ಬೆಂಗಳೂರು: 2019, 2020 ಮತ್ತು 2021ನೇ ಕ್ಯಾಲೆಂಡರ್ ವರ್ಷದ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳನ್ನು ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲು ಪ್ರಶಸ್ತಿ ಆಯ್ಕೆ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದ್ದು, ಕರ್ನಾಟಕ ಚಲನಚಿತ್ರ ನೀತ-2011ರ ಅನ್ವಯ ಪ್ರತಿ ಕ್ಯಾಲೆಂಡರ್ ವರ್ಷದ ರಾಜ್ಯ ಚಲನಚಿತ್ರ ವಾರ್ಷಿಕ ಪ್ರಶಸ್ತಿಗಾಗಿ ಚಲನಚಿತ್ರಗಳನ್ನು ಆಯ್ಕೆ ಮಾಡುವ ಸಲುವಾಗಿ ಅಧ್ಯಕ್ಷರು, ಸದಸ್ಯರು ಹಾಗೂ 9 ಜನರ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು, ನಿರ್ದೇಶಷಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದಿದೆ.
ಇನ್ನುಳಿದಂತೆ 8 ಜನರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಹಾಗೂ ಇನ್ನುಳಿದ 7 ಜನ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಾಗಿರುತ್ತದೆ. ಆದ್ದರಿಂದ 2019, 20 ಮತ್ತು 21ನೇ ಕ್ಯಾಲೆಂಡರ್ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ರಚಿಸಲು ಸಂಭವನೀಯ ಗಣ್ಯರ ಪಟ್ಟಿಯನ್ನು ಸಲ್ಲಿಸುತ್ತಾ, ಆಯ್ಕೆ ಸಮಿತಿಗೆ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದಿದೆ.
ಅಂದಹಾಗೇ 2019ನೇ ಸಾಲಿನ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನಂಜುಂಡೇಗೌಡ, ನಿರ್ದೇಶಕರು, ನಿರ್ಮಾಪಕರನ್ನು ಮಾಡಿದ್ರೇ, ಸದಸ್ಯರನ್ನಾಗಿ ರಾಮನಾಥ ಖುಗ್ವೇದಿ, ನಿರ್ದೇಶಕರು, ಮಳವಳ್ಳಿ ಸಾಯಿಕೃಷ್ಣ, ಸಾಹಿತಿಗಳು, ಸಂಕಲನಾಕಾರ ಬಸವರಾಜ ಅರಸು, ಪತ್ರಕರ್ತ ತುಂಗ ರೇಣುಕಾ, ಚಲನಚಿತ್ರ ನಟಿ ಪೂಜಾಗಾಂಧಿ, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರನ್ನು ನೇಮಿಸಲಾಗಿದೆ.
2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ರಾಷ್ಟ್ರ ಪ್ರಶಸ್ತಿ ಪುಸ್ಕೃತ ನಿರ್ದೇಶಕ ರಾಮದಾಸ ನಾಯ್ಡು ಅವರನ್ನು ನೇಮಿಸಿದೆ. ಸದಸ್ಯರನ್ನಾಗಿ ಪತ್ರಕರ್ತೆ ಪದ್ಮಾ ಶಿವಮೊಗ್ಗ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಉಮೇಶ್ ನಾಯಕ್, ಪ್ರೊಡಕ್ಷನ್ ಮ್ಯಾನೇಜರ್ ಜಗದೀಶ್ ಮಲ್ನಾಡ್, ಹಿರಿಯ ಚಲನಚಿತ್ರ ನಟಿ ಪದ್ಮಾ ವಾಸಂತಿ, ಕ್ಯಾಮೆರಾಮೆನ್ ಮಂಜುನಾಥ್, ಸಿನಿಮಾ ವಿಶ್ಲೇಷಕ ಡಿಸಿಲ್ವ ಅವರನ್ನು ನೇಮಿಸಿದೆ.
2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ ಸದಾಶಿವ ಶಣೈ ಅವರನ್ನು ನೇಮಿಸಿದೆ. ಸದಸ್ಯರನ್ನಾಗಿ ನಿರ್ಮಾಪಕ ಹೆಚ್ ಎ ರೆಹಮಾನ್, ಹಿನ್ನೆಲೆ ಗಾಯಕಿ ಚಂದ್ರಿಕಾ ಗುರುರಾಜ್, ಹಿರಿಯ ನಟ ಜೈ ಜಗದೀಶ್, ರಂಗಭೂಮಿ ನಟಿ ರತ್ನಾ ನಾಗೇಶ್, ಸಾಹಿತಿ ಕೆ ವೈ ನಾರಾಯಣಸ್ವಾಮಿ, ನಿರ್ದೇಶಕ ವೇಮಗಲ್ ಜಗನ್ನಾಥ್ ಅವರನ್ನು ನೇಮಿಸಲಾಗಿದೆ.
‘ಉದ್ಯೋಗಾಕಾಂಕ್ಷಿ’ಗಳ ಗಮನಕ್ಕೆ: ಫೆ.19, 20ರಂದು ರಾಜ್ಯಮಟ್ಟದ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ
BREAKING : ‘CUET PG 2024’ ನೋಂದಣಿ ಗಡುವು ವಿಸ್ತರಣೆ ; ಫೆ.7ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ