ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೆಲ ದಿನಗಳ ಹಿಂದೆ ವಾರ್ತಾ ಇಲಾಖೆಯ ಜಾಹೀರಾತು ಪರಿಶೀಲನೆಗೆ ಸಮಿತಿಯನ್ನು ರಚಿಸುವಂತೆ ಟಿಪ್ಪಣಿ ಹೊರಡಿಸಿದ್ದರು. ಅವರ ಸೂಚನೆಯಂತೆ ಇದೀಗ ರಾಜ್ಯ ಸರ್ಕಾರದಿಂದ ನೂತನ ಜಾಹೀರಾತು ಪರಿಶೀಲನಾ ಸಮಿತಿಯನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.
ಇಂದು ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೆಸಿಂತ ಅವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಜಾಹೀರಾತು ಪರಿಶೀಲನಾ ಸಮಿತಿಯ ಅಧ್ಯಕ್ಷರನ್ನಾಗಿ ರಮೇಶ್ ಬಾಬು ಅವರನ್ನು ನೇಮಕ ಮಾಡಲಾಗಿದೆ. ಸದಸ್ಯರನ್ನಾಗಿ ಎಂ.ರಾಮಚಂದ್ರಪ್ಪ, ನಹೀದ್ ಅತಾವುಲ್ಲಾ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ವಾರ್ತಾ ಇಲಾಖೆಯ ಆಯುಕ್ತರನ್ನು ನೇಮಿಸಿದೆ.
ಹೀಗಿವೆ ಜಾಹೀರಾತು ಪರಿಶೀನಾ ಸಮಿತಿಯ ಮಾರ್ಗಸೂಚಿಗಳು
- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಿಯಮಿತವಾಗಿ ಬಿಡುಗಡೆಯಾಗಿರುವ ಜಾಹೀರಾತುಗಳು ಯಾವುದೇ ರೀತಿಯದ್ದಾಗಿದ್ದರೂ, ಪ್ರತಿ ತಿಂಗಳಿಗೆ ಒಮ್ಮ ಜಾಹೀರಾತು ಪರಿಶೀಲನಾ ಸಮಿತಿಯು ಸಭೆ ಸೇರಿ ಬಿಡುಗಡೆಯಾಗಿರುವ ಜಾಹೀರಾತುಗಳ ಬಗ್ಗೆ ಪರಿಶೀಲನೆ/ವಿಶ್ಲೇಷಣೆ ನಡೆಸುವುದು.
- ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿರುವ ಜಾಹೀರಾತುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ದಿಶೆಯಲ್ಲಿ ಸಮಿತಿಯು ಸಲಹೆಗಳನ್ನು ನೀಡುವುದು.
- ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಆಧಾರಿತ ಜಾಹೀರಾತುಗಳನ್ನು ಮತ್ತಷ್ಟು ಆಕರ್ಷಕವಾಗಿ ಮತ್ತು ಗಮನ ಸೆಳೆಯುವಂತೆ ರೂಪಿಸುವಲ್ಲಿ ಸಲಹೆಗಳನ್ನು ನೀಡುವುದು.
- ನೀಡಿದ ಜಾಹೀರಾತಿನ ಸಾಧಕ – ಬಾಧಕಗಳನ್ನು ಕುರಿತು ಚರ್ಚಿಸುವುದು.
- ಸರ್ಕಾರದಿಂದ ಬಿಡುಗಡೆಯಾಗುವ ಜಾಹೀರಾತುಗಳು ಗ್ರಾಮೀಣ ಪುದೇಶದ ಜನರಿಗೆ ಪರಿಣಾಮಕಾರಿ ತಲುವುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಮತ್ತು ತಲುವುವಿಕೆಯನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಸಲಹೆಗಳನ್ನು ನೀಡುವುದು. ಸರ್ಕಾರವು ನೀಡಿದ ಜಾಹೀರಾತಿನ ಸಫಲತೆಯನ್ನು ವಿಶ್ಲೇಷಿಸುವುದು.
- ಜಾಹೀರಾತಿಗೆ ಸಂಬಂಧಿಸಿದಂತೆ ಹೊಸ ವಿಧಾನಗಳು ಅದರಲ್ಲೂ ನವ್ಯ ಮಾಧ್ಯಮಗಳಾದ ಡಿಜಿಟಲ್ ಮತ್ತು ಎಐ ಆಧಾರಿತ ಮಾಧ್ಯಮಗಳನ್ನು ಅವಳಡಿಸಿಕೊಳ್ಳುವ ಬಗ್ಗೆ ಸಲಹೆ ನೀಡುವುದು.
- ಹೊರ ರಾಜ್ಯಗಳಲ್ಲಿರುವ ಜಾಹೀರಾತು ನೀತಿ ಮತ್ತು ಅಳವಡಿಸಿಕೊಂಡಿರುವ ಹೊಸ ವಿಧಾನಗಳ ಬಗ್ಗೆ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಅದನ್ನು ಅಳವಡಿಸಿಕೊಳ್ಳುವ ಬಗ್ಗೆ ಸಲಹೆ ನೀಡುವುದು.
- ಸಾಂಪ್ರದಾಯಿಕ ಮಾಧ್ಯಮಗಳಾದ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಪರಿಣಾಮಕಾರಿಯಾಗಿವೆಯೆ ಅಥವಾ ಬದಲಾಗಿರುವ ಪುಸಕ್ತ ವಿದ್ಯಮಾನಗಳಿಗೆ ನವ್ಯ ಮಾಧ್ಯಮಗಳನ್ನು ಅವಳಡಿಸಿಕೊಳ್ಳುವ ಬಗ್ಗೆ ಅಗತ್ಯ ಸಲಹೆಗಳನ್ನು ನೀಡುವುದು.
- ಸಮಿತಿಯು ಕನಿಷ್ಠ ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸುವುದು
- ಯಾವುದೇ ರೀತಿಯ ಜಾಹೀರಾತುಗಳು ಸಮಿತಿಯಿಂದ ಪರಿಶೀಲನೆಗೆ ಒಳಪಡತಕ್ಕದ್ದು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಮುಡಾ ಹಗರಣದ ತನಿಖೆ ‘CBI’ನಿಂದ ಮಾತ್ರ ಸಾಧ್ಯ: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ