ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಜನನ ಮರಣ ನೋಂದಣಿಯನ್ನು ಬಲಪಡಿಸುವ ಸಲುವಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯತಿ ಕಾರ್ಯದರ್ಶಿಗಳನ್ನು ಜನನ ಮರಣಗಳ ಉಪನೋಂದಣಾಧಿಕಾರಿಗಳಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಜನನ ಅಥವಾ ಮರಣ ಘಟಿಸಿದ ಮೂವತ್ತು ದಿನಗಳವರೆಗಿನ ಘಟನೆಗಳನ್ನು ನೋಂದಾಯಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಬದಲಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಿ ತಿದ್ದುಪಡಿ ಮಾಡಲಾಗಿದೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜನನ ಮರಣ ನೊಂದಣಿಯನ್ನು ಸುವ್ಯವಸ್ಥಿತವಾಗಿ ಹಾಗೂ ಉತ್ತಮವಾಗಿ ಅನುಷ್ಠಾನಗೊಳಿಸಲು ಎಲ್ಲಾ ಅವಶ್ಯಕ ಸೌಕರ್ಯ ಹೊಂದಿರುವ ಗ್ರಾಮ ಪಂಚಾಯತಿ ಕಛೇರಿಗಳು ಸಾರ್ವಜನಿಕರಿಗೆ ಹತ್ತಿರವಿರುವ ಜನಸ್ನೇಹಿ ಕೇಂದ್ರವಾಗಿರುತ್ತದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳು ಸೇವಾನಿರತವಾಗಿದ್ದು, ಈಗಾಗಲೇ 72 ಸೇವೆಗಳನ್ನು ಒದಗಿಸುತ್ತಿವೆ.
ಜನನ, ಮರಣ ನೋಂದಣಿಯ 73ನೇ ಸೇವೆಯಾಗಲಿದ್ದು, ಸಾರ್ವಜನಿಕರಿಗೆ ತ್ವರಿತ ಸೇವೆ ದೊರೆಯಲಿದೆ ಇದರಿಂದಾಗಿ ಗ್ರಾಮೀಣ ಭಾಗಗಳಲ್ಲಿ ಶೇಕಡ 100ರಷ್ಟು ಜನನ, ಮರಣ ನೋಂದಣಿಯ ಗುರಿಯನ್ನು ಸಾಧಿಸಲು ಮತ್ತು ಕಾಯ್ದೆಯಲ್ಲಿ ನಿಗದಿಪಡಿಸಿರುವ ಕಾಲಮಿತಿಯೊಳಗೆ ಎಲ್ಲಾ ಜನನ ಮತ್ತು ಮರಣವನ್ನು ನೋಂದಾಯಿಸಲು ಸಾಧ್ಯವಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
BREAKING: ‘ಶಿವಮೊಗ್ಗ ಲೋಕಸಭಾ ಕ್ಷೇತ್ರ’ದಿಂದ ‘ಸ್ವತಂತ್ರ ಅಭ್ಯರ್ಥಿ’ಯಾಗಿ ಸ್ಪರ್ಧೆ – ‘ಕೆಎಸ್ ಈಶ್ವರಪ್ಪ’ ಘೋಷಣೆ
ಬಿಹಾರ ಸಚಿವ ಸಂಪುಟ ವಿಸ್ತರಣೆ : ಮಾಜಿ ಡಿಸಿಎಂ ‘ರೇಣು ದೇವಿ ಸೇರಿ 21 ನಾಯಕ’ರು ‘ನಿತೀಶ್ ಕುಮಾರ್’ ಪಡೆಗೆ ಸೇರ್ಪಡೆ