ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಜನವರಿ.5ರಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯನ್ನು ನಿಗದಿ ಪಡಿಸಲಾಗಿದೆ.
ಈ ಕುರಿತಂತೆ ಸಚಿವ ಸಂಪುಟದ ಸರ್ಕಾರದ ಜಂಟಿ ಕಾರ್ಯದರ್ಶಿ ಆರ್.ಚಂದ್ರಶೇಖರ್ ಮಾಹಿತಿ ನೀಡಿದ್ದು, ದಿನಾಂಕ 05-01-2024ರ ಶುಕ್ರವಾರ ಸಂಜೆ 4 ಘಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ನಿಗದಿ ಪಡಿಸಿರೋದಾಗಿ ತಿಳಿಸಿದ್ದಾರೆ.
ದಿನಾಂಕ 05-01-2024ರಂದು ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯ 2024ನೇ ಸಾಲಿನ 1ನೇ ಸಭೆಯನ್ನು ಕರೆಯಲಾಗಿದೆ ಅಂತ ಹೇಳಿದ್ದಾರೆ.
ಜ.5ರಂದು ನಡೆಯಲಿರುವಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಚಾರಗಳ ಕುರಿತಂತೆ ಚರ್ಚೆ ನಡೆದು, ರಾಜ್ಯದ ಅಭಿವೃದ್ಧಿ ಕಾಮಗಾರಿ, ಯೋಜನೆಗಳಿಗೆ ಅನುದಾನ ಒದಗಿಸೋ ನಿರ್ಣಯವನ್ನು ಕೈಗೊಳ್ಳಲಾಗುತ್ತಿದೆ.
ರೈಲು ಅಪಘಾತಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮ: ಕೇಂದ್ರದಿಂದ ವಿವರಗಳನ್ನು ಕೋರಿದ ಸುಪ್ರೀಂ ಕೋರ್ಟ್