ಬೆಂಗಳೂರು: ಇದೇ ಜನವರಿ.30ರಂದು ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆಯನ್ನು ನಿಗದಿ ಪಡಿಸಲಾಗಿದೆ. ಈ ಸಂಪುಟ ಸಭೆಯಲ್ಲೇ ಜಾತಿಗಣತಿ ವರದಿಯನ್ನು ಮಂಡನೆ ಮಾಡಲಾಗುತ್ತಿದ್ದು, ಆ ಬಳಿಕ ಜಾರಿಯ ನಿರ್ಧಾರವನ್ನು ಸರ್ಕಾರ ಪ್ರಕಟಿಸಲಿದೆ.
ಕಳೆದ ರಾಜ್ಯ ಸಚಿವ ಸಂಪುಟ ಸಭೆಯ ನಂತ್ರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿಯ ಕುರಿತಂತೆ ಚರ್ಚಿಸುವುದಾಗಿ ತಿಳಿಸಿದ್ದರು. ಆ ಕಾಲ ಕೂಡಿ ಬಂದಿದೆ. ಜನವರಿ 30, 2025ರಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದೆ.
ದಿನಾಂಕ 30-01-2025ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಸಚಿವ ಸಂಪುಟದ 2025ನೇ ಸಾಲಿನ 3ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ. ಈ ಸಚಿವ ಸಂಪುಟ ಸಭೆ ಮಹತ್ವದ್ದಾಗಿದ್ದು, ಹಲವು ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ.
ಭ್ರಷ್ಟಾಚಾರ ಮರೆಮಾಚಲು ಜಾತಿಗಣತಿ ಮುನ್ನಲೆಗೆ: ಮಾಜಿ ಶಾಸಕ ರಾಜಕುಮಾರ ಪಾಟೀಲ್ ಕಿಡಿ
ಟ್ರಂಪ್ ಹೊಸ ಕ್ರಿಪ್ಟೋಕರೆನ್ಸಿಯ ನಂತರ ಮೆಲಾನಿಯಾ ಮೆಮೆ ನಾಣ್ಯ ಬಿಡುಗಡೆ | Melania Meme Coin
ನೀವು ‘ತೊದಲುವಿಕೆ ಸಮಸ್ಯೆ’ಯಿಂದ ಬಳಲುತ್ತಿದ್ದೀರಾ.? ಈ ಉಚಿತ ಕಾರ್ಯಾಗಾಲದಲ್ಲಿ ಭಾಗವಹಿಸಿ, ತೊಂದ್ರೆ ಕ್ಲಿಯರ್