಿಡುವುದಿಲ್ಲ ಎಂಬ ಭರವಸೆಯ ಮೇಲೆ ತಮ್ಮ ಜೀವನದ ಉಚ್ಚಾಯ ಸ್ಥಿತಿಯಲ್ಲಿ ನಿರಂತರವಾಗಿ ಶ್ರಮಿಸಿದವರಿಗೆ ಸಾಮಾಜಿಕ ಆರ್ಥಿಕ ನ್ಯಾಯವನ್ನು ಒದಗಿಸುವ ಗುರಿ ಹೊಂದಿದೆ ಎಂದು ನ್ಯಾಯಾಲಯವು ನಿರ್ಣಯಿಸಿರುತ್ತದೆ.
3. ಸರ್ಕಾರಿ ಸೇವೆಗೆ ಸೇರುವ ಒಬ್ಬ ವ್ಯಕ್ತಿಯು ಆತ ಅಥವಾ ಆಕೆಯ ಸಂಪೂರ್ಣ ಸೇವಾವಧಿಯಲ್ಲಿ ನಿಶ್ಚಿತ ಆದಾಯವನ್ನು ವೇತನ ರೂಪದಲ್ಲಿ ಸ್ವೀಕರಿಸಿ ನಿವೃತ್ತಿಯವರೆಗೆ ಒಂದು ನಿರ್ದಿಷ್ಟ ಜೀವನಮಟ್ಟವನ್ನು ನಿರ್ವಹಿಸಿರುತ್ತಾರೆ. ಸರ್ಕಾರದಲ್ಲಿ ಸಾಮಾನ್ಯವಾಗಿ 30-35 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಆತ ಅಥವಾ ಆಕೆಯು ನಿವೃತ್ತಿ ನಂತರವೂ ಒಂದು ಕನಿಷ್ಠ ಗುಣಮಟ್ಟದ ಜೀವನವನ್ನು ನಿರ್ವಹಿಸುವ ಆಕಾಂಕ್ಷೆ ಹೊಂದಿರುತ್ತಾರೆ. ನಿವೃತ್ತಿ ವೇತನದ ತಾರ್ಕಿಕತೆಯೆಂದರೆ, ನಿವೃತ್ತಿಯ ನಂತರ ಏಕಾಏಕಿಯಾಗಿ ವೇತನ ಆದಾಯವು ಸ್ಥಗಿತಗೊಂಡ ನಂತರ ನೌಕರನಿಗೆ ಯಾವುದೇ ಇತರೆ ಆದಾಯದ ಮೂಲಗಳು ಇರದಿದ್ದ ಪಕ್ಷದಲ್ಲಿ, ಕೇವಲ ತಮ್ಮ ಉಳಿತಾಯದ ಹಣದಲ್ಲಿ ತಕ್ಕಮಟ್ಟಿಗೆ ಆರಾಮದಾಯಕ ಜೀವನವನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗುತ್ತದೆ. ಮೇಲಾಗಿ, ಅವನು ಅಥವಾ ಅವಳು ಮಾಸಿಕ ಸಂಬಳ ಪಡೆಯುವುದು ನಿಲ್ಲುವುದಲ್ಲದೆ. ನಿವೃತ್ತಿಯ ಸಮಯದಲ್ಲಿ ಕೆಲಸ ಮಾಡುವ ಶಕ್ತಿಯು ಕುಂಠಿತವಾಗಿ, ಆತ ಅಥವಾ ಆಕೆಯ ಉಳಿದ ಜೀವನ ನಿರ್ವಹಣೆಗಾಗಿ ಸರ್ಕಾರದಿಂದ ಸೂಕ್ತ ಹೆಚ್ಚುವರಿ ಬೆಂಬಲದ ಅವಶ್ಯಕತೆ ಬಗ್ಗೆಯೂ ವಾದವಿರುತ್ತದೆ.
4 ನಿವೃತ್ತಿ ವೇತನವು ಎರಡು ಅತ್ಯಾವಶ್ಯಕ ಉದ್ದೇಶಗಳನ್ನು ಪೂರೈಸುತ್ತದೆ ಎನ್ನುವುದು ತಿಳಿದಿರುವ ವಿಷಯವಾಗಿದೆ. ಮೊದಲನೆಯದು, ಒಬ್ಬ ವ್ಯಕ್ತಿಯ ಜೀವನ ನಿರ್ವಹಣೆಯಲ್ಲಿ ಬಳಕೆಯ ಸುಗಮಗೊಳಿಸುವಿಕೆ ಅಂದರೆ ಜೀವನದ ವಿವಿಧ ಹಂತಗಳಲ್ಲಿ ಉಳಿತಾಯ ಮತ್ತು ವೆಚ್ಚಗಳ ನಡುವಿನ ಸೂಕ್ತ ಸಮಸ್ಥಿತಿಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಜೀವನ ಮಟ್ಟವನ್ನು ಅತ್ಯುತ್ತಮಗೊಳಿಸುವುದು. ಎರಡನೆಯದು ವಿಮೆ ವ್ಯದಾಪ್ಯದಲ್ಲಿ ಅನಿವಾರ್ಯವಾಗಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿರುತ್ತದೆ.
5. ಸರ್ಕಾರಿ ಸೇವೆಗೆ ಸೇರುವ ನೌಕರನು ಸಾಮಾನ್ಯವಾಗಿ 60 ವರ್ಷಗಳ ವಯಸ್ಸನ್ನು ತಲುಪಿದಾಗ ನಿವೃತ್ತಿಯಾಗುವನು. ಕರ್ನಾಟಕ ನಾಗರಿಕ ಸೇವಾ ನಿಯಮಗಳ (ಕೆಸಿಎಸ್‌ಆರ್) ಪ್ರಕಾರ ಆತ ಅಥವಾ ಆಕೆಯು ಪಡೆದ ಅಂತಿಮ ಮೂಲ ವೇತನ ಮತ್ತು ಸಲ್ಲಿಸಿದ ಒಟ್ಟು ಅರ್ಹತಾದಾಯಕ ಸೇವೆಯನ್ನು ಆಧರಿಸಿ ನಿಗದಿಪಡಿಸಿದ ನಿವೃತ್ತಿ ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ. ನಿವೃತ್ತಿಯಾದ ನೌಕರನ ಮರಣದ ನಂತರ ಆತ/ಆಕೆಯ ಪತಿ/ಪತ್ನಿ/ಕಾನೂನು ರೀತ್ಯಾ ವಾರಸುದಾರರು ಕುಟುಂಬ ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
6. ಪ್ರಸ್ತುತ, ರಾಜ್ಯ ಸರ್ಕಾರಿ ನೌಕರರಿಗಾಗಿ ಕರ್ನಾಟಕದಲ್ಲಿ ಎರಡು ಬಗೆಯ ನಿವೃತ್ತಿ ವೇತನ ಪದ್ಧತಿಗಳಿವೆ. ಅವುಗಳೆಂದರೆ:
ನಿಶ್ಚಿತ ಪಿಂಚಣಿ (OPS)
7. ದಿನಾಂಕ:01.04.2006ರ ಪೂರ್ವದಲ್ಲಿ ಸರ್ಕಾರಿ ಸೇವೆಗೆ ಸೇರಿದ ನೌಕರರು ಓಪಿಎಸ್ ವ್ಯಾಪ್ತಿಗೊಳಪಡುತ್ತಾರೆ ಮತ್ತು ಈ ಯೋಜನೆ ಅಡಿಯಲ್ಲಿ ನಿವೃತ್ತಿದಾರರು ಅಂತಿಮ ಮೂಲ ವೇತನದ ಶೇ.50 ರಷ್ಟು ಮತ್ತು ಅನ್ವಯವಾಗುವ ತುಟ್ಟಿ ಭತ್ಯೆ ಸೇರಿದ ಮೊತ್ತದ ನಿವೃತ್ತಿ ವೇತನ ಪಡೆಯಲು ಅರ್ಹರಾಗಿರುತ್ತಾರೆ.
ದಿನಾಂಕ: 31.03.2023ರಲ್ಲಿದ್ದಂತೆ, ರಾಜ್ಯದಲ್ಲಿ ನಿವೃತ್ತಿ ವೇತನದಾರರ ಸಂಖ್ಯೆ 3,17,337 ಮತ್ತು ಕುಟುಂಬ ಪಿಂಚಣಿದಾರರ ಸಂಖ್ಯೆ 1,91,764 ಆಗಿರುತ್ತದೆ. ಜೊತೆಗೆ, ಸ್ಥಳೀಯ ಸಂಸ್ಥೆಗಳಿಂದ ನಿವೃತ್ತರಾದ ಒಟ್ಟು ಪಿಂಚಣಿದಾರರು 8,320 ಮತ್ತು 10,533 ಕುಟುಂಬ ಪಿಂಚಣಿದಾರಿರುತ್ತಾರೆ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS)
8. ಎನ್‌ಪಿಎಸ್. ನಿಶ್ಚಿತ ವಂತಿಗೆಯ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಚಂದಾದಾರರು ತಮ್ಮ ಸೇವಾವಧಿಯಲ್ಲಿ ಮಾಡಿದ ವ್ಯವಸ್ಥಿತ ಉಳಿತಾಯದ ಮೂಲಕ ತಮ್ಮ ಆರ್ಥಿಕ ಭವಿಷ್ಯದ ಬಗ್ಗೆ, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವಾಗುವಂತೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದ್ದು, ದಿನಾಂಕ: 01.04.2006ರ ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರು ಈ ಯೋಜನೆಯಡಿಯಲ್ಲಿ ನಿವೃತ್ತಿ ಸೌಲಭ್ಯಗಳ ವ್ಯಾಪ್ತಿಗೆ ಒಳಪಡುತ್ತಾರೆ. ಈ ಯೋಜನೆಯಡಿಯಲ್ಲಿ, ವೈಯಕ್ತಿಕ ನೌಕರರ ವಂತಿಗೆ (ಮಾಸಿಕ ಮೂಲ ವೇತನದ ಶೇಕಡಾ 10ರಷ್ಟು) ಜೊತೆಗೆ ಉದ್ಯೋಗದಾತರ ವಂತಿಗೆಯನ್ನು (ನೌಕರರ ಮೂಲ ವೇತನದ ಶೇಕಡಾ 14ರಷ್ಟು) ಪಿಂಚಣಿ ನಿಧಿಯಾಗಿ ಸಂಗ್ರಹಿಸಿ ಅದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಅನುಮೋದಿತ ಹೂಡಿಕೆ ಮಾರ್ಗಸೂಚಿಗಳನ್ನಯ ಮತ್ತು ಮಾಡಲಾದಿ Let us
ಅಥವಾ ಆಕೆ ನಿವೃತ್ತಿಯಾಗುವವರೆಗೂ ನೌಕರರ ಖಾತೆಯಲ್ಲಿ ಸಂಗ್ರಹಗೊಳ್ಳುತ್ತದೆ.
9. ವಯೋನಿವೃತ್ತಿ ಸಂದರ್ಭದಲ್ಲಿ ಎನ್‌ಪಿಎಸ್ ನಿಂದ ನಿರ್ಗಮನವಾಗುವ ವೇಳೆ, ಈ ಯೋಜನೆಯಡಿ ಚಂದಾದಾರರು ಸಂಚಿತ ಪಿಂಚಣಿ ಸಂಪತ್ತಿನ ಪೂರ್ಣ ಮೊತ್ತವನ್ನು ಅಥವಾ ಅವರು ಇಚ್ಚಿಸಿದಲ್ಲಿ, ಸಂಚಿತ ಪಿಂಚಣಿ ಸಂಪತ್ತಿನ ಒಂದು ಭಾಗವನ್ನು ಹಿಂಪಡೆದ ನಂತರ ಬಾಕಿ ಉಳಿದ ಮೊತ್ತವನ್ನು ಪಿಎಫ್‌ಆರ್‌ಡಿಎ ಅಥವಾ ಯಾವುದೇ ನಮೂದಿತ ಪಟ್ಟಿಯಲ್ಲಿನ ಜೀವ ವಿಮಾ ಕಂಪನಿಯಿಂದ ಜೀವನ ವರ್ಷಾಸನವನ್ನು ಖರೀದಿ ಮಾಡಲು ಬಳಸಬಹುದು.
10. ದಿನಾಂಕ: 31.03.2023 ರಲ್ಲಿದ್ದಂತೆ. ರಾಜ್ಯದಲ್ಲಿ ಎನ್‌ಪಿಎಸ್ ಯೋಜನೆಯ ವ್ಯಾಪ್ತಿಗೊಳಪಡುವ ಒಟ್ಟು ನೌಕರರ ಸಂಖ್ಯೆ 2,64,008 ಮತ್ತು ಎನ್‌ಪಿಎಸ್ ಯೋಜನೆಯ ಅಡಿಯಲ್ಲಿ ದಾಖಲಾದ ರಾಜ್ಯ ಸ್ನಾಯತ್ತ ಸಂಸ್ಥೆಗಳ (ಸ್ಥಳೀಯ ಸಂಸ್ಥೆಗಳು) ನೌಕರರ ಸಂಖ್ಯೆ 38,953.
ಕನಿಷ್ಠ ಮತ್ತು ಗರಿಷ್ಠ ನಿವೃತ್ತಿ ವೇತನ
11. ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ನೌಕರರಿಗಾಗಿ ಹಿಂದಿನ ವೇತನ ಸಂಸ್ಥೆಗಳು ಶಿಫಾರಸ್ಸು ಮಾಡಿದ ಕನಿಷ್ಠ ಮತ್ತು ಗರಿಷ್ಠ ಪಿಂಚಣಿ/ಕುಟುಂಬ ಪಿಂಚಣಿಗಳ ವಿವರಗಳನ್ನು ಸಂಕಿಪ್ತವಾಗಿ ಈ ಕೆಳಗಿನ ಕೋಷ್ಟಕ 8.1 ರಲ್ಲಿ ನೀಡಲಾಗಿದೆ.