ಬೆಂಗಳೂರು : ಪದವಿ/ಡಿಪ್ಲೋಮೊ ಪಡೆದ ನಿರುದ್ಯೋಗಿಗಳು ಅಂದರ 180 ದಿನಗಳ ನಂತರವೂ ಉದ್ಯೋಗ ಪಡೆಯದ ನಿರುದ್ಯೋಗಿಗಳಿಂದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು (DITE) ನಿರುದ್ಯೋಗ ಭತ್ಯ ನೀಡಲು ಅರ್ಜಿಗಳನ್ನು ಆಹ್ವಾನಿಸುತ್ತದೆ. 2022 23 ಶೈಕ್ಷಣಿಕ ವರ್ಷದಲ್ಲಿ ಪದವಿ/ಡಿಪ್ಲೋಮೊ ಪಡೆದ ವಿದ್ಯಾರ್ಥಿಗಳು (ಅಂದರೆ, 2023ನೇ ವರ್ಷದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು ಯುವನಿಧಿ ಯೋಜನಗೆ ನೋಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ.
a) ಅನರ್ಹತಗಳು:
1. ಸರ್ಕಾರಿ / ಸರ್ಕಾರಿ ಅನುದಾನಿತ ಸಂಸ್ಥೆ/ ಖಾಸಗಿ ವಲಯಗಳಲ್ಲಿ ಉದ್ಯೋಗದಲ್ಲಿರುವ ಅಭ್ಯರ್ಥಿಗಳು, II. ಸ್ವಯಂ ಉದ್ಯೋಗಿಗಳಾಗಿರುವ ಅಭ್ಯರ್ಥಿಗಳು,
III. ವಿದ್ಯಾಭ್ಯಾಸವನ್ನು ಮುಂದುವರೆಸುವ ಅಭ್ಯರ್ಥಿಗಳು,
2023 ರಲ್ಲಿ ಪದವಿ/ ಡಿಪ್ಲೋಮಾ ತೇರ್ಗಡೆಯಾದ ನಂತರ ಕನಿಷ್ಠ 6 ತಿಂಗಳವರೆಗೆ ಉದ್ಯೋಗವನ್ನು ಪಡೆಯದ ಮತ್ತು ಕರ್ನಾಟಕದಲ್ಲಿ ವಾಸವಿದ್ದು ವಿದ್ಯಾರ್ಥಿಯಾಗಿರುವ ಕನ್ನಡಿಗರಿಗೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ.
ಎ) ವಾಸವಿರುವ ವಿದ್ಯಾರ್ಥಿ ಎಂದರೆ ಕರ್ನಾಟಕದಲ್ಲಿ ಕನಿಷ, 6 ವರ್ಷಗಳವರೆಗೆ ಪದವಿ | ಡಿಪ್ಲೊಮಾದವರೆಗೆ ಅಧ್ಯಯನ ಮಾಡಿದವರು. 6 ವರ್ಷಗಳ ವಾಸವಿರುವುದನ್ನು ಈ ಕೆಳಗಿನಂತೆ ಪರಿಶೀಲಿಸಲಾಗುತ್ತದೆ:
1. ಎಸ್ಎಸ್ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಪದವಿ ಪಮಾಣ ಪತ್ರ/ಅಂಕಪಟ್ಟಿಗಳು ಅಥವಾ
ii. ಎಸ್ಎಸ್ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಮತ್ತು ಡಿಪ್ಲೋಮಾ ಪುಮಾಣ ಪತ್ರ ಅಥವಾ ಅಂಕಪಟ್ಟಿ, ಅಥವಾ
iii. ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನೋಂದಣಿ ಸಂಖ್ಯೆ ಮತ್ತು ಪದವಿ ಪ್ರಮಾಣಪತ್ರ ಅಥವಾ
iv. ಪಡಿತರ ಚೀಟಿ ನೀಡಿದ ದಿನಾಂಕ ಮತ್ತು ಪದವಿ ಪುಮಾಣ ಪತ್ರ
v. NIOS (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್) ನೀಡಿದ S.SLC ಅಂಕಪಟ್ಟಿಯನ್ನು ಸಹ ವಾಸಸ್ಥಳ ಪರಿಶೀಲನಗಾಗಿ ಪರಿಗಣಿಸುವುದು.
ಪದವಿ ಅಥವಾ ಡಿಪ್ಲೋಮಾ ಪುಮಾಣ ಪತ್ರ
i. ಅಭ್ಯರ್ಥಿಯ ವದವಿ / ಡಿಪ್ಲೋಮಾ ಹೊಂದಿರುವ ಸ್ಥಿತಿಯ ಬಗ್ಗೆ ಪರಿಶೀಲಿಸಲು National Academic Depository (NAD) ಯಲ್ಲಿ ಅಪ್ಲೋಡ್ ಮಾಡಲಾದ ಅಭ್ಯರ್ಥಿಗಳ ಪದವಿ/ಡಿಪ್ಲೋಮೊ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪದವಿ/ಡಿಪ್ಲೊಮೊ ಪುಮಾಣ ಪತ್ರಗಳನ್ನು ಪರಿಗಣಿಸಲಾಗುವುದು
ii. ಫಲಿತಾಂಶಗಳ ಪ್ರಕಟಣೆಯ ದಿನಾಂಕದಿಂದ ಒಂದು ವಾರದೊಳಗೆ ವಿದ್ಯಾರ್ಥಿಗಳ ಪದವಿ/ಡಿಪ್ಲೋಮೊ ಪಮಾಣ ಪತ್ರಗಳು ಅಥವಾ ತಾತ್ಕಾಲಿಕ ಪದವಿ/ಡಿಪ್ಲೊಮೊ ಪಮಾಣ ಪತ್ರಗಳು NAD, ನಲ್ಲಿ ಅಪ್ ಮಾಡಲಾಗಿರುವುದನ್ನು ವಿಶ್ವವಿದ್ಯಾಲಯಗಳು ಮತ್ತು ಮಂಡಳಿಗಳು ಖಚಿಪಡಿಸಿಕೊಳ್ಳತಕ್ಕದ್ದು,
iii. ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ಮೊದಲು ಡಿಜಿಲಾಕರ್ನಲ್ಲಿ ಡಿಜಿಲಾಕರ್ ಖಾತೆಯನ್ನು ಸೃಜಿಸುವ ಮೂಲಕ ತಮ್ಮ NAD ಪ್ರಮಾಣ ಪತ್ರವನ್ನು ಪಡೆದಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು,
ಇಲಾಖೆ ರವರಿಗೆ ರಾಜ್ಯ ಮಟ್ಟದ ಡಿಡಿಓ ಆದ ಆಯುಕ್ತರು, ಕೈಗಾರಿಕಾ 8 ಮತ್ತು ಉದ್ಯೋಗ ಇಲಾಖೆ ರವರು ಅನುದಾನವನ್ನು ಬಿಡುಗಡೆಗೊಳಿಸುವುದು. ರಾಜ್ಯ ಮಟ್ಟದ ಡಿಡಿಓಗಳು ಡಿಬಿಟಿ ಮಾಡಲು ರಾಜ್ಯ ಡಿಬಿಟಿ ಪೋರ್ಟಲ್ ಮೂಲಕ ಖಜಾನ 2ಗ ಪಾವತಿ ಸೂಚನೆಗಳನ್ನು ಸಲ್ಲಿಸುವುದು.
ಜಿಲ್ಲಾ ಉದ್ಯೋಗ ಅಧಿಕಾರಿಗಳಿಂದ ಮಾಡಬೇಕಾದ ಪರಿಶೀಲನೆಗಳು:
ಎಲ್ಲಾ ಜಿಲ್ಲಾ ಉದ್ಯೋಗ ಅಧಿಕಾರಿಗಳು ಯಾದೃಚ್ಛಿಕ (Random) ಆಧಾರದ ಮೇಲೆ ಒಟ್ಟು ಯುವನಿಧಿ ಫಲಾನುಭವಿಗಳ 5% – 10% ಅನ್ನು ಪರಿಶೀಲಿಸಬೇಕು. ಪರಿಶೀಲನೆಯ ನಂತರ, ಯಾವುದೇ ಅನರ್ಹ ಫಲಾನುಭವಿಗಳು ಕಂಡುಬಂದರೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರಿಗೆ ವರದಿ ಮಾಡುವುದು.









